ಮೆಟ್ರೊ ರೈಲಲ್ಲಿ ಪ್ರಯಾಣಿಸಿ ಪ್ರಯಾಣಿಕರಿಗೆ ಅಭಯ ನೀಡಿದ ಸಚಿವ ಶ್ರೀರಾಮುಲು

|

Updated on: Sep 07, 2020 | 6:36 PM

ಐದು ತಿಂಗಳ ಕಾಲ ಜಾರಿಯಲ್ಲಿದ್ದ ಲಾಕ್​ಡೌನ್​ಗಳ ನಂತರ ಬೆಂಗಳೂರಿನಲ್ಲಿ ಇಂದು ಪುನರಾರಂಭಗೊಂಡ ಮೆಟ್ರೋ ರೈಲು ಸಂಚಾರ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಖುದ್ದು ಬೆಂಗಳೂರು ಪ್ರಯಾಣ ಮಾಡಿ ಮೆಟ್ರೊ ರೇಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು (ಬಿ ಎಮ್ ಅರ್ ಸಿ ಎಲ್) ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಸಚಿವರು ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದವರೆಗೆ ಸಂಚಾರ ಮಾಡಿದರು. ಬಿ ಎಮ್ ಅರ್ ಸಿ ಎಲ್​ನ ಅಧಿಕಾರಿಗಳು ಶ್ರೀರಾಮುಲು ಅವರೊಂದಿಗೆ ಪ್ರಯಾಣಿಸಿ […]

ಮೆಟ್ರೊ ರೈಲಲ್ಲಿ ಪ್ರಯಾಣಿಸಿ ಪ್ರಯಾಣಿಕರಿಗೆ ಅಭಯ ನೀಡಿದ ಸಚಿವ ಶ್ರೀರಾಮುಲು
Follow us on

ಐದು ತಿಂಗಳ ಕಾಲ ಜಾರಿಯಲ್ಲಿದ್ದ ಲಾಕ್​ಡೌನ್​ಗಳ ನಂತರ ಬೆಂಗಳೂರಿನಲ್ಲಿ ಇಂದು ಪುನರಾರಂಭಗೊಂಡ ಮೆಟ್ರೋ ರೈಲು ಸಂಚಾರ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಖುದ್ದು ಬೆಂಗಳೂರು ಪ್ರಯಾಣ ಮಾಡಿ ಮೆಟ್ರೊ ರೇಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು (ಬಿ ಎಮ್ ಅರ್ ಸಿ ಎಲ್) ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.

ಸಚಿವರು ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದವರೆಗೆ ಸಂಚಾರ ಮಾಡಿದರು. ಬಿ ಎಮ್ ಅರ್ ಸಿ ಎಲ್​ನ ಅಧಿಕಾರಿಗಳು ಶ್ರೀರಾಮುಲು ಅವರೊಂದಿಗೆ ಪ್ರಯಾಣಿಸಿ ಸಂಸ್ಥೆ ತೆಗೆದುಕೊಂಡಿರುವ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ವಿವರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಶ್ರೀರಾಮುಲು, ಆರೋಗ್ಯ ಇಲಾಖೆ ಮತ್ತು ಬಿ ಎಮ್ ಅರ್ ಸಿ ಎಲ್ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿವೆ, ಪ್ರಯಾಣಿಕರು ಯಾವ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದರಲ್ಲದೆ, ಪ್ರಯಾಣಿಸುವಾಗ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪ್ರಯಾಣಿಕರಿಗೆ ವಿನಂತಿಸಿದರು.