ಎಸ್.ಎಲ್. ಬೈರಪ್ಪನವರ ಜನಪ್ರಿಯ ಕಾದಂಬರಿ ‘ಪರ್ವ’ ಪ್ರದರ್ಶನಕ್ಕೆ ಸಿದ್ಧ.. ಇಂದಿನಿಂದ ಮೈಸೂರು ಕಲಾಮಂದಿರದಲ್ಲಿ ಪರ್ವ ಶುರು

|

Updated on: Mar 12, 2021 | 7:41 AM

ಮೈಸೂರಿನ ರಂಗಾಯಣ ಒಂದಿಲ್ಲೊಂದು ಪ್ರಯೋಗವನ್ನ ಮಾಡುತ್ತಲೇ ಬಂದಿದೆ. ಕುವೆಂಪುರವರ ಮಲೆಗಳಲ್ಲಿ ಮಧು ಮಗಳು, ರಾಮಾಯಣ ದರ್ಶನಂ ಕಾದಂಬರಿಗಳನ್ನ ರಂಗದ ಮೇಲೆ ತಂದು ಸೈ ಎನಿಸಿಕೊಂಡಿದ್ದಾರೆ. ಇದೀಗ ಸಾಹಿತಿ ಬೈರಪ್ಪನವರ ಪರ್ವ ಕಾದಂಬರಿ ರಂಗ ಪ್ರಯೋಗಕ್ಕೆ ಸಿದ್ಧವಾಗಿದೆ.

ಎಸ್.ಎಲ್. ಬೈರಪ್ಪನವರ ಜನಪ್ರಿಯ ಕಾದಂಬರಿ ‘ಪರ್ವ’ ಪ್ರದರ್ಶನಕ್ಕೆ ಸಿದ್ಧ.. ಇಂದಿನಿಂದ ಮೈಸೂರು ಕಲಾಮಂದಿರದಲ್ಲಿ ಪರ್ವ ಶುರು
ನಾಟಕ ರೂಪದಲ್ಲಿ ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿ
Follow us on

‘ಪರ್ವ’.. ಸಾಹಿತಿ ಎಸ್.ಎಲ್. ಬೈರಪ್ಪನವರ ಜನಪ್ರಿಯ ಕಾದಂಬರಿಗಳಲ್ಲಿ ಒಂದಾಗಿದೆ. ಈ‌ ಕಾದಂಬರಿ ಸದ್ಯಕ್ಕೆ ರಂಗರೂಪಕ್ಕೆ‌ ಬರಲಿದ್ದು ಪ್ರದರ್ಶನಕ್ಕೂ ಸಜ್ಜಾಗಿದೆ.‌ ಪರ್ವ ಕಾದಂಬರಿ ಬೈರಪ್ಪನವರ ಕಾದಂಬರಿಗಳಲ್ಲಿ ಬಹು ಚರ್ಚಿತ ಕಾದಂಬರಿ ಎನಿಸಿಕೊಂಡಿದೆ. ಮಹಾಭಾರತವನ್ನ ವೈಚಾರಿಕ ದೃಷ್ಟಿಯಿಂದ ಹೇಳುವ ಕಾದಂಬರಿಯಾಗಿದೆ. ಇದೇ ಕಾದಂಬರಿಯನ್ನು ರಂಗದ ಮೇಲೆ‌ ತರಲು‌ ಮೈಸೂರಿ‌ನ ರಂಗಾಯಣ ನಿರಂತರ ಪ್ರಯತ್ನ ಮಾಡುತ್ತಲೇ ಇತ್ತು.

ಇಂದಿನಿಂದ ಮೂರು ದಿನಗಳ ಕಾಲ ನಿರಂತವಾಗಿ ಪರ್ವ ನಾಟಕ ಪ್ರದರ್ಶನವಾಗುತ್ತಿದೆ. ಸುಮಾರು 12 ಜನ ರಂಗಾಯಣದ ಹಿರಿಯ ಕಲಾವಿದರು, 20 ಕಿರಿಯ ಕಲಾವಿದರು ಸೇರಿ 10ಕ್ಕೂ ಹೆಚ್ಚು ತಂತ್ರಜ್ಞರ ತಂಡದಿಂದ ನಾಟಕ ಪ್ರದರ್ಶನವಾಗುತ್ತಿದೆ. ಸುಮಾರು 7 ಗಂಟೆಗಳ ನಾಟಕ‌ ಇದಾಗಿದ್ದು, ಖ್ಯಾತ ರಂಗಕರ್ಮಿ ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದಾರೆ.

3 ದಿನಗಳ ಕಾಲ ನಿರಂತರವಾಗಿ ಈ ನಾಟಕ ರಂಗಾಯಣದ ಕಲಾಮಂದಿರದಲ್ಲಿ ಪ್ರದರ್ಶನವಾಗಲಿದೆ. ನಂತರ ರಾಜ್ಯದ ವಿವಿಧೆಡೆ ಸಂಚಾರ ಮಾಡಿ ಅಲ್ಲೂ ಪ್ರದರ್ಶನ ನೀಡುವ ಯೋಜನೆಯನ್ನ ರಂಗಾಯಣ ರೂಪಿಸಿಕೊಂಡಿದೆ. ಅಲ್ಲದೆ 5 ರಾಜ್ಯಗಳಲ್ಲೂ ಪ್ರದರ್ಶನಕ್ಕೆ ಸಿದ್ಧತೆಯಾಗಿದೆಯಂತೆ. ಈಗಾಗಲೇ ಕಲಾವಿದರು‌ 6 ತಿಂಗಳಿಂದ ನಾಟಕವನ್ನು‌ ರಿಹರ್ಸಲ್‌ ಮಾಡಿ ಸಜ್ಜಾಗಿದ್ದಾರೆ.‌ ಜತೆಗೆ ನಾಟಕಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು, ಇದಕ್ಕಾಗಿಯೇ ಸರ್ಕಾರ 1 ಕೋಟಿ ಹಣವನ್ನು‌ ಬಜೆಟ್​ನಲ್ಲಿ ಮೀಸಲಿಟ್ಟಿದೆ.‌ ಅಲ್ಲದೆ ಕಲಾವಿದರಿಗೂ ಸಹ ನಾಟಕದ ಬಗ್ಗೆ ಕುತೂಹಲ ಇದೆಯಂತೆ.

ಒಟ್ಟಾರೆ, ಇಂದಿನಿಂದ ಪರ್ವ ಕಾದಂಬರಿಯ ರಂಗಪ್ರಯೋಗ ನಡೆಯುತ್ತಿದ್ದು, ಈಗಾಗಲೇ ಟಿಕೆಟ್​ಗಳು ಕೂಡ ಬಹುತೇಕ ಸೇಲ್ ಆಗಿದೆ. ರಂಗಾಸಕ್ತರು ಇಂದಿನ ಪ್ರದರ್ಶನಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ಮತ್ತೊಂದು ನಾಟಕ ಪರ್ವ: ರಂಗಭೂಮಿ ಪ್ರಿಯರ ಸ್ವರ್ಗ ಎನಿಸಿದೆ ಧಾರವಾಡ ರಂಗಾಯಣ