ಬೆಂಗಳೂರು: SSLCಯಲ್ಲಿ 625ಕ್ಕೆ 625 ಗಳಿಸಿ ಟಾಪರ್ ಆಗಿ ಹೊರಹೊಮ್ಮಿದ 8ನೇ ಮೈಲಿ ನಾಗಸಂದ್ರದಲ್ಲಿರುವ ಸೆಂಟ್ ಮೇರಿಸ್ ಆಂಗ್ಲ ಶಾಲೆಯ ವಿಧ್ಯಾರ್ಥಿ ಚಿರಾಯು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ, ತಮ್ಮ ಪರಿಶ್ರಮದ ಸೀಕ್ರೆಟ್ ಸಹ ಬಿಚ್ಚಿಟ್ಟಿದ್ದಾರೆ.
ಶಾಲೆಯ ಪಾಠ ಸೇರಿ ಪ್ರತಿದಿನ 2 ಗಂಟೆ ಮನೆಯಲ್ಲಿ ಓದಿಕೊಳ್ಳುತ್ತಿದ್ದೆ. ನನ್ನ ಶಿಕ್ಷಕರು ಹಾಗೂ ಪೋಷಕರು ತುಂಬಾ ಸಪೋರ್ಟ್ ಮಾಡಿದ್ದರು. ಜೊತೆಗೆ, ನಾನು ಕ್ರೀಡಾಸಕ್ತಿ ಸಹ ಹೊಂದಿದ್ದೆ. ಇದಕ್ಕೂ ಎಲ್ಲರೂ ಸಪೋರ್ಟ್ ಮಾಡಿದ್ರು ಎಂದು ತಿಳಿಸಿದ್ದಾರೆ.
ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಲಾಕ್‌ಡೌನ್‌ನ ಮೂರು ತಿಂಗಳು ನನಗೆ ತುಂಬಾ ಸಹಾಯವಾಯಿತು. ಮನೆಯಲ್ಲಿ ಓದಿಕೊಳ್ಳುತ್ತಿದ್ದೆ ಹಾಗೂ ಶಾಲೆಯಿಂದ ಸಲಹೆಗಳನ್ನ ನೀಡುತ್ತಿದ್ದರು. ಆನ್‌ಲೈನ್‌ನಲ್ಲಿ ಶಿಕ್ಷಕರು ಕೆಲವು ನಿರ್ದೇಶನಗಳನ್ನ ನೀಡುತ್ತಿದ್ದರು.
ಇಂದು ಎಲ್ಲರ ಶ್ರಮದಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಚಿರಾಯು ತಮ್ಮ ಸಂತಸವನನ್ನ ವ್ಯಕ್ತಪಡಿಸಿದರು.