ಪುರಾತನ ಪಾತಕಿ ಮತ್ತೆ ಜೈಲೊಳಕ್ಕೆ ಬತ್ತೀನಿ ಅಂದ್ರೂ, ಪೊಲೀಸ್ರು ಬಿಟ್ಕೊಳ್ಳಲಿಲ್ಲ! ಯಾಕೆ?

ಆ ದಿನಗಳಲ್ಲಿ ಕುಖ್ಯಾತಿಯ ತುದಿಯೇರಿದ್ದ ಗ್ಯಾಂಗ್​ಸ್ಟರ್ ಅವ. ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ. ಆದ್ರೆ ಪೆರೋಲ್ ಮುಗಿದಿದೆ. ಶರಣಾಗಿ ಒಳಗೆ ಬರುವೆ, ಬಿಟ್ಕೊಳ್ಳಿ ಅಂತಾ ಸೀದಾ ಜೈಲಿನ ಮುಂದೆ ಬಂದು ನಿಂತ. ಆದ್ರೆ ಜೈಲೊಳಕ್ಕೆ ಬತ್ತೀನಿ ಅಂತಾ ಕೈಮುಗಿದು ನಿಂತಿದ್ದ ಆ ಡಾನ್​ನನ್ನು ಪೊಲೀಸರು ಬಿಲ್ಕುಲ್ ಒಳಕ್ಕೆ ಬಿಟ್ಕೊಳ್ಳಲಿಲ್ಲ! ತಳೋಜಾ ಕಾರಾಗೃಹದ ಮುಂದೆ ದೊಡ್ಡ ಹೈಡ್ರಾಮಾನೇ ನಡೆಯಿತು! ಇದೆಲ್ಲ ನಡೆದಿದ್ದು ಮೊನ್ನೆ.. ನವಿ ಮುಂಬೈನಲ್ಲಿರುವ ತಳೋಜಾ ಮಧ್ಯವರ್ತಿ ಕಾರಾಗೃಹದಲ್ಲಿ. ಪುರಾತನ ಪಾತಕಿ ಅರುಣ್ ಗಾವಳಿ ತನ್ನ ವಕೀಲರ […]

ಪುರಾತನ ಪಾತಕಿ ಮತ್ತೆ ಜೈಲೊಳಕ್ಕೆ ಬತ್ತೀನಿ ಅಂದ್ರೂ, ಪೊಲೀಸ್ರು ಬಿಟ್ಕೊಳ್ಳಲಿಲ್ಲ! ಯಾಕೆ?
Follow us
ಸಾಧು ಶ್ರೀನಾಥ್​
| Updated By:

Updated on:May 29, 2020 | 2:53 PM

ಆ ದಿನಗಳಲ್ಲಿ ಕುಖ್ಯಾತಿಯ ತುದಿಯೇರಿದ್ದ ಗ್ಯಾಂಗ್​ಸ್ಟರ್ ಅವ. ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ. ಆದ್ರೆ ಪೆರೋಲ್ ಮುಗಿದಿದೆ. ಶರಣಾಗಿ ಒಳಗೆ ಬರುವೆ, ಬಿಟ್ಕೊಳ್ಳಿ ಅಂತಾ ಸೀದಾ ಜೈಲಿನ ಮುಂದೆ ಬಂದು ನಿಂತ. ಆದ್ರೆ ಜೈಲೊಳಕ್ಕೆ ಬತ್ತೀನಿ ಅಂತಾ ಕೈಮುಗಿದು ನಿಂತಿದ್ದ ಆ ಡಾನ್​ನನ್ನು ಪೊಲೀಸರು ಬಿಲ್ಕುಲ್ ಒಳಕ್ಕೆ ಬಿಟ್ಕೊಳ್ಳಲಿಲ್ಲ!

ತಳೋಜಾ ಕಾರಾಗೃಹದ ಮುಂದೆ ದೊಡ್ಡ ಹೈಡ್ರಾಮಾನೇ ನಡೆಯಿತು! ಇದೆಲ್ಲ ನಡೆದಿದ್ದು ಮೊನ್ನೆ.. ನವಿ ಮುಂಬೈನಲ್ಲಿರುವ ತಳೋಜಾ ಮಧ್ಯವರ್ತಿ ಕಾರಾಗೃಹದಲ್ಲಿ. ಪುರಾತನ ಪಾತಕಿ ಅರುಣ್ ಗಾವಳಿ ತನ್ನ ವಕೀಲರ ಜೊತೆ ತಳೋಜಾ ಜೈಲಿಗೆ ಆಗಮಿಸಿದ್ದ. ಆದ್ರೆ ಕೋಟೆ ಕಟ್ಟಿಕೊಂಡ ಜೈಲು ಪೊಲೀಸರು ಆತನನ್ನು ಒಳಕ್ಕೆ ಬರಲೇಬೇಡ ಎಂದು ದುಂಬಾಲುಬಿದ್ದರು. ಬಟ್ ವೈ ಎಂದು ವಕೀಲ ಮೀರ್ ಅಲಿ ಕೇಳಿದ್ದಕ್ಕೆ ಕೊರೊನಾ ರಾಕ್ಷಸನ ಹಾವಳಿ. ಅದಕ್ಕೇ ಗಾವಳಿ ಒಳಕ್ಕೆ ಬರೋದು ಬೇಡ, ವಾಪಸ್​ ಕರಕೊಂಡು ಹೋಗು ಅಂದಿದ್ದಾರೆ.

ಮತ್ತೊಂದು ಮೂಲದ ಪ್ರಕಾರ ಗಾವಳಿಯ ಶತ್ರುಗಳೆನಿಸಿರುವ ಅಬುಸಲೇಂ ಮತ್ತು ಅಶ್ವಿನ್ ನಾಯ್ಕ್ ಎಂಬ ಇನ್ನಿಬ್ಬರು ಡಾನ್​ಗಳು ಈಗಾಗಲೇ ತಳೋಜಾ ಕಾರಾಗೃಹದಲ್ಲಿದ್ದಾರೆ. ಹಾಗಾಗಿ ಗಾವಳಿಗೆ ಜೀವ ಬೆದರಿಕೆ ಎದುರಾಗುತ್ತದೆ ಎಂದು ಎಣಿಸಿದ ಪೊಲೀಸರು ಗಾವಳಿಗೆ ಬರುವುದು ಬೇಡ ಎಂದಿರುವುದಾಗಿ ತಿಳಿದುಬಂದಿದೆ.

ಈ ಮಧ್ಯೆ ಬಾಂಬೆ ಹೈಕೋರ್ಟ್​ನ ನಾಗಪುರ ಪೀಠವು ಗಾವಳಿಗೆ ಪೆರೋಲ್ ಅವಧಿಯನ್ನು ಇನ್ನೂ 5 ಕ್ಕೆ ವಿಸ್ತರಿಸುವ ಮೂಲಕ ಪೊಲೀಸರ ಆತಂಕವನ್ನು ದೂರ ಮಾಡಿದೆ. ಅಂಡರ್​ವರ್ಲ್ಡ್​ ಡಾನ್ ಅರುಣ್ ಗಾವಳಿ ಶಿವಸೇನೆಯ ಕಾರ್ಪೊರೆಟರ್​ನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

Published On - 2:39 pm, Fri, 29 May 20

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್