AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ನಗರದಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಐದಾರು ಮಕ್ಕಳ ಮೇಲೆ ದಾಳಿ

ವಿಜಯಪುರ ನಗರದಲ್ಲಿನ ಬೀದಿ ನಾಯಿ ಹಾವಳಿ ಬಗ್ಗೆ ಕಳೆದ ಆಗಸ್ಟ್​​ನಲ್ಲೇ ಮನವಿ ಮಾಡಿದ್ದರೂ ಇಲ್ಲಿಯವರೆಗೂ ಯಾವುದೇ ಇಲಾಖೆ ಆಧಿಕಾರಿಗಳು ಸಿಬ್ಬಂದಿಗಳು ಕ್ರಮ ತೆಗೆದುಕೊಂಡಿಲ್ಲ. ಇದೀಗ ಬೀದಿ ನಾಯಿಗಳ ಹಾವಳಿ ಜೋರಾಗಿ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದರೂ ಯಾವುದೇ ಕ್ರಮ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ವಿಜಯಪುರ ನಗರದಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಐದಾರು ಮಕ್ಕಳ ಮೇಲೆ ದಾಳಿ
ಸಾಂದರ್ಭಿಕ ಚಿತ್ರ
ಅಶೋಕ ಯಡಳ್ಳಿ, ವಿಜಯಪುರ
| Updated By: Ganapathi Sharma|

Updated on: Nov 28, 2023 | 9:07 PM

Share

ವಿಜಯಪುರ, ನವೆಂಬರ್ 28: ವಿಜಯಪುರ ನಗರದಲ್ಲಿ (Vijayapura) ಬೀದಿ ನಾಯಿಗಳ (Street Dogs) ಕಾಟ ಜೋರಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಬೀಡು ಬಿಟ್ಟಿರೋ ನಾಯಿಗಳು ಪುಟ್ಟ ಪುಟ್ಟ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿವೆ. ಸೋಮವಾರದಿಂದ ನಗರದ ಬಡಿಕಮಾನ್, ಬಾಗಾಯತ್ ಗಲ್ಲಿ, ದೌಲತ್ ಕೋಟೆ ಹಾಗೂ ಭಾಂಗಿ ಆಸ್ಪತ್ರೆ ಪ್ರದೇಶಗಳಲ್ಲಿ ಬೀದಿ ಬದಿಯ ನಾಯಿಗಳು ಆರೇಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಿವೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಕಳೆದ ಆಗಸ್ಟ್​​​​ನಲ್ಲೇ ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆ ಆಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಕ್ರಮ ತೆಗೆದುಕೊಳ್ಳದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಾಲ್ವರು ಪುಟ್ಟ ಮಕ್ಕಳಳನ್ನು ಕಚ್ಚಿದ್ದ ಬೀದಿ ಬದಿಯ ನಾಯಿಗಳು ಮಂಗಳವಾರ ಸಹ ತಮ್ಮ ಅಟ್ಟಹಾಸವನ್ನು ಮುಂದುವರೆಸಿವೆ. ಮಂಗಳವಾರ ಮೂವರು ಮಕ್ಕಳನ್ನು ಕಚ್ಚಿದ್ದು ಜನರು ಭಯಗೊಳ್ಳುವಂತಾಗಿದೆ. ನಗರದ ಬಡೀ ಕಮಾನ್, ಬಾಗಾಯತ್ ಗಲ್ಲಿ, ಬಾಂಗೀ ಆಸ್ಪತ್ರೆ ಬಳಿ, ದೌಲತ್ ಕೋಟೆ, ಹಕೀಂ ಚೌಕ್ ನ ಸುತ್ತಮುತ್ತ ಬೀದಿಬದಿಯ ನಾಯಿಗಳ ಕಾಟ ಜೋರಾಗಿದೆ. ಶಾಲೆಗೆ ಹೋಗುವ 8 ವರ್ಷದೊಳಗಿನ ಮಕ್ಕಳನ್ನೇ ಗುರಿಯಾಗಿಸೋ ಬೀದಿ ನಾಯಿಗಳು ಮಕ್ಕಳನ್ನು ಮನಬಂದಂತೆ ಕಚ್ಚಿ ಗಾಯಗೊಳಿಸಿವೆ. ಮನೆಯಾಚೆ ಅಂಗಡಿಗೆ ಹೋಗುವಾಗಲೂ ನಾಯಿಗಳು ಅಟ್ಯಾಕ್ ಮಾಡಿವೆ. ನಿನ್ನೆ ನಾಲ್ಕು ಪುಠಾಣಿಗಳ ಮೇಲೆ ಕ್ರೌರ್ಯ ಮಾಡಿದ್ದ ಬೀದಿನಾಯಿಗಳು ಇಂದು ಮತ್ತೇ ಮೂವರು ಮಕ್ಕಳನ್ನು ಕಚ್ಚಿವೆ. ಬೀದಿನಾಯಿಗಳ ದಾಳಿಗೆ ಈ ಭಾಗದ ಮಕ್ಕಳು ಶಾಲೆಗೆ ಹೋಗಲು ಸಹ ಭಯಪಡುತ್ತಿದ್ದಾರೆ. ಮಕ್ಕಳನ್ನು ಪೋಷಕರು ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದಾರೆ. ಇನ್ನು ಕೆಲವರು ಮಕ್ಕಳನ್ನು ಮನೆಯಾಚೆ ಕಳುಹಿಸುವುದನ್ನೇ ಬಿಟ್ಟಿದ್ದಾರೆ. ನಿನ್ನೆ ಹಾಗೂ ಇಂದು ಬೀದಿ ನಾಯಿಗಳ ಕಡಿತಕ್ಕೊಳಗಾದ ಏಳು ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರಿಗೂ ರೆಬೀಸ್ಲಸಿಕೆ ಹಾಕಿ ಉಪಚಾರ ಮಾಡಲಾಗಿದೆ. ಇಷ್ಟೆಲ್ಲಾ ಆವಾಂತರವಾದರೂ ಮಹಾನಗರ ಪಾಲಿಕೆಯವರಾಗಲಿ ಜಿಲ್ಲಾಡಳಿತದ ಆಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸದೇ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆಸಮಾಧಾನ ಹೊರ ಹಾಕಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮತಿ ಮೀರಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಬೀದಿ ನಾಯಿಗಳ ಹತೋಟಿಗೆ ಕ್ರಮ ತೆಗೆದುಕೊಳ್ಳಬೇಕು. ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಸಿಟಿಜನ್ಸ್ ಪೋರಮ್​ನಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ಭಾರತೀಯ ಪುರಾತತ್ವ ಇಲಾಖೆ ಆಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಾಗಿತ್ತು. ನಗರ ಭಾಗದ ಪುರಾತತ್ವ ಸ್ಮಾರಕಗಳನ್ನು ಹೆಚ್ಚು ಬೀದಿ ನಾಯಿಗಳ ವಾಸ ಮಾಡುತ್ತವೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಾವಳಿ ಮಾಡುತ್ತಿವೆ. ಆದ್ದರಿಂದ ಪುರಾತತ್ವ ಇಲಾಖೆ ಆಧಿಕಾರಿಗಳಿಗೆ ಸಿಟಿಜನ್ ಫೋರಮ್ ಮೂಲಕ ಮನವಿ ಸಲ್ಲಿಕೆ ಮಾಡಲಾಗಿದೆ. ಕಳೆದ ಆಗಸ್ಟ್​​ನಲ್ಲೇ ಮನವಿ ಮಾಡಿದ್ದರೂ ಇಲ್ಲಿಯವರೆಗೂ ಯಾವುದೇ ಇಲಾಖೆ ಆಧಿಕಾರಿಗಳು ಸಿಬ್ಬಂದಿಗಳು ಕ್ರಮ ತೆಗೆದುಕೊಂಡಿಲ್ಲ. ಇದೀಗಾ ಬೀದಿ ನಾಯಿಗಳ ಹಾವಳಿ ಜೋರಾಗಿ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದರೂ ಯಾವುದೇ ಕ್ರಮ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ: ವಿಜಯಪುರ: ಮಕ್ಕಳ ಮೇಲೆ ನಾಯಿಗಳ ದಾಳಿ, ನಾಲ್ವರಿಗೆ ಗಾಯ

ನಗರದಲ್ಲಿ ಬೀದಿ ನಾಯಿಗಳ ಕಾಟ ಮಾತ್ರ ಮಿತಿ ಮೀರಿದೆ. ನಿನ್ನೆಯಿಂದಲೇ ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿರೋ ಬೀದಿ ನಾಯಿಗಳು ದೊಡ್ಡವರ ಮೇಲೆಯೂ ದಾಳಿ ಮಾಡೋ ಸಾಧ್ಯತೆಯಿದೆ. ಇನ್ನು ನಗರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ನಿರ್ಲಕ್ಷ್ಯವೂ ಬೀದಿ ನಾಯಿಗಳ ಹಾವಳಿಗೆ ಕಾರಣವಾಗಿದೆ. ಮಾಂಸದಂಗಡಿ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಬೀದಿ ನಾಯಿಗಳು ಮಾಂಸದ ತ್ಯಾಜ್ಯವನ್ನು ತಿನ್ನುತ್ತಾ ಜನರ ಮೇಲೆ ದಾಳಿ ಮಾಡುತ್ತಿವೆ. ಈ ನಿಟ್ಟಿನಲ್ಲೂ ಮಹಾನಗರ ಪಾಲಿಕೆಯ ಆಧಿಕಾರಿಗಳು ಆಯುಕ್ತರು ಹಾಗೂ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕಿದೆ. ಸದ್ಯ ಬೀದಿನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡಿದರೆ ಮಾತ್ರ ಇದಕ್ಕೆ ಪರಿಹಾರ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ