ಅಮೆರಿಕ ಜನತೆ ಮೋದಿ ಮುಖ ನೋಡಿ ವೋಟ್​ ಹಾಕ್ತಾರಾ? -ಸಿದ್ದರಾಮಯ್ಯ ಪ್ರಶ್ನೆ

| Updated By: ಸಾಧು ಶ್ರೀನಾಥ್​

Updated on: Nov 04, 2020 | 4:41 PM

ಮೈಸೂರು: ಅಮೆರಿಕ ಚುನಾವಣೆಯಲ್ಲಿ ಮೋದಿ ಹೆಸರು ನಡೆಯುವುದಿಲ್ಲ. ಅಮೆರಿಕ ಜನತೆ ಮೋದಿ ಮುಖ ನೋಡಿ ವೋಟ್​ ಹಾಕ್ತಾರಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೋಳಿಕೊಂಡು ಮತ ಕೇಳಿದ್ದರು. ಅಮೆರಿಕ ಚುನಾವಣೆಯೇ ಬೇರೆ. NRIಗಳು ಮೋದಿ ಮುಖನೋಡಿ ಟ್ರಂಪ್​ಗೆ ಮತ​ ಕೊಡಲ್ಲ. ಮೋದಿ ವಿರುದ್ಧ ಭಾರತದಲ್ಲೇ ಜನಾಭಿಪ್ರಾಯ ಶುರುವಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಮೋದಿ ಹಾಳು ಮಾಡಿದ್ದಾರೆ. ಮೋದಿ ಆಡಳಿತದಲ್ಲಿ ಜಿಡಿಪಿ ದರ ಪಾತಾಳಕ್ಕೆ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು. ಮೋದಿ […]

ಅಮೆರಿಕ ಜನತೆ ಮೋದಿ ಮುಖ ನೋಡಿ ವೋಟ್​ ಹಾಕ್ತಾರಾ? -ಸಿದ್ದರಾಮಯ್ಯ ಪ್ರಶ್ನೆ
Follow us on

ಮೈಸೂರು: ಅಮೆರಿಕ ಚುನಾವಣೆಯಲ್ಲಿ ಮೋದಿ ಹೆಸರು ನಡೆಯುವುದಿಲ್ಲ. ಅಮೆರಿಕ ಜನತೆ ಮೋದಿ ಮುಖ ನೋಡಿ ವೋಟ್​ ಹಾಕ್ತಾರಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೋಳಿಕೊಂಡು ಮತ ಕೇಳಿದ್ದರು. ಅಮೆರಿಕ ಚುನಾವಣೆಯೇ ಬೇರೆ.

NRIಗಳು ಮೋದಿ ಮುಖನೋಡಿ ಟ್ರಂಪ್​ಗೆ ಮತ​ ಕೊಡಲ್ಲ. ಮೋದಿ ವಿರುದ್ಧ ಭಾರತದಲ್ಲೇ ಜನಾಭಿಪ್ರಾಯ ಶುರುವಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಮೋದಿ ಹಾಳು ಮಾಡಿದ್ದಾರೆ. ಮೋದಿ ಆಡಳಿತದಲ್ಲಿ ಜಿಡಿಪಿ ದರ ಪಾತಾಳಕ್ಕೆ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ವಿರುದ್ಧ ಯುವ ಸಮೂಹ ಸಿಟ್ಟು ಹೊರಹಾಕುತ್ತಿದ್ದಾರೆ. ಬಿಹಾರದಲ್ಲಿ ಪ್ರಚಾರ ವೇಳೆ ನಿತೀಶ್ ಮೇಲೆ ಈರುಳ್ಳಿ ಎಸೆದರು. ಇಂತಹ ಸಂದರ್ಭದಲ್ಲಿ ಮೋದಿ ಹೆಸರು ಬಳಕೆಯಾಗುವುದಿಲ್ಲ. ಯಾವುದೇ ಚುನಾವಣೆಯಲ್ಲಿ ಮೋದಿ ಹೆಸರು ಬಳಕೆಯಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.