ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ -ಲವ್ ಜಿಹಾದ್ಗೆ ಸಿದ್ದರಾಮಯ್ಯ ಕೌಂಟರ್
ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ. ಈಗ ಲವ್ ಜಿಹಾದ್ ಕಾಯ್ದೆ ತರುತ್ತೇವೆ ಎಂದು ಹೇಳ್ತಿದ್ದಾರೆ. ಇದೊಂದು ಮೂರ್ಖತನದ ಚಿಂತನೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ನನಗೆ ಹಿಂದಿ ಬರುವಂತಿದ್ದರೆ ನಾನ್ಯಾಕೆ ಇಲ್ಲಿ ಇರುತ್ತಿದ್ದೆ? ಹಿಂದಿ ಬರುವಂತಿದ್ದರೆ ಯಾವಾಗಲೋ ದೆಹಲಿಗೆ ಹೋಗ್ತಿದ್ದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಗೆ ಚಟಾಕಿ ಹಾರಿಸಿದ್ದಾರೆ. ನೀವು AICC ಅಧ್ಯಕ್ಷ ಹುದ್ದೆ ಆಕಾಂಕ್ಷಿಯಾ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಕೌಂಟರ್ ಕೊಟ್ಟ ಪರಿ ಹೀಗೆ!
ನನಗೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಕೊಡ್ತೇವೆ ಅಂದ್ರು. ನನಗೆ ಹಿಂದಿ ಬಾರದಿರುವುದರಿಂದ ಹೋಗೋಕೆ ಒಪ್ಪಲಿಲ್ಲ. ನನ್ನದು ಕರ್ನಾಟಕ ಕರ್ನಾಟಕ ಕರ್ನಾಟಕ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.
‘ಹಸು ಮುದಿಯಾದಾಗ, ಗೊಡ್ಡಾದಾಗ ಏನು ಮಾಡಬೇಕು?’ ಹಸು ಮುದಿಯಾದಾಗ, ಗೊಡ್ಡಾದಾಗ ಏನು ಮಾಡಬೇಕು. RSSನವರು ಅದನ್ನು ಮನೆಗೆ ತೆಗೆದುಕೊಂಡು ಹೋಗ್ತಾರಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಾಲು, ಬೆಣ್ಣೆಯನ್ನು ತಿಂದವರು RSSನವರು. ರೈತರು ಮಾತ್ರ ಸಗಣಿ ಹೊತ್ತುಕೊಂಡೇ ಇರಬೇಕಾ? ಎಂದು ಪ್ರಶ್ನಿಸಿದರು.
ನಾನು ಸಗಣಿಯನ್ನೂ ಎತ್ತಿದ್ದೇನೆ, ಗಂಜಲ ಬಾಚಿದ್ದೇನೆ. ಇವರು ಯಾವತ್ತಾದ್ರೂ ಸಗಣಿಯನ್ನು ಎತ್ತಿದ್ದಾರಾ?ಗೋಪೂಜೆ ಅಂತಾರೆ, ಆದ್ರೆ ಅದಕ್ಕೆ ಹುಲ್ಲನ್ನ ಹಾಕಿದ್ದಾರಾ? ಹುಚ್ಚರ ಸಂತೆಯಲ್ಲಿ ಉಂಡವನೇ ಜಾಣ ಅನ್ನುವಂತಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
‘ಈ ದೇಶ ಮುಸಲ್ಮಾನರಿಗೆ ಸೇರಿಲ್ವಾ?’ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಮುಸ್ಲಿಮರಿಗೆ ಟಿಕೆಟ್ ಕೊಡಲ್ಲವೆಂದಿದ್ದ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಸಚಿವ ಕೆ.ಎಸ್.ಈಶ್ವರಪ್ಪಗೆ ಸಂವಿಧಾನ ಓದಲು ಹೇಳಿ. ಈ ದೇಶ ಮುಸಲ್ಮಾನರಿಗೆ ಸೇರಿಲ್ವಾ? ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಓದುವುದೂ ಇಲ್ಲ, ಬರೆಯುವುದೂ ಇಲ್ಲ. RSSನವರು ಹೇಳಿದಂತೆ ಬಂದು ಮಾತಾಡ್ತಾರಷ್ಟೇ. ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
‘ಲವ್ ಜಿಹಾದ್ ಕಾಯ್ದೆ ತರುತ್ತೇವೆಂಬುದು ಮೂರ್ಖತನ’ ಲವ್ ಜಿಹಾದ್ ಕಾಯ್ದೆ ತರುತ್ತೇವೆಂಬುದು ಮೂರ್ಖತನ. ಇದೊಂದು ಮೂರ್ಖತನದ ಚಿಂತನೆ ಎಂದ ಸಿದ್ದರಾಮಯ್ಯ ಬಿಜೆಪಿಯವರು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾರೆ. ಹಿಂದೂ-ಮುಸ್ಲಿಮರು ಮದುವೆಯಾಗಬಾರದು ಅಂತಾರೆ. ಮುಸ್ಲಿಮರು 600 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದಾರೆ. ಆಗ ಸಾಕಷ್ಟು ಸಂಬಂಧಗಳು ಬೆಳೆದುಬಿಟ್ಟಿವೆ ಎಂದು ಹೇಳಿದರು.
ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ. ಈಗ ಲವ್ ಜಿಹಾದ್ ಕಾಯ್ದೆ ತರುತ್ತೇವೆ ಎಂದು ಹೇಳ್ತಿದ್ದಾರೆ. ಇದೊಂದು ಮೂರ್ಖತನದ ಚಿಂತನೆ ಎಂದು ಸಿದ್ದರಾಮಯ್ಯ ಹೇಳಿದರು. KPCCಯಲ್ಲಿ.. ಸಿದ್ದು, ಡಿಕೆಶಿಗೆ ಪರ್ಯಾಯವಾಗಿ.. ಸದ್ದಿಲ್ಲದೆ ರೆಡಿಯಾಯ್ತು ‘ಥರ್ಡ್ ಫ್ರಂಟ್’ ‘ಸಂತೋಷ್ ನನ್ನ ಒಳ್ಳೇತನವನ್ನ ಗುರುತಿಸಿದ್ದಾರೆ, ಡಿಕೆಶಿ ಮತ್ತು ಎಲ್ರಿಗೂ ಒಳ್ಳೇದಾದ್ರೆ ಕಲಿಯಲಿ, ತಪ್ಪೇನಿದೆ?’
Published On - 3:05 pm, Tue, 1 December 20



