AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳಕ್ಕೆ ಅಮಿತ್​ ಶಾ ಬದಲು ಸ್ಮೃತಿ ಇರಾನಿ ಭೇಟಿ; ಹೌರಹ್​ನಲ್ಲಿ ಪ್ರಚಾರ ಸಭೆ

ಟಿಎಂಸಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ನಾಯಕರು ಬಿಜೆಪಿಗೆ ಹೋಗುತ್ತಿದ್ದಾರೆ. ಟಿಎಂಸಿ ನಾಯಕರಾದ ರಜೀಬ್​ ಬ್ಯಾನರ್ಜಿ, ವೈಶಾಲಿ ದಾಲ್ಮಿಯಾ, ಪ್ರಭೀರ್​ ಘೋಸಾಲ್​, ರತಿನ್​ ಚಕ್ರವರ್ತಿ, ಪಾರ್ಥಸಾರಥಿ ಚಟರ್ಜಿ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಅಮಿತ್​ ಶಾ ಬದಲು ಸ್ಮೃತಿ ಇರಾನಿ ಭೇಟಿ; ಹೌರಹ್​ನಲ್ಲಿ ಪ್ರಚಾರ ಸಭೆ
ಸ್ಮೃತಿ ಇರಾನಿ
Lakshmi Hegde
|

Updated on:Jan 31, 2021 | 11:48 AM

Share

ದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಹೌರಹ್​​ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಲಿದ್ದಾರೆ. ವಾಸ್ತವವಾಗಿ ಇಲ್ಲಿ ಇಂದು ಗೃಹ ಸಚಿವ ಅಮಿತ್​ ಶಾ ಪ್ರಚಾರ ಸಭೆ ನಡೆಸಬೇಕಿತ್ತು. ಆದರೆ ಜ.29ರಂದು ದೆಹಲಿಯ ಇಸ್ರೇಲ್​ ರಾಯಭಾರಿ ಕಚೇರಿ ಬಳಿ ಸ್ಫೋಟ ಉಂಟಾದ ಬೆನ್ನಲ್ಲೇ ಅವರು ತಮ್ಮ ಎರಡು ದಿನಗಳ(ಜ.30 ಮತ್ತು ಜ.31) ಪಶ್ಚಿಮ ಬಂಗಾಳ ಭೇಟಿಯನ್ನು ರದ್ದುಮಾಡಿದ್ದರು.

ಇಂದು ಹೌರಹ್​ನ ಡುಮುರ್ಜಾಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಸ್ಮೃತಿ ಇರಾನಿ ಭಾಗವಹಿಸಿ, ಮಾತನಾಡಲಿದ್ದಾರೆ. ಹಾಗೇ ಅಮಿತ್ ಶಾ ವರ್ಚ್ಯುವಲ್​ ಆಗಿ ಪಾಲ್ಗೊಳ್ಳಲಿದ್ದಾರೆ.

294 ವಿಧಾನಸಭಾ ಕ್ಷೇತ್ರಗಳುಳ್ಳ ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್​-ಮೇನಲ್ಲಿ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ರಾಜಕೀಯ ಪಕ್ಷಗಳ ಸಿದ್ಧತೆ ಶುರುವಾಗಿದೆ. ಅದರಲ್ಲೂ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ದೀದಿ ಹಿಡಿತದಲ್ಲಿರುವ ಪಶ್ಚಿಮ ಬಂಗಾಳವನ್ನು ಹೇಗಾದರೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ.

ಟಿಎಂಸಿಯಿಂದ ವಲಸೆ ಈ ಮಧ್ಯೆ ಟಿಎಂಸಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ನಾಯಕರು ಬಿಜೆಪಿಗೆ ಹೋಗುತ್ತಿದ್ದಾರೆ. ಟಿಎಂಸಿ ನಾಯಕರಾದ ರಜೀಬ್​ ಬ್ಯಾನರ್ಜಿ, ವೈಶಾಲಿ ದಾಲ್ಮಿಯಾ, ಪ್ರಭೀರ್​ ಘೋಸಾಲ್​, ರತಿನ್​ ಚಕ್ರವರ್ತಿ, ಪಾರ್ಥಸಾರಥಿ ಚಟರ್ಜಿ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ತಿಂಗಳು ಟಿಎಂಸಿಯ ಪ್ರಮುಖರಲ್ಲಿ ಒಬ್ಬರಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಸೇರಿದ್ದರು, ಅವರೊಂದಿಗೆ 35 ಮಂದಿ ಟಿಎಂಸಿ ನಾಯಕರೂ ಹೋಗಿದ್ದರು. ಅಲ್ಲಿಂದಲೂ ಈ ವಲಸೆ ಪರ್ವ ಶುರುವಾಗಿದೆ.

ಹೊಟ್ಟೆನೋವೆಂದು ಹೋದ ಮಹಿಳೆಗೆ 6 ಕೋಟಿ ರೂ. ಬಿಲ್.. ಮಣಿಪಾಲ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ..!

Published On - 11:46 am, Sun, 31 January 21

Follow Us
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ