ಲಾಕ್​ಡೌನ್​: ಬೀದಿ ಪಾಲಾದ ಬೀದಿ ಬದಿ ವ್ಯಾಪಾರಿಗಳಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು: ಲಾಕ್​ಡೌನ್​ನಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲಯಲ್ಲಿ ಬೀದಿ ಬದಿ ವ್ಯಾಪಾರಿಗಳು ಉಪವಾಸ ಸತ್ಯಾಗ್ರಹ ಮಾಡೋಕೆ ಮುಂದಾದರು. ನಗರದಲ್ಲಿ 3 ತಿಂಗಳಿಂದ ಸರಿಯಾಗಿ ವ್ಯಾಪಾರ ಆಗುತ್ತಿಲ್ಲ. ಇದರಿಂದಾಗಿ ಮನೆ ಬಾಡಿಗೆ ಕಟ್ಟುವುದಕ್ಕೂ ಆಗುತ್ತಿಲ್ಲ. ಸಾಲ ಮಾಡಿ ಊಟ ಮಾಡೋ ಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ರಾಜ್ಯ ಸರ್ಕಾರ ನಮ್ಮ ನೆರವಿಗೆ ಏನೂ ಕ್ರಮ ಕೈಗೊಂಡಿಲ್ಲವೆಂದು ಧರಣಿ ನಡೆಸಿದರು. ಜೊತೆಗೆ, ಸಿಎಂ ಯಡಿಯೂರಪ್ಪ ಕೂಡಲೇ 15 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಇಂದು ಒಂದು […]

ಲಾಕ್​ಡೌನ್​: ಬೀದಿ ಪಾಲಾದ ಬೀದಿ ಬದಿ ವ್ಯಾಪಾರಿಗಳಿಂದ ಉಪವಾಸ ಸತ್ಯಾಗ್ರಹ
Edited By:

Updated on: Jul 18, 2020 | 12:33 PM

ಬೆಂಗಳೂರು: ಲಾಕ್​ಡೌನ್​ನಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲಯಲ್ಲಿ ಬೀದಿ ಬದಿ ವ್ಯಾಪಾರಿಗಳು ಉಪವಾಸ ಸತ್ಯಾಗ್ರಹ ಮಾಡೋಕೆ ಮುಂದಾದರು. ನಗರದಲ್ಲಿ 3 ತಿಂಗಳಿಂದ ಸರಿಯಾಗಿ ವ್ಯಾಪಾರ ಆಗುತ್ತಿಲ್ಲ. ಇದರಿಂದಾಗಿ ಮನೆ ಬಾಡಿಗೆ ಕಟ್ಟುವುದಕ್ಕೂ ಆಗುತ್ತಿಲ್ಲ. ಸಾಲ ಮಾಡಿ ಊಟ ಮಾಡೋ ಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ರಾಜ್ಯ ಸರ್ಕಾರ ನಮ್ಮ ನೆರವಿಗೆ ಏನೂ ಕ್ರಮ ಕೈಗೊಂಡಿಲ್ಲವೆಂದು ಧರಣಿ ನಡೆಸಿದರು. ಜೊತೆಗೆ, ಸಿಎಂ ಯಡಿಯೂರಪ್ಪ ಕೂಡಲೇ 15 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಇಂದು ಒಂದು ದಿನದ ಸತ್ಯಾಗ್ರಹ ಹಮ್ಮಿಕೊಂಡಿದ್ದರು.