30 ಜನರಿಗೆ ಕಚ್ಚಿ ಗಾಯಗೊಳಿಸಿದ ಮಂಗ ಬಲೆಯನ್ನೂ ಕತ್ತರಿಸಿ ಪರಾ ರಿ! ಆತಂಕದಲಿ ಜನ

ಧಾರವಾಡ: ಧಾರವಾಡದಲ್ಲಿ ಮಂಗವೊಂದು ಹಲವು ಅವಾಂತರ ಸೃಷ್ಟಿಸಿದೆ. ಕಳೆದ ಒಂದೆರಡು ವಾರಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಹಾವಳಿ ನಡೆಸಿದ್ದು ಅನೇಕರಿಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದ ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರಿಂದ ಮಂಗವನ್ನು ಹಿಡಿಯಲು ಬಂದ ಸಿಬ್ಬಂದಿ ಬರೀ ಕೈಯಿಂದ ಮರಳುವಂತಾಗಿದೆ. ಧಾರವಾಡ ನಗರದ ಮುರುಘಾ ಮಠ ಹಾಗೂ ಡಿಪೋ ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ಗಂಡು ಮಂಗವೊಂದು ಹಾವಳಿ ನಡೆಸುತ್ತಿದೆ. ಜನರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸುತ್ತಿರೋ ಮಂಗನ ವರ್ತನೆಯಿಂದ ಜನರು […]

30 ಜನರಿಗೆ ಕಚ್ಚಿ ಗಾಯಗೊಳಿಸಿದ ಮಂಗ ಬಲೆಯನ್ನೂ ಕತ್ತರಿಸಿ ಪರಾ ರಿ! ಆತಂಕದಲಿ ಜನ
Follow us
ಆಯೇಷಾ ಬಾನು
|

Updated on:May 29, 2020 | 2:30 PM

ಧಾರವಾಡ: ಧಾರವಾಡದಲ್ಲಿ ಮಂಗವೊಂದು ಹಲವು ಅವಾಂತರ ಸೃಷ್ಟಿಸಿದೆ. ಕಳೆದ ಒಂದೆರಡು ವಾರಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಹಾವಳಿ ನಡೆಸಿದ್ದು ಅನೇಕರಿಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದ ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರಿಂದ ಮಂಗವನ್ನು ಹಿಡಿಯಲು ಬಂದ ಸಿಬ್ಬಂದಿ ಬರೀ ಕೈಯಿಂದ ಮರಳುವಂತಾಗಿದೆ.

ಧಾರವಾಡ ನಗರದ ಮುರುಘಾ ಮಠ ಹಾಗೂ ಡಿಪೋ ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ಗಂಡು ಮಂಗವೊಂದು ಹಾವಳಿ ನಡೆಸುತ್ತಿದೆ. ಜನರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸುತ್ತಿರೋ ಮಂಗನ ವರ್ತನೆಯಿಂದ ಜನರು ಆತಂಕಗೊಂಡಿದ್ದಾರೆ. ಈಗಾಗಲೇ ಸುಮಾರು 30 ಜನರಿಗೆ ಕಚ್ಚಿರೋ ಮಂಗ ದಿನದಿಂದ ದಿನಕ್ಕೆ ಹಾವಳಿಯನ್ನು ಹೆಚ್ಚಿಸುತ್ತಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗವನ್ನು ಹಿಡಿಯಲು ಬಲೆ ಸಮೇತ ಬಂದ ಸಿಬ್ಬಂದಿಯನ್ನೇ ಯಾಮಾರಿಸಿ ಮಂಗ ಪರಾರಿಯಾಗಿದೆ.

ಬಲೆಯನ್ನೇ ಕತ್ತರಿಸಿ ಮಂಗ ಪರಾರಿ: ಮಂಗವನ್ನು ಹಿಡಿಯಲು ತಂದಿದ್ದ ಬಲೆಯಲ್ಲಿ ಬಾಳೆ ಹಣ್ಣನ್ನು ಇಡಲಾಗಿತ್ತು. ಮಂಗ ಬಾಳೆ ಹಣ್ಣು ತಿನ್ನಲು ಬಲೆಯೊಳಗೆ ಬರುತ್ತಿದ್ದಂತೆಯೇ ಸಿಬ್ಬಂದಿ ಅದನ್ನು ಬಲೆಯೊಳಗೆ ಬಂಧಿಯಾಗುವಂತೆ ಮಾಡಿದ್ರು. ಅದರಿಂದ ಆತಂಕಗೊಂಡ ಮಂಗ ಕೂಗಾಡತೊಡಗಿತು. ಅದು ಕೊಂಚ ತಣ್ಣಗಾಗಲಿ ಅಂತಾ ಸಿಬ್ಬಂದಿ ಕೊಂಚ ಸಮಯ ಕಾದರು. ಅವರ ಅಂದಾಜಿನಂತೆ ಮಂಗವೂ ಸುಮ್ಮನಾಯಿತು. ಆದರೆ ಸಿಬ್ಬಂದಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಚಾಲಾಕಿಯಾಗಿದ್ದ ಮಂಗ ಬಲೆಯೊಳಗೆ ಸುಮ್ಮನೇ ಕೂತಿರಲಿಲ್ಲ. ಒಳಗೆ ಕೂತುಕೊಂಡು ನಿಧಾನವಾಗಿ ಬಲೆಯನ್ನು ಕತ್ತರಿಸುತ್ತಿತ್ತು.

ಯಾವಾಗ ಬಲೆ ಕತ್ತರಿಸಿತೋ ಕೂಡಲೇ ಮಂಗ ಅಲ್ಲಿಂದ ಎಲ್ಲರನ್ನೂ ಯಾಮಾರಿಸಿ ಪರಾರಿಯಾಗಿದೆ. ಸಿಬ್ಬಂದಿ ಎಷ್ಟೇ ಜಾಣತನದಿಂದ ಬಲೆ ಬೀಸಿ ಹಿಡಿದರೂ ಅದರಿಂದ ಯಾವುದೇ ಪ್ರಯೋಜನವಾಗಲೇ ಇಲ್ಲ. ಮುಂದಿನ ದಿನಗಳಲ್ಲಿ ಮತ್ತೆಷ್ಟು ಜನರ ಮೇಲೆ ಇದು ಹಲ್ಲೆ ಮಾಡಲಿದೆಯೋ ಅನ್ನೋ ಆತಂಕ ಸ್ಥಳೀಯರದ್ದಾಗಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಈ ಮಂಗವನ್ನು ಹಿಡಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Published On - 2:15 pm, Fri, 29 May 20

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ