SSLC Exam ಕಳೆದ ಬಾರಿ ರೋಹಿಣಿ ಮೇಡಂ, ಈ ಬಾರಿ ಭವಾನಿ ಮೇಡಂ ಉಸ್ತುವಾರಿ

|

Updated on: Jun 27, 2020 | 4:44 PM

ಕಳೆದ ಬಾರಿ SSLC Exam 2019 ನಡೆದಾಗ ಹಾಸನ ಜಿಲ್ಲೆಯಲ್ಲಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿದ್ದರು. ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಪರೀಕ್ಷೆಗೆ ಸಜ್ಜುಗೊಳಿಸಿದ್ದರು. ಪರೀಕ್ಷಾ ಫಲಿತಾಂಶವೂ ಅಪೂರ್ವವಾಗಿ ಬಂದಿತ್ತು. ಆದ್ರೆ ಹಾಸನದ ಸೊಸೆ ಭವಾಣಿ ರೇವಣ್ಣ ಅವರು ಅದರಲ್ಲಿ ನಮ್ಮ ಪಾಲು ಹೆಚ್ಚಾಗಿದೆ. ನಾವೇ ವಿದ್ಯಾರ್ಥಿಗಳನ್ನು ಎಕ್ಸಾಂಗೆ ಸಜ್ಜುಗೊಳಿಸಿದ್ದು ಎಂದಿದ್ದರು. ಕೊನೆಗೆ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲೆಯಿಂದ ಎದ್ದುಬಂದು, ರಾಜಧಾನಿ ಸೇರಿಕೊಂಡರು. ಆಮೇಲೆ ಜಿಲ್ಲೆಯಲ್ಲಿ SSLC ಉಸ್ತುವಾರಿಯನ್ನು ಸ್ವತಃ ಭವಾನಿ ರೇವಣ್ಣ ಅವರೇ ನೋಡಿಕೊಳ್ಳತೊಡಗಿದರು. ಕೊರೊನಾ ಹಾವಳಿಯ […]

SSLC Exam ಕಳೆದ ಬಾರಿ ರೋಹಿಣಿ ಮೇಡಂ, ಈ ಬಾರಿ ಭವಾನಿ ಮೇಡಂ ಉಸ್ತುವಾರಿ
Follow us on

ಕಳೆದ ಬಾರಿ SSLC Exam 2019 ನಡೆದಾಗ ಹಾಸನ ಜಿಲ್ಲೆಯಲ್ಲಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿದ್ದರು. ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಪರೀಕ್ಷೆಗೆ ಸಜ್ಜುಗೊಳಿಸಿದ್ದರು. ಪರೀಕ್ಷಾ ಫಲಿತಾಂಶವೂ ಅಪೂರ್ವವಾಗಿ ಬಂದಿತ್ತು. ಆದ್ರೆ ಹಾಸನದ ಸೊಸೆ ಭವಾಣಿ ರೇವಣ್ಣ ಅವರು ಅದರಲ್ಲಿ ನಮ್ಮ ಪಾಲು ಹೆಚ್ಚಾಗಿದೆ. ನಾವೇ ವಿದ್ಯಾರ್ಥಿಗಳನ್ನು ಎಕ್ಸಾಂಗೆ ಸಜ್ಜುಗೊಳಿಸಿದ್ದು ಎಂದಿದ್ದರು. ಕೊನೆಗೆ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲೆಯಿಂದ ಎದ್ದುಬಂದು, ರಾಜಧಾನಿ ಸೇರಿಕೊಂಡರು. ಆಮೇಲೆ ಜಿಲ್ಲೆಯಲ್ಲಿ SSLC ಉಸ್ತುವಾರಿಯನ್ನು ಸ್ವತಃ ಭವಾನಿ ರೇವಣ್ಣ ಅವರೇ ನೋಡಿಕೊಳ್ಳತೊಡಗಿದರು.

ಕೊರೊನಾ ಹಾವಳಿಯ ಮಧ್ಯೆ, ಅಂತೂ ಇಂತೂ SSLC Exam 2020 ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಅತ್ಮವಿಶ್ವಾಸ ತುಂಬುವ ಜರೂರತ್ತು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದನ್ನು ಸಂಭಾಳಿಸಲು ಸ್ವತಃ ಭವಾನಿ ರೇವಣ್ಣ ಅವರು ಮುಂದೆ ನಿಂತು ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಿದರು.

ಇಂದೂ ಅಷ್ಟೇ.. ಕಬ್ಬಿಣದ ಕಡಲೆ ಎಂದೇ ಪರಿಗಣಿತವಾಗಿರುವ ಗಣಿತ ವಿಷಯ ಪರೀಕ್ಷೆ ನಡೆಯುತ್ತಿದ್ದಾಗ ಸ್ವತಃ ಭವಾನಿ ಅವರು ಪರೀಕ್ಷಾ ಕೇಂದ್ರಗಳಿಗೆ ಎಡತಾಕಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಪ್ರೇರೇಪಿಸಿದರು. ಅಧಿಕಾರಿ ವೃಂದದಿಂದ ಯಾವುದೇ ಲೋಪ ಉಂಟಾಗದಂತೆಯೂ ಎಚ್ಚರವಹಿಸಿದರು.