8 ತಿಂಗಳಿಂದ ಮಾಸಾಶನ ಬಿಡುಗಡೆ ಮಾಡದ ಸರ್ಕಾರ.. ನೂರಾರು ದಿವ್ಯಾಂಗರು ಬೀದಿಪಾಲು
ಬೆಂಗಳೂರು: ಸರ್ಕಾರ ಮಾಶಾಸನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ನೂರಾರು ದಿವ್ಯಾಂಗರು ಬೀದಿಗಳಿದು ಪ್ರತಿಭಟನೆ ಮಾಡಿರುವ ಘಟನೆ ಹೊಸ ರೋಡು ಬಳಿಯಿರುವ ಚೂಡಸಂದ್ರದಲ್ಲಿ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ 1,000 ರೂ ಹೆಚ್ಚುವರಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಯಾವ ಹೆಚ್ಚುವರಿ ಹಣವು ನಮ್ಮ ಕೈಸೇರಿಲ್ಲ. ಜೊತೆಗೆ, ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುತ್ತಿದ್ದ 1,400 ರೂಪಾಯಿ ಅನುದಾನವು ಕೂಡ ಜನವರಿ ತಿಂಗಳಿಂದ ಬಂದಿಲ್ಲ. ಹೀಗಾಗಿ, ನಮಗೆ ದಿನದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ರಾಜ್ಯದಲ್ಲಿ ಒಟ್ಟು […]

ಬೆಂಗಳೂರು: ಸರ್ಕಾರ ಮಾಶಾಸನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ನೂರಾರು ದಿವ್ಯಾಂಗರು ಬೀದಿಗಳಿದು ಪ್ರತಿಭಟನೆ ಮಾಡಿರುವ ಘಟನೆ ಹೊಸ ರೋಡು ಬಳಿಯಿರುವ ಚೂಡಸಂದ್ರದಲ್ಲಿ ನಡೆದಿದೆ.
ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ 1,000 ರೂ ಹೆಚ್ಚುವರಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಯಾವ ಹೆಚ್ಚುವರಿ ಹಣವು ನಮ್ಮ ಕೈಸೇರಿಲ್ಲ. ಜೊತೆಗೆ, ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುತ್ತಿದ್ದ 1,400 ರೂಪಾಯಿ ಅನುದಾನವು ಕೂಡ ಜನವರಿ ತಿಂಗಳಿಂದ ಬಂದಿಲ್ಲ.
ಹೀಗಾಗಿ, ನಮಗೆ ದಿನದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ರಾಜ್ಯದಲ್ಲಿ ಒಟ್ಟು 15 ಲಕ್ಷಕ್ಕೂ ಹೆಚ್ಚು ದಿವ್ಯಾಂಗರಿದ್ದಾರೆ. ಅವರಲ್ಲಿ ಶೇ.40 ರಷ್ಟು ಜನಕ್ಕೆ ಹಣ ಬಿಡುಗಡೆ ಆಗಿಲ್ಲ. ಇದರಿಂದ, ಮನೆ ಬಾಡಿಗೆ ಕಟ್ಟಲಾಗದೆ ಬೀದಿಗೆ ಬೀಳುವ ಆತಂಕದಲ್ಲಿದ್ದೇವೆ.
ಬೇರೆ ಸಂಘ ಸಂಸ್ಥೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಆದರೆ ದಿವ್ಯಾಂಗರಿಗೆ ದ್ರೋಹ ಮಾಡುತ್ತಿದೆ. ನಮಗೆ ಸಾಯುವ ಸ್ಥಿತಿ ಬಂದಿದೆ ಎಂದು ದಿವ್ಯಾಂಗರು ತಮ್ಮ ಅಳಲು ತೋಡಿಕೊಂಡಿದ್ದಾರೆ.