AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮವರೇ ಕೆಲವರಿಗೆ ನಾನು ಮತ್ತೆ CM ಆಗೋದು ಬೇಕಿರಲಿಲ್ಲ..ಸಹಿಸದೇ ನನ್ನನ್ನ ಸೋಲುವಂತೆ ಮಾಡಿದ್ರು’

ನಮ್ಮವರೇ ಕೆಲವರಿಗೆ ನಾನು ಮತ್ತೆ ಸಿಎಂ ಆಗೋದು ಬೇಕಿರಲಿಲ್ಲ. ನಮ್ಮವರೇ ಕೆಲವರು ಸಹಿಸದೇ ನನ್ನನ್ನ ಸೋಲುವಂತೆ ಮಾಡಿದ್ರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು. ನನ್ನನ್ನು ಸೋಲಿಸುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದರು.

‘ನಮ್ಮವರೇ ಕೆಲವರಿಗೆ ನಾನು ಮತ್ತೆ CM ಆಗೋದು ಬೇಕಿರಲಿಲ್ಲ..ಸಹಿಸದೇ ನನ್ನನ್ನ ಸೋಲುವಂತೆ ಮಾಡಿದ್ರು’
ವಿಪಕ್ಷ ನಾಯಕ ಸಿದ್ದರಾಮಯ್ಯ
KUSHAL V
|

Updated on:Dec 18, 2020 | 5:47 PM

Share

ಮೈಸೂರು: ನನ್ನನ್ನು ಸೋಲಿಸುವುದಕ್ಕೆ ಕಾರಣ ಹೇಳಿ. ನನ್ನನ್ನು ಸೋಲಿಸುವುದಕ್ಕೆ ನಾಲ್ಕು ಕಾರಣಗಳನ್ನು ಕೊಡಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೋವಿನಿಂದ ಕೇಳಿದರು. ನನ್ನ ವಿರುದ್ಧ ಅಭ್ಯರ್ಥಿಗಳ 4 ಪ್ಲಸ್​ ಪಾಯಿಂಟ್​ ಕೊಡಿ. ಇಷ್ಟೆಲ್ಲ ಮಾಡಿದ್ದಕ್ಕೆ ಸೋಲಿಸೋದಾ ನನ್ನನ್ನ? ಎಂದು ಪ್ರಶ್ನಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಬಗ್ಗೆ ಮತ್ತೆ ಮತ್ತೆ ನೆನಪಾಗುತ್ತದೆ. ನನ್ನ ಸೋಲಿಗೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್‌ನವರೂ ಕಾರಣ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ತಮ್ಮ ಸೋಲಿಗೆ ಕಾರಣ ಹೇಳಿದರು. ಕ್ಷೇತ್ರದಲ್ಲಿ ಕೆಟ್ಟದಾಗಿ ಸೋಲುತ್ತೇನೆಂದು ಅಂದುಕೊಂಡಿರಲಿಲ್ಲ. ರಾಜಕೀಯವಾಗಿ ಪುನರ್ಜನ್ಮ ನೀಡಿದ್ದು ಚಾಮುಂಡೇಶ್ವರಿ ಕ್ಷೇತ್ರ. ಅದೇ ರೀತಿ ರಾಜಕೀಯವಾಗಿ ವೇದನೆ ಕೊಟ್ಟ ಕ್ಷೇತ್ರವೂ ಇದೇ ಎಂದು ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.

‘ನಮ್ಮವರೇ ಕೆಲವರಿಗೆ ನಾನು ಮತ್ತೆ ಸಿಎಂ ಆಗೋದು ಬೇಕಿರಲಿಲ್ಲ’ ನನ್ನ ಸೋಲಿಗೆ ಅನೇಕ ಕಾರಣಗಳಿವೆ, ಅದನ್ನು ಈಗ ಹೇಳಲ್ಲ. ನಮ್ಮವರೇ ಕೆಲವರಿಗೆ ನಾನು ಮತ್ತೆ ಸಿಎಂ ಆಗೋದು ಬೇಕಿರಲಿಲ್ಲ. ನಮ್ಮವರೇ ಕೆಲವರು ಸಹಿಸದೇ ನನ್ನನ್ನ ಸೋಲುವಂತೆ ಮಾಡಿದ್ರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು. ನನ್ನನ್ನು ಸೋಲಿಸುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದರು. ಕಾಂಗ್ರೆಸ್‌ಗೆ ದ್ರೋಹ ಮಾಡಿದವರು ಪಕ್ಷವನ್ನ ಬಿಟ್ಟು ಹೋಗಲಿ. ಆತ್ಮಾವಲೋಕನ ಮಾಡಿಕೊಂಡು ಅವರೇ ಪಕ್ಷ ಬಿಟ್ಟುಹೋಗಲಿ. ಪಕ್ಷದಲ್ಲಿ ಉಳಿದುಕೊಳ್ಳಿಯೆಂದು ಯಾರೂ ಒತ್ತಾಯ ಮಾಡಿಲ್ಲ. ಕ್ಷುಲ್ಲಕ ಕಾರಣಗಳಿಗೆ ಪಕ್ಷದ ವಿರುದ್ಧ ಕೆಲಸ ಮಾಡಬಾರದು. ನಾಯಕತ್ವ ಇಷ್ಟ ಇಲ್ಲದಿದ್ರೆ ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗಲಿ. ಕಾಂಗ್ರೆಸ್‌ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದು ಸಿದ್ದರಾಮಯ್ಯ ಖಾರವಾಗಿ ಮಾತನಾಡಿದರು.

‘ವ್ಯಕ್ತಿಗೆ ಪಕ್ಷ ಅನಿವಾರ್ಯ ಹೊರತು ಪಕ್ಷಕ್ಕೆ ವ್ಯಕ್ತಿ ಮುಖ್ಯವಲ್ಲ’ ವ್ಯಕ್ತಿಗೆ ಪಕ್ಷ ಅನಿವಾರ್ಯ ಹೊರತು ಪಕ್ಷಕ್ಕೆ ವ್ಯಕ್ತಿ ಮುಖ್ಯವಲ್ಲ. ನನ್ನ ಸೋಲಿಸಲು JDS, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡರು. ನನ್ನ ವಿರುದ್ಧ ಬಿಜೆಪಿಯವರು ವೀಕ್ ಕ್ಯಾಂಡಿಡೇಟ್ ಹಾಕಿದ್ದರು. ಸಿಎಂ ವಿರುದ್ಧ ಎಂಥ ಅಭ್ಯರ್ಥಿ ಹಾಕಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತವನನ್ನು ನಿಲ್ಲಿಸಿದ್ರು. ಅಂದ್ರೆ ಇವರದ್ದು ಎಂತ ಒಳಸಂಚು ಇರಬೇಕೆಂದು ಯೋಚಿಸಿ. ಎಂದು ಹೇಳಿದರು.

‘ಮತ್ತೆ ಚೂರಿ ಹಾಕಿದ್ರೆ ಏನ್ಮಾಡೋದು ’ ಈ ನಡುವೆ, ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾರ್​.. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀವೆ ಬನ್ನಿ ಎಂದು ಕೂಗಿದನು. ಇದನ್ನು ಕೇಳಿದ ಸಿದ್ದರಾಮಯ್ಯ ಮತ್ತೆ ಚೂರಿ ಹಾಕಿದ್ರೆ ಏನ್ಮಾಡೋದು? ಎಂದು ಕಾಂಗ್ರೆಸ್ ಕಾರ್ಯಕರ್ತನಿಗೆ ಉತ್ತರಿಸಿ ಸುಮ್ಮನಾದರು.

ಜಿ.ಪಂ., ತಾ.ಪಂ. ಚುನಾವಣೆಗೆ ನಾನೇ ಬರುತ್ತೇನೆ. ಪ್ರಚಾರಕ್ಕೆ ಬರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ವೇಳೆ MLA ಚುನಾವಣೆಗೂ ನೀವೆ ಬರಬೇಕೆಂದ ಕಾರ್ಯಕರ್ತನಿಗೆ ಮತ್ತೆ ಚೂರಿ ಹಾಕಿದ್ರೆ ಏನ್ಮಾಡೋದು ಎಂದು ಸಿದ್ದರಾಮಯ್ಯ ಹೇಳಿದರು.

‘ಬಾದಾಮಿ ಕ್ಷೇತ್ರದಲ್ಲಿ ಗೆಲ್ಲದಿದ್ರೆ ನನ್ನ ಭವಿಷ್ಯವೇ ಮಂಕಾಗುತ್ತಿತ್ತು’ ಬಾದಾಮಿ ಕ್ಷೇತ್ರದಲ್ಲಿ ಗೆಲ್ಲದಿದ್ರೆ ನನ್ನ ಭವಿಷ್ಯವೇ ಮಂಕಾಗುತ್ತಿತ್ತು. ನನ್ನ ರಾಜಕೀಯ ಜೀವನದ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ಇನ್ನೂ ಸೋಲಿನ ಮರ್ಮಾಘಾತ ಮಾತ್ರ ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾವನಾತ್ಮಕ ಹೇಳಿಕೆಕೊಟ್ಟರು.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಭಾಷಣದ ವೇಳೆ ನಾನು ಬಾದಾಮಿಗೆ ಹೋಗಲಿಲ್ಲ, ಆದ್ರೂ ಅಲ್ಲಿನ ಜನ ಗೆಲ್ಲಿಸಿದ್ರು. ನೀವು ಸೋಲಿಸಿದ ಹಾಗೇ ಅವರೂ ಸೋಲಿಸಿದ್ರೆ ಮಂಕಾಗುತ್ತಿತ್ತು. ನನ್ನ ರಾಜಕೀಯ ಜೀವನದ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನಾನು ಕ್ಷೇತ್ರದಲ್ಲಿ ಗೆದಿದ್ದರೆ ಮತ್ತೊಮ್ಮೆ ಸಿಎಂ ಆಗುತ್ತಿದ್ದನೇನೋ. ಮತ್ತೆ ಸಿಎಂ ಆಗುವಂತಹ ಅವಕಾಶವೂ ಇತ್ತು. ಆದ್ರೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ನನ್ನನ್ನು ಸೋಲಿಸಿದ್ರು. 2006ರ ಉಪಚುನಾವಣೆ ಗೆಲುವಿನ ಋಣ ತೀರಿಸಲು ಬಂದಿದ್ದೆ. ಅದು ನನ್ನ ಕೊನೆಯ ಚುನಾವಣೆ ಅಂದುಕೊಂಡೇ ಸ್ಪರ್ಧಿಸಿದ್ದೆ. ಆದ್ರೆ ಚಾಮುಂಡೇಶ್ವರಿ ಕ್ಷೇತ್ರ ಜನ ನನ್ನನ್ನು ತಿರಸ್ಕಾರ ಮಾಡಿದ್ರು. ಯಾಕಾಗಿ ತಿರಸ್ಕರಿಸಿದ್ರು ಅಂತಾ ನೀವೇ ಒಮ್ಮೆ ಯೋಚನೆ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು.

ಯಾವ CMಗೂ 2 ಕ್ಷೇತ್ರದಲ್ಲಿ ಎಲೆಕ್ಷನ್​ಗೆ ನಿಲ್ಲಲು ಬಿಡ್ತಿರಲಿಲ್ಲ.. -ಸಿದ್ದು ‘ನೋವಿನ’ ಹೇಳಿಕೆಗೆ ಡಿಕೆಶಿ ರಿಯಾಕ್ಷನ್

‘ಸಮ್ಮಿಶ್ರ ಸರ್ಕಾರ ಬೀಳಲು ಆ ಹೋಟೆಲ್ ಗಿರಾಕಿಯೇ ಕಾರಣ; ನನ್ನ ಮೇಲೆ ಬರೀ ಹೊಟ್ಟೆ ಕಿಚ್ಚು’

Published On - 4:48 pm, Fri, 18 December 20