
ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನ ಸಭಾ ಮತಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಬಗ್ಗೆ ದೆಹಲಿಯಲ್ಲಿಂದು ಪ್ರತಿಕ್ರಿಯಿಸಿದ ಕರ್ನಾಟಕದ ಸೋಸದ ಮತ್ತು ಕೇಂದ್ರದಲ್ಲಿ ಕಲ್ಲಿದ್ದಲು ಮತ್ತು ಸಂಸದೇಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ್ ಜೋಷಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಎಲ್ಲೂ ಕಡಿಮೆ ಆಗಿಲ್ಲ ಎಂದು ಹೇಳಿದರು.
‘‘ಮೋದಿ ಅಲೆ ಎಲ್ಲಿದೆಯೆಂದು ಸಿದ್ದರಾಮಯ್ಯ ಕೇಳಿದ್ದರು. ಪ್ರಾಯಶಃ ಅವರಿಗೆ ಅದೆಲ್ಲಿದೆ ಅಂತ ಈಗ ಗೊತ್ತಾಗಿರಬೇಕು, ದೇಶ ಸಂಕಷ್ಟದಲ್ಲಿದ್ದಾಗ ಮೋದಿ ಸರ್ಕಾರದ ವಿರುಧ್ಧ ಬರೀ ಟೀಕೆಗಳನ್ನು ಮಾಡಲಾಯಿತು. ಆದರೆ ಮತದಾರರು ಸ್ಪಷ್ಟ ಜನಾದೇಶ ನೀಡಿ, ಮೋದಿ ಅವರು ಮಾಡಿರುವ ಮತ್ತು ಮಾಡುತ್ತಿರುವ ಕೆಲಸ ತಮಗೆ ಮೆಚ್ಚಿಗೆಯಾಗಿರುವುದನ್ನು ಸಾಬೀತು ಮಾಡಿದ್ದಾರೆ. ರಾಜ್ಯದ ಜನತೆ ಸಹ ಬಿಎಸ್ ಯಡಿಯೂರಪ್ಪನವರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ’’ ಎಂದು ಜೋಷಿ ಹೇಳಿದರು.
ದೇಶದೆಲ್ಲೆಡೆ ಮೋದಿ ಗಾಳಿ ಬೀಸುತ್ತಿದೆ ಎನ್ನುವುದನ್ನು ಒತ್ತಿ ಹೇಳಿದ ಸಚಿವರು, ಪಶ್ಚಿಮ ಬಂಗಾಳದಲ್ಲೂ ಈ ಬಾರಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆಯೆಂದು ಭವಿಷ್ಯ ನುಡಿದರು.