ನಿಮಗೆ ತಲೆನೋವು, ಮೈ-ಕೈ ನೋವು ಕಾಡ್ತಿದೆಯೇ? ತಕ್ಷಣ ಟೆಸ್ಟ್​ ಮಾಡಿಸಿಕೊಳ್ಳಿ: ಡಾ. ಮಂಜುನಾಥ್​

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮನುಕುಲಕ್ಕೆ ತಲ್ಲಣ ಉಂಟುಮಾಡಿರೋ ಕೊರೊನಾ ಇದೀಗ ಊಸರವಳ್ಳಿಯಂತೆ ತನ್ನ ಬಣ್ಣವನ್ನ ಬದಲಿಸುತ್ತಿದೆ. ದಿನೇ ದಿನೆ ರೂಪಾಂತರಗೊಳ್ಳುತ್ತಿರುವ ಡೆಡ್ಲಿ ವೈರಸ್​ ಜೊತೆಗೆ ಹೊಸ ಸೋಂಕಿನ ಲಕ್ಷಣಗಳೂ ಬೆಳಕಿಗೆ ಬರುತ್ತಿವೆ. ಇದೀಗ ತಲೆನೋವು ಮತ್ತು ಮೈ-ಕೈ ನೋವು ಸಹ ಸೋಂಕಿನ ಹೊಸ ಲಕ್ಷಣಗಳು ಎಂದು ತಿಳಿದುಬಂದಿದೆ. ಈ ಮಾಹಿತಿಯನ್ನ ಕೊವಿಡ್ ಟಾಸ್ಕ್‌ಫೋರ್ಸ್ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ಡಾ.ಸಿ.ಎನ್. ಮಂಜುನಾಥ್ ನೀಡಿದ್ದಾರೆ. ನಿಮಗೇನಾದರೂ ತಲೆನೋವು ಅಥವಾ ಮೈ-ಕೈ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಹತ್ತಿರ […]

ನಿಮಗೆ ತಲೆನೋವು, ಮೈ-ಕೈ ನೋವು ಕಾಡ್ತಿದೆಯೇ? ತಕ್ಷಣ ಟೆಸ್ಟ್​ ಮಾಡಿಸಿಕೊಳ್ಳಿ: ಡಾ. ಮಂಜುನಾಥ್​
KUSHAL V

| Edited By:

Jul 09, 2020 | 5:32 PM

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮನುಕುಲಕ್ಕೆ ತಲ್ಲಣ ಉಂಟುಮಾಡಿರೋ ಕೊರೊನಾ ಇದೀಗ ಊಸರವಳ್ಳಿಯಂತೆ ತನ್ನ ಬಣ್ಣವನ್ನ ಬದಲಿಸುತ್ತಿದೆ. ದಿನೇ ದಿನೆ ರೂಪಾಂತರಗೊಳ್ಳುತ್ತಿರುವ ಡೆಡ್ಲಿ ವೈರಸ್​ ಜೊತೆಗೆ ಹೊಸ ಸೋಂಕಿನ ಲಕ್ಷಣಗಳೂ ಬೆಳಕಿಗೆ ಬರುತ್ತಿವೆ.

ಇದೀಗ ತಲೆನೋವು ಮತ್ತು ಮೈ-ಕೈ ನೋವು ಸಹ ಸೋಂಕಿನ ಹೊಸ ಲಕ್ಷಣಗಳು ಎಂದು ತಿಳಿದುಬಂದಿದೆ. ಈ ಮಾಹಿತಿಯನ್ನ ಕೊವಿಡ್ ಟಾಸ್ಕ್‌ಫೋರ್ಸ್ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ಡಾ.ಸಿ.ಎನ್. ಮಂಜುನಾಥ್ ನೀಡಿದ್ದಾರೆ.

ನಿಮಗೇನಾದರೂ ತಲೆನೋವು ಅಥವಾ ಮೈ-ಕೈ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಾ. ಮಂಜುನಾಥ್​ ಹೇಳಿದ್ದಾರೆ. ಯಾಕೆಂದ್ರೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಬಂದವರಲ್ಲಿ ತಲೆನೋವು ಹಾಗೂ ಮೈ-ಕೈ ನೋವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಕೊರೊನಾ ಸೋಂಕಿನ ಸಪ್ತ ಲಕ್ಷಣಗಳು ಯಾವುವು? ಕೊವಿಡ್​ ಟಾಸ್ಕ್‌ಫೋರ್ಸ್ ಸದಸ್ಯ ಡಾ. ಮಂಜುನಾಥ್​ ಹೇಳಿರುವ ಪ್ರಕಾರ ಸೋಂಕಿನ ಲಕ್ಷಣಗಳು ಈ ರೀತಿಯಾಗಿವೆ. 1. ಜ್ವರ 2. ಶೀತ 3. ಕೆಮ್ಮು 4. ಉಸಿರಾಟದ ತೊಂದರೆ 5. ವಾಸನೆ ಗ್ರಹಿಕೆ ಮತ್ತು ರುಚಿ ಗೊತ್ತಾಗದೆ ಇರೋದು 6. ತಲೆನೋವು 7. ಮೈ-ಕೈ ನೋವು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada