ಯಡಿಯೂರಪ್ಪ ಹಳೆಯ ಕೇಸ್​ಗಳನ್ನು ಕೆದಕಲಾ.. ಅಂತ್ಯಾಕೆ ಸಿಟ್ಟಾದ್ರು ಸಿದ್ರಾಮಯ್ಯ?

ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದಲ್ಲಾಗಿದೆ ಎನ್ನಲಾದ ಭ್ರಷ್ಟಾಚಾರಗಳ ಬಗ್ಗೆ ಇತ್ತೀಚೆಗೆ ಪದೇ ಪದೆ ಪ್ರಸ್ತಾಪಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ತಿರುಗೇಟು ನೀಡಲು ಅವರ ಹಳೆಯ ಹ್ಯೂಬ್ಲೋ ವಾಚ್ ಪ್ರಕರಣ ಟಿಕ್ ಟಿಕ್ ಅನ್ನತೊಡಗಿದೆ. ಈ ಬಗ್ಗೆ ಮೈಸೂರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹ್ಯೂಬ್ಲೋ ವಾಚ್ ವಿವಾದ‌ ಮುಗಿದು ಹೋದ ಕಥೆ, ಮತ್ಯಾಕೆ ಅದು? ನಾನು ಯಡಿಯೂರಪ್ಪರ ಹಳೆಯ ಕೇಸ್ ಬಗ್ಗೆ ಮಾತಾಡ್ಲಾ? ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. Loading... […]

ಯಡಿಯೂರಪ್ಪ ಹಳೆಯ ಕೇಸ್​ಗಳನ್ನು ಕೆದಕಲಾ.. ಅಂತ್ಯಾಕೆ ಸಿಟ್ಟಾದ್ರು ಸಿದ್ರಾಮಯ್ಯ?
Guru Edited By: ಸಾಧು ಶ್ರೀನಾಥ್​

Updated on: Aug 01, 2020 | 2:07 PM

ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದಲ್ಲಾಗಿದೆ ಎನ್ನಲಾದ ಭ್ರಷ್ಟಾಚಾರಗಳ ಬಗ್ಗೆ ಇತ್ತೀಚೆಗೆ ಪದೇ ಪದೆ ಪ್ರಸ್ತಾಪಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ತಿರುಗೇಟು ನೀಡಲು ಅವರ ಹಳೆಯ ಹ್ಯೂಬ್ಲೋ ವಾಚ್ ಪ್ರಕರಣ ಟಿಕ್ ಟಿಕ್ ಅನ್ನತೊಡಗಿದೆ.

ಈ ಬಗ್ಗೆ ಮೈಸೂರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹ್ಯೂಬ್ಲೋ ವಾಚ್ ವಿವಾದ‌ ಮುಗಿದು ಹೋದ ಕಥೆ, ಮತ್ಯಾಕೆ ಅದು? ನಾನು ಯಡಿಯೂರಪ್ಪರ ಹಳೆಯ ಕೇಸ್ ಬಗ್ಗೆ ಮಾತಾಡ್ಲಾ? ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Loading...

ವಾಚ್ ವಿಚಾರ ಮುಗಿದು ಹೋಗಿದೆ. ನಾನು ಸರ್ಕಾರಕ್ಕೆ ಆ ವಾಚ್ ವಾಪಸ್ಸು ಕೊಟ್ಟಿದ್ದೇನೆ. ಎಸಿಬಿ ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕಿದೆ. ನಾನೇನು ವಾಚ್ ಸರ್ಕಾರದ ದುಡ್ಡಿನಿಂದ ತೆಗೆದುಕೊಂಡಿದ್ನಾ ? ಸರ್ಕಾರದಿಂದ ಲೂಟಿ ಮಾಡಿದ ದುಡ್ದಿನಿಂದ ವಾಚ್ ಖರೀದಿಸಿದ್ನಾ ? ಅದನ್ನ ಯಾರೋ ಕೊಟ್ಟಿದ್ರು ಅದಕ್ಕೆ ಅವರು ಅಫಿಡೇವಿಟ್ ಕೊಟ್ಟಿದ್ದಾರೆ. ಈಗ ಅದನ್ನ ಮತ್ಯಾಕೆ ತೆಗೆದಿದ್ದಾರೆ? ಇದು ಜನರನ್ನ ದಾರಿ ತಪ್ಪಿಸುವ ಕೆಲಸ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಖಾರಾವಾಗಿ ಪ್ರತಿಕ್ರಿಯಿಸಿದ್ದಾರೆ.

Published On - 1:43 pm, Sat, 1 August 20

Guru
Loading...
Unable to load recommendations.
Follow Us