ಪಶ್ಚಿಮ ಬಂಗಾಳ: ತೀವ್ರ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜನವರಿ 27 ರಂದು ಕೋಲ್ಕತ್ತಾದ ಅಪೋಲೊ ಆಸ್ಪತ್ರೆಗೆ ಗಂಗೂಲಿ ದಾಖಲಾಗಿದ್ದರು. ಎದೆ ನೋವಿನಿಂದ ಬಳಲುತ್ತಿರುವ ಗಂಗೂಲಿಗೆ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಚೇತರಿಸಿಕೊಂಡ ಬಳಿಕ ಗಂಗೂಲಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಆದರೆ ಮತ್ತೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಜನವರಿ 27ರಂದು ಕೋಲ್ಕತ್ತಾದ ಅಪೋಲೊ ಆಸ್ಪತ್ರೆಗೆ ಗಂಗೂಲಿ ದಾಖಲಾಗಿದ್ದರು. ಹೀಗಾಗಿ ಆಸ್ಪತ್ರೆಯ ವೈದ್ಯರು ಗಂಗೂಲಿಗೆ 2ನೇ ಬಾರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಿ ಮತ್ತೆರಡು ಸ್ಟೆಂಟ್ ಅಳವಡಿಸಿದ್ದಾರೆ.
ಬೆಳಗ್ಗೆ ವೈದ್ಯಕೀಯ ಪರೀಕ್ಷಾ ನಡೆಸಿದ ಅಪೋಲೋ ಆಸ್ಪತ್ರೆ ವೈದ್ಯ ಡಾ.ರಾಣಾ ದಾಸ್‌ಗುಪ್ತಾ, ಗಂಗೂಲಿ ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಹೇಳಿಕೆ ನೀಡದರು. ಈ ಬೆನ್ನಲ್ಲೇ ದಾದಾರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Published On - 12:01 pm, Sun, 31 January 21