
ಸಚಿವ ಸುಧಾಕರ್ಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿವಹಿಸಲಾಗಿದೆ. ಅವುಗಳೆಂದರೆ, ಮಲ್ಕಾಜ್ ಗಿರಿ, ಖುತ್ಪುಲ್ಲಾಪುರ್, ಕುಕ್ಕಟ್ಪಲ್ಲಿ ಮತ್ತು ಉಪ್ಪಳ್.
ಸತೀಶ್ ರೆಡ್ಡಿಗೆ ಸಿಕಂದರಾಬಾದ್, ಸಿಕಂದರಾಬಾದ್ ಕಂಟೋನ್ಮೆಂಟ್, ಸನತ್ ನಗರ, ಜ್ಯುಬಿಲಿ ಹಿಲ್ಸ್, ಖೈರತಾಬಾದ್, ಅಂಬರ್ ಪೇಟ್ ಮತ್ತು ಮುಶೀರಾಬಾದ್-ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಲಾಗಿದೆ.
ಇಂದು ಹೈದರಾಬಾದ್ನಲ್ಲಿರುವ ತೆಲಂಗಾಣ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಚುನಾವಣಾ ಉಸ್ತುವಾರಿ ಆಗಿರುವ ಭೂಪೇಂದ್ರ ಯಾದವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜವಾಬ್ದಾರಿಗಳನ್ನು ಹಂಚಲಾಯಿತು. ಸದರಿ ಸಭೆಯಲ್ಲಿ ಡಾ. ಸುಧಾಕರ ಮತ್ತು ಶಾಸಕ ಸತೀಶ್ ರೆಡ್ಡಿ ಸಹ ಪಾಲ್ಗೊಂಡಿದ್ದರು.