ಅಳಿಯನಿಂದಲೇ ಅತ್ತೆಯ‌ ಬರ್ಬರ‌ ಹತ್ಯೆ.. ಯಾಕೆ?

ಕಲಬುರಗಿ: ಅಳಿಯನೇ ತನ್ನ ಅತ್ತೆಯನ್ನು‌ ಬರ್ಬರವಾಗಿ‌ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ‌ಭಿಮನಾಳ‌ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಲಕ್ಷ್ಮಿಬಾಯಿ‌ ಕೊಲೆಯಾದ‌ ಮಹಿಳೆ. ತಲೆಯ‌‌ ಮೇಲೆ‌ ಕಲ್ಲು ಎತ್ತಿ‌ ಹಾಕಿ ಅಳಿಯ ಕೊಲೆ‌ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಗಳ ವಿಚಾರಕ್ಕೆ ಅತ್ತೆ-ಅಳಿಯನ ಮಧ್ಯೆ ಗಲಾಟೆ ಅತ್ತೆ ತನ್ನ ಮಗಳನ್ನ‌ ಅಳಿಯನ ಮನೆಗೆ ಬಿಡಲು ಬಂದಿದ್ದಾಗ ಈ ಪ್ರಸಂಗ ನಡೆದಿದೆ. ಅತ್ತೆ ಲಕ್ಷ್ಮಿಬಾಯಿ ಭಾಲ್ಕಿ ತಾಲ್ಲೂಕಿನಿಂದ ಭಿಮನಾಳ ಗ್ರಾಮಕ್ಕೆ ಬಂದಿದ್ದಳು. ಮಗಳ ವಿಚಾರಕ್ಕೆ ಅತ್ತೆ ಮತ್ತು […]

ಅಳಿಯನಿಂದಲೇ ಅತ್ತೆಯ‌ ಬರ್ಬರ‌ ಹತ್ಯೆ.. ಯಾಕೆ?
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​

Updated on: Nov 04, 2020 | 10:26 AM

ಕಲಬುರಗಿ: ಅಳಿಯನೇ ತನ್ನ ಅತ್ತೆಯನ್ನು‌ ಬರ್ಬರವಾಗಿ‌ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ‌ಭಿಮನಾಳ‌ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಲಕ್ಷ್ಮಿಬಾಯಿ‌ ಕೊಲೆಯಾದ‌ ಮಹಿಳೆ. ತಲೆಯ‌‌ ಮೇಲೆ‌ ಕಲ್ಲು ಎತ್ತಿ‌ ಹಾಕಿ ಅಳಿಯ ಕೊಲೆ‌ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮಗಳ ವಿಚಾರಕ್ಕೆ ಅತ್ತೆ-ಅಳಿಯನ ಮಧ್ಯೆ ಗಲಾಟೆ
ಅತ್ತೆ ತನ್ನ ಮಗಳನ್ನ‌ ಅಳಿಯನ ಮನೆಗೆ ಬಿಡಲು ಬಂದಿದ್ದಾಗ ಈ ಪ್ರಸಂಗ ನಡೆದಿದೆ. ಅತ್ತೆ ಲಕ್ಷ್ಮಿಬಾಯಿ ಭಾಲ್ಕಿ ತಾಲ್ಲೂಕಿನಿಂದ ಭಿಮನಾಳ ಗ್ರಾಮಕ್ಕೆ ಬಂದಿದ್ದಳು. ಮಗಳ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ಮಧ್ಯೆ ಗಲಾಟೆಯಾಗಿದೆ. ಬಳಿಕ ಕಲ್ಲು ಎತ್ತಿ ಹಾಕಿ ಅಳಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us