ಸ್ವಯಂ ಪ್ರೇರಿತರಾಗಿ ಟ್ರಾಪಿಕ್​ ನಿಯಂತ್ರಿಸುತ್ತಿದ್ದ ಜನರ ಮೇಲೆ ಸಬ್ ಇನ್ಸ್​ಪೆಕ್ಟರ್​ ದರ್ಪ, ಪ್ರತಿಭಟನೆಗೆ ಮುಂದಾದ ಸಾರ್ವಜನಿಕರು

|

Updated on: Dec 26, 2020 | 10:27 AM

ಅವಾಚ್ಯ ಶಬ್ದಗಳಿಂದ ಸಾರ್ವಜನಿಕರಿಗೆ ಬೈದು, ಹೊಯ್ಸಳ ಕರೆದು ದರ್ಪ ತೋರಿದ್ದಾರೆ. ಹೀಗಾಗಿ ಸಬ್ ಇನ್ಸ್ಪೆಕ್ಟರ್ ರವಿ ಮಡಿವಾಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು ರವಿ ಮಡಿವಾಳ ವಿರುದ್ಧ ರಸ್ತೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಸ್ವಯಂ ಪ್ರೇರಿತರಾಗಿ ಟ್ರಾಪಿಕ್​ ನಿಯಂತ್ರಿಸುತ್ತಿದ್ದ ಜನರ ಮೇಲೆ ಸಬ್ ಇನ್ಸ್​ಪೆಕ್ಟರ್​ ದರ್ಪ, ಪ್ರತಿಭಟನೆಗೆ ಮುಂದಾದ ಸಾರ್ವಜನಿಕರು
ಸಬ್ ಇನ್ಸ್ಪೆಕ್ಟರ್ ರವಿ ಮಡಿವಾಳ
Follow us on

ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ಜನರನ್ನು ಕಂಡರೆ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೊಡಿಕೊಂಡಿರುವ ಘಟನೆ ಬೆಂಗಳೂರಿನ ವಿಜಯನಗರದ ವಿದ್ಯಾರಣ್ಯನಗರದಲ್ಲಿ ನಡೆದಿದೆ.

ನಿನ್ನೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ ಎಂದು, ಅಲ್ಲಿನ ಸ್ಥಳೀಯರು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರು. ಈ ವೇಳೆ ರಾಂಗ್ ರೂಟ್​ನಲ್ಲಿ ಬಂದ ಕೆಂಪಪುರ ಅಗ್ರಹಾರದ ಸಬ್ ಇನ್ಸ್​ಪೆಕ್ಟರ್​ ರವಿ ಮಡಿವಾಳ ಸಾರ್ವಜನಿಕರ ಮೇಲೆ ದರ್ಪ ತೋರಿದ್ದಾರೆ. ಟ್ರಾಫಿಕ್​ ನಿಯಂತ್ರಿಸುತ್ತಿದ್ದ ಜನರ ಬಳಿ ಬಂದ ಎಸ್​ಐ, ನೀನ್ ಯಾರ್ ಟ್ರಾಫಿಕ್ ಕಂಟ್ರೋಲ್ ಮಾಡೊಕ್ಕೆ ಐಡಿ ತೊರ್ಸೊ ಎಂದು ಆವಾಜ್ ಹಾಕಿದ್ದಾರೆ.

ಜೊತೆಗೆ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರಿಗೆ ಬೈದು, ಹೊಯ್ಸಳ ಕರೆದು ದರ್ಪ ತೋರಿದ್ದಾರೆ. ಹೀಗಾಗಿ ಸಬ್ ಇನ್ಸ್ಪೆಕ್ಟರ್ ರವಿ ಮಡಿವಾಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು ರವಿ ಮಡಿವಾಳ ವಿರುದ್ಧ ರಸ್ತೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ನಮಗೆ ಇಂತಹ ಪೋಲಿಸರು ಬೇಡ, ವರ್ಗಾವಣೆ ಮಾಡಿ ಎಂದು tv9 ಕ್ಯಾಮರಾ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ