ಪ್ರಾಣಾಪಾಯದಲ್ಲಿ ಸಿಲುಕಿದ್ದ ಹಾವನ್ನು ಮರಳಿ ಗೂಡಿಗೆ ಕಳುಹಿಸಿ ಮಾನವೀಯತೆ ಮೆರೆದ ‘ನಾಗೇಂದ್ರ’!

ಟಿವಿ ಒಳಗಡೆ ಸಿಲುಕಿಕೊಂಡಿದ್ದ ಕೆರೆಹಾವನ್ನು ಪ್ರಾಣಾಪಾಯದಿಂದ ರಕ್ಷಿಸಿ ಮರಳಿ ಗೂಡಿಗೆ ಕಳುಹಿಸಲಾಗಿದೆ.

ಪ್ರಾಣಾಪಾಯದಲ್ಲಿ ಸಿಲುಕಿದ್ದ ಹಾವನ್ನು ಮರಳಿ ಗೂಡಿಗೆ ಕಳುಹಿಸಿ ಮಾನವೀಯತೆ ಮೆರೆದ ‘ನಾಗೇಂದ್ರ’!
ಕೆರೆ ಹಾವು
Edited By:

Updated on: Dec 24, 2020 | 11:14 AM

ನೆಲಮಂಗಲ: ಟಿವಿ ಒಳಗಡೆ ಸೇರಿಕೊಂಡಿದ್ದ ಕೆರೆ ಹಾವನ್ನು.. ಪ್ರಾಣಾಪಾಯದಿಂದ ರಕ್ಷಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕು ತೋಟದ ಗುಡ್ಡದ ಹಳ್ಳಿಯ ಹೇಮಾವತಿ ಅವರ ಮನೆಯಲ್ಲಿ ನಡೆದಿದೆ.

ಸುಮಾರು 7 ಅಡಿ ಉದ್ದದ ಹಾವು 3 ದಿನಗಳ ಹಿಂದೆಯೇ ಹೇಮಾವತಿಯವರ ಮನೆ ಟಿವಿಯ ಒಳಗಡೆ ಸಿಲುಕೊಕೊಂಡಿತ್ತು. ಆಚೆಯೂ ಬರಲಾಗದೆ, ಒಳಗಡೆಯೂ ಇರಲಾಗದೆ ಪರದಾಡುತ್ತಿತ್ತು. ಇದನ್ನು ನೋಡಿದ ಹೇಮಾವತಿ ಹಾವಾಡಿಗ ನಾಗೇಂದ್ರನಿಗೆ ವಿಷಯ ತಿಳಿಸಿ ಹಾವನ್ನು ರಕ್ಷಿಸಿದ್ದಾರೆ.

ಪ್ರಾಣಾಪಾಯದಿಂದ ಹಾವನ್ನು ತೆಗೆದ ನಾಗೇಂದ್ರ, ಹೆಸರಘಟ್ಟ ಅರಣ್ಯ ಪ್ರದೇಶಕ್ಕೆ ಹಾವನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.