ಆಹಾರ ಅರಸಿ ಬಂದಿದ್ದ ಜಿಂಕೆ ಮೇಲೆ ನಾಯಿಗಳ ಅಟ್ಯಾಕ್, ಜಿಂಕೆ ಸಾವು
ಮೈಸೂರು: ನಾಯಿಗಳ ದಾಳಿಗೆ ಜಿಂಕೆ ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕು ಕೋಣನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕಾಡಿನಿಂದ ಕೋಣನೂರಿಗೆ ಆಹಾರ ಅರಸಿ ಬಂದಿದ್ದ ಜಿಂಕೆಯನ್ನ ನಾಲ್ಕು ಬೀದಿ ನಾಯಿಗಳು ಅಟ್ಟಾಡಿಸಿ ಕಚ್ಚಿ ಕೊಂದು ಹಾಕಿವೆ. ರೈತ ಯೋಗೇಶ್ ಜಮೀನಿನಲ್ಲಿ ನಾಲ್ಕು ನಾಯಿಗಳು ಜಿಂಕೆಯನ್ನು ಅಟ್ಯಾಕ್ ಮಾಡಿವೆ. ಈ ವೇಳೆ ಅಲ್ಲೆ ಇದ್ದ ಯೋಗೇಶ್ ಜಿಂಕೆಯನ್ನು ರಕ್ಷಣೆ ಮಾಡಲು ಯತ್ನಸಿ ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ಜಿಂಕೆ ಮೃತಪಟ್ಟಿದೆ. ನಾಯಿಗಳ ದಾಳಿ ಮೊಬೈಲ್‌ನಲ್ಲಿ ಸೆರೆ ಮಾಡಿದ್ದಾರೆ. ಸ್ಥಳಕ್ಕೆ […]
ಮೈಸೂರು: ನಾಯಿಗಳ ದಾಳಿಗೆ ಜಿಂಕೆ ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕು ಕೋಣನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕಾಡಿನಿಂದ ಕೋಣನೂರಿಗೆ ಆಹಾರ ಅರಸಿ ಬಂದಿದ್ದ ಜಿಂಕೆಯನ್ನ ನಾಲ್ಕು ಬೀದಿ ನಾಯಿಗಳು ಅಟ್ಟಾಡಿಸಿ ಕಚ್ಚಿ ಕೊಂದು ಹಾಕಿವೆ.
ರೈತ ಯೋಗೇಶ್ ಜಮೀನಿನಲ್ಲಿ ನಾಲ್ಕು ನಾಯಿಗಳು ಜಿಂಕೆಯನ್ನು ಅಟ್ಯಾಕ್ ಮಾಡಿವೆ. ಈ ವೇಳೆ ಅಲ್ಲೆ ಇದ್ದ ಯೋಗೇಶ್ ಜಿಂಕೆಯನ್ನು ರಕ್ಷಣೆ ಮಾಡಲು ಯತ್ನಸಿ ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ಜಿಂಕೆ ಮೃತಪಟ್ಟಿದೆ. ನಾಯಿಗಳ ದಾಳಿ ಮೊಬೈಲ್‌ನಲ್ಲಿ ಸೆರೆ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 8:05 am, Tue, 3 March 20