ತಡವಾಗಿಯಾದ್ರೂ 8 ವಲಯಗಳಾಗಿ ಬೆಂಗಳೂರು ವಿಭಜನೆ, ತಲಾ ಒಬ್ಬ ಸಚಿವ ಉಸ್ತುವಾರಿ!

ಬೆಂಗಳೂರು: ಎಷ್ಟೇ ಪ್ರಯತ್ನಪಟ್ಟರೂ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಬದಲು ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರನ್ನು ಎಂಟು ವಿಭಾಗಗಳಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಒಬ್ಬ ಸಚಿವರನ್ನ ಉಸ್ತುವಾರಿಯಾಗಿ ನೇಮಿಸಲು ಮುಂದಾಗಿದೆ. ಇವತ್ತು ಸಂಜೆಗೆ ಉಸ್ತುವಾರಿಗಳ ನೇಮಕ ಹೌದು, ದಿನೇ ದಿನೇ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಹತ್ತಿಕ್ಕಲು ಸರ್ಕಾರ ಈಗ ನೂತನ ಪ್ರಯೋಗಕ್ಕೆ ಮುಂದಾಗಿದೆ. ಬೆಂಗಳೂರು ಮಹಾನಗರವನ್ನ 8 ವಿಭಾಗಗಳಾಗಿ ವಿಂಗಡಿಸಿದೆ. ಹೀಗೆ ವಿಂಗಡಿಸಿದ ಪ್ರತಿಯೊಂದು ವಿಭಾಗಕ್ಕೂ ಒಬ್ಬ ಸಚಿವರನ್ನ ಉಸ್ತುವಾರಿಯಾಗಿ ನೇಮಿಸಲು […]

ತಡವಾಗಿಯಾದ್ರೂ 8 ವಲಯಗಳಾಗಿ ಬೆಂಗಳೂರು ವಿಭಜನೆ, ತಲಾ ಒಬ್ಬ ಸಚಿವ ಉಸ್ತುವಾರಿ!
ಸಚಿವ ಜೆ.ಸಿ.ಮಾಧುಸ್ವಾಮಿ
Follow us
Guru
| Updated By:

Updated on:Jul 09, 2020 | 4:53 PM

ಬೆಂಗಳೂರು: ಎಷ್ಟೇ ಪ್ರಯತ್ನಪಟ್ಟರೂ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಬದಲು ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರನ್ನು ಎಂಟು ವಿಭಾಗಗಳಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಒಬ್ಬ ಸಚಿವರನ್ನ ಉಸ್ತುವಾರಿಯಾಗಿ ನೇಮಿಸಲು ಮುಂದಾಗಿದೆ.

ಇವತ್ತು ಸಂಜೆಗೆ ಉಸ್ತುವಾರಿಗಳ ನೇಮಕ ಹೌದು, ದಿನೇ ದಿನೇ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಹತ್ತಿಕ್ಕಲು ಸರ್ಕಾರ ಈಗ ನೂತನ ಪ್ರಯೋಗಕ್ಕೆ ಮುಂದಾಗಿದೆ. ಬೆಂಗಳೂರು ಮಹಾನಗರವನ್ನ 8 ವಿಭಾಗಗಳಾಗಿ ವಿಂಗಡಿಸಿದೆ. ಹೀಗೆ ವಿಂಗಡಿಸಿದ ಪ್ರತಿಯೊಂದು ವಿಭಾಗಕ್ಕೂ ಒಬ್ಬ ಸಚಿವರನ್ನ ಉಸ್ತುವಾರಿಯಾಗಿ ನೇಮಿಸಲು ಮುಂದಾಗಿದೆ. ಸಚಿವ ಸಂಪುಟದ ಸಭೆಯ ನಂತರ ಮಾತನಾಡಿದ ಕಾನೂನು ಮತ್ತು ಸಂಸಧೀಯ ವ್ವವಹಾರಗಳ ಸಚಿವ ಮಾಧುಸ್ವಾಮಿ ಈ ವಿಷಯ ತಿಳಿಸಿದರು.

ಈ ಉಸ್ತುವಾರಿ ಸಚಿವರು ತಮ್ಮ ತಮ್ಮ ವಿಭಾಗದಲ್ಲಿ ಕೊರೊನಾ ನಿಯಂತ್ರಣ ಅಗತ್ಯ ಕ್ರಮಗಳ ಬಗ್ಗೆ ಉಸ್ತುವಾರಿ ನೋಡಿಕೊಳ್ಳುವುದರ ಜತೆಗೆ ಹತ್ತಿಕ್ಕಲೂ ಬೇಕಾದ ಅಗತ್ಯ ಕ್ರಮಗನ್ನ ಕೈಗೊಳ್ಳಬೇಕು. ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಕೂಡ ಟೀಂ ನಲ್ಲಿದ್ದಾರೆ. ಈ ಸಂಬಂಧ ಇವತ್ತು ಸಂಜೆ ಯಾವ ವಲಯಕ್ಕೆ ಯಾರು ಉಸ್ತುವಾರಿ ಅನ್ನೋದನ್ನ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ನೇಮಿಸಿ ಆದೇಶ ಹೊರಡಿಸಲಿದ್ದಾರೆ.

ಬೆಂಗಳೂರಿನ ಎಂಟು ವಲಯಗಳಿಗೆ ಎಂಟು ಐಎಎಸ್‌ ಅಧಿಕಾರಿಗಳ ನೇಮಕ ರಾಜ್ಯ ಸರ್ಕಾರ ಬೆಂಗಳೂರಿನ ಎಂಟು ವಲಯಗಳಿಗೆ ಎಂಟು ಸಚಿವರು ಹಾಗೂ ಐಎಎಸ್‌ ಅಧಿಕಾರಿಗಳನ್ನ ನೇಮಿಸಲು ತಿರ್ಮಾನಿಸಿದ್ದು ವಿವರ ಹೀಗಿದೆ. ಬೆಂಗಳೂರಿನ ಎಂಟು ವಲಯಗಳಿಗೆ ಎಂಟು ಐಎಎಸ್ ಅಧಿಕಾರಿಗಳು, ವಲಯ ಸಂಯೋಜಕರಾಗಿ ಐಎಎಸ್ ಅಧಿಕಾರಿಗಳ ನೇಮಕ. ಬಿಬಿಎಂಪಿ ಆಯುಕ್ತರಿಗೆ ಈ ಎಂಟೂ ವಲಯ ಸಂಯೋಜಕರು ನಿರಂತರ ಸಂಪರ್ಕದಲ್ಲಿರುತ್ತಾರೆ. ಎಂಟು ವಲಯಗಳಿಗೆ ಒಬ್ಬೊಬ್ಬ ಸಚಿವರ ಉಸ್ತುವಾರಿ ಮತ್ತು ಜವಾಬ್ದಾರಿ ವಹಿಸಿ ನೇಮಕ. ಸಚಿವರಿಗೆ ಆಯಾ ಕ್ಷೇತ್ರಗಳ ಶಾಸಕರು ಸಾಥ್. ಶಾಸಕರ ಜೊತೆ ಕಾರ್ಪೋರೇಟರ್‌ಗಳು ಸಚಿವರಿಗೆ ಕೊ ಆರ್ಡಿನೇಷನ್ ಜವಬ್ದಾರಿ. ಎಲ್ಲ ವಲಯ ಸಂಯೋಜಕರು, ಉಸ್ತುವಾರಿ ಸಚಿವರಿಗೆ ತಕ್ಷಣದ ಮಾಹಿತಿಗಳನ್ನು ಬಿಬಿಎಂಪಿ ಅಧಿಕಾರಿಗಳು ಒದಗಿಸಬೇಕು. ಸಚಿವರಿಗೆ, ವಲಯ ಸಂಯೋಜಕ ಅಧಿಕಾರಿಗಳಿಗೆ ಕ್ಷಣ ಕ್ಷಣದ ಮಾಹಿತಿಯನ್ನು ಜಂಟಿ ಆಯುಕ್ತರು ನೀಡುವುದು.

Published On - 2:24 pm, Thu, 9 July 20

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ