AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗೈಯಲ್ಲಿ ಆರೋಗ್ಯ: ಪಾಲಿಸಿ ಪಂಚ ಸೂತ್ರ, ಪಡೆಯಿರಿ ಉತ್ತಮ ಆರೋಗ್ಯ!

ಬೆಂಗಳೂರು: ಇಂದು ಪ್ರಕೃತಿ ಚಿಕಿತ್ಸೆ ದಿನ. ಪೃಕೃತಿ ಚಿಕಿತ್ಸೆಯ ಬಗ್ಗೆ ಮೊದಲು ಜಾಗೃತಿ ಮೂಡಿಸಿದವರು ಮಹಾತ್ಮಾ ಗಾಂಧಿ. ಹಾಗಾಗಿ, ಅಕ್ಟೋಬರ್ 2ರಂದು ಪ್ರಕೃತಿ ಚಿಕಿತ್ಸಾ ದಿನವನ್ನು ಆಚರಿಸುತ್ತಿದ್ದರು. ಆದರೆ, ಇತ್ತೀಚೆಗೆ ನವೆಂಬರ್ 18 ರಂದು ಪ್ರಕೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂದಿನ ಕೊರೊನಾ ಕಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ನಮ್ಮ ಆರೋಗ್ಯದ ಸುರಕ್ಷತೆಗಾಗಿ ನಾವು ಪಂಚತಂತ್ರದ ನಿಯಮಗಳನ್ನ ಅನುಸರಿಸುವುದು ಲಾಭದಾಯಕ. ಏನು ಈ ಪಂಚತಂತ್ರ ಸೂತ್ರ? 1. 4-5 ಲೀ. ನೀರು ಕುಡಿಯಿರಿ: ದೇಹಕ್ಕೆ ನೀರಿನ ಅವಶ್ಯಕತೆ ತುಂಬಾ ಇದೆ. ವಿಸರ್ಜನಾಂಗವು ಸರಿಯಾದ […]

ಅಂಗೈಯಲ್ಲಿ ಆರೋಗ್ಯ: ಪಾಲಿಸಿ ಪಂಚ ಸೂತ್ರ, ಪಡೆಯಿರಿ ಉತ್ತಮ ಆರೋಗ್ಯ!
KUSHAL V
|

Updated on: Nov 18, 2020 | 7:05 PM

Share

ಬೆಂಗಳೂರು: ಇಂದು ಪ್ರಕೃತಿ ಚಿಕಿತ್ಸೆ ದಿನ. ಪೃಕೃತಿ ಚಿಕಿತ್ಸೆಯ ಬಗ್ಗೆ ಮೊದಲು ಜಾಗೃತಿ ಮೂಡಿಸಿದವರು ಮಹಾತ್ಮಾ ಗಾಂಧಿ. ಹಾಗಾಗಿ, ಅಕ್ಟೋಬರ್ 2ರಂದು ಪ್ರಕೃತಿ ಚಿಕಿತ್ಸಾ ದಿನವನ್ನು ಆಚರಿಸುತ್ತಿದ್ದರು. ಆದರೆ, ಇತ್ತೀಚೆಗೆ ನವೆಂಬರ್ 18 ರಂದು ಪ್ರಕೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇಂದಿನ ಕೊರೊನಾ ಕಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ನಮ್ಮ ಆರೋಗ್ಯದ ಸುರಕ್ಷತೆಗಾಗಿ ನಾವು ಪಂಚತಂತ್ರದ ನಿಯಮಗಳನ್ನ ಅನುಸರಿಸುವುದು ಲಾಭದಾಯಕ.

ಏನು ಈ ಪಂಚತಂತ್ರ ಸೂತ್ರ? 1. 4-5 ಲೀ. ನೀರು ಕುಡಿಯಿರಿ: ದೇಹಕ್ಕೆ ನೀರಿನ ಅವಶ್ಯಕತೆ ತುಂಬಾ ಇದೆ. ವಿಸರ್ಜನಾಂಗವು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಮಾನವನ ದೇಹಕ್ಕೆ ನೀರು ಅತ್ಯಗತ್ಯ. ದೇಹದಲ್ಲಿನ ವಿಶಾಂಷವನ್ನು ಹೊರಹಾಕಲು ನೀರು ಅತ್ಯಂತ ಸಹಾಯಕಾರಿ. ಹಾಗಾಗಿ, ದಿನಕ್ಕೆ ಒಬ್ಬ ವ್ಯಕ್ತಿ 4-5ಲೀ. ನೀರು ಸೇವಿಸಲೇ ಬೇಕು.

2. ದಿನಕ್ಕೆ ಕೇವಲ 2 ಬಾರಿ ಆಹಾರ: ನಮ್ಮ ಆಹಾರದಲ್ಲಿ ಹೆಚ್ಚಾಗಿ ಧಾನ್ಯಗಳು ಹಾಗೂ ಘನ ಆಹಾರಗಳನ್ನು ಸೇವಿಸುವುದು ಹೆಚ್ಚು. ಆದ್ದರಿಂದ, ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ತನ್ನ ಹತೋಟಿಯನ್ನು ಕಡಿಮೆ ಮಾಡಿಕೊಳ್ಳುತ್ತಾ ಬರುತ್ತವೆ. ಇದರಿಂದ ಜೀರ್ಣಾಂಗಗಳು ಕುಂಠಿತಗೊಳ್ಳುತ್ತವೆ. ಇದು ನಮ್ಮ ದೇಹದ ಅಸಮತೋಲನೆಗೆ ಕಾರಣವಾಗುವುದು.

3. ವಾರಕ್ಕೆ ಒಂದು ಬಾರಿ ಉಪವಾಸ: ದಿನವಿಡೀ ನಮ್ಮ ದೇಹದ ಜೀರ್ಣಾಂಗಗಳು ಕಾರ್ಯ ನಿರ್ವಹಿಸುತ್ತದೆ. ಇದರಿಂದ ಒತ್ತಡ ಉಂಟಾಗುವ ಸಾಧ್ಯತೆಗಳೂ ಹೆಚ್ಚು. ಹಾಗಾಗಿ, ನಮ್ಮ ಪಚನ ವ್ಯವಸ್ಥೆಗೆ ಕೊಂಚ ವಿರಾಮ ಸಿಗುವುದು ಉತ್ತಮ. ವಾರದಲ್ಲಿ ಒಂದು ಬಾರಿಯಾದರೂ ಉಪವಾಸ ಮಾಡುವುದರಿಂದ ದೇಹದ ಜೀರ್ಣಾಂಗಗಳು ಸ್ವಲ್ಪ ರಿಲಾಕ್ಸ್​ ಆಗಲು ಅವಕಾಶ ಸಿಗುತ್ತದೆ.

4. ದಿನಕ್ಕೆ ಕನಿಷ್ಠ 1 ಗಂಟೆ ವ್ಯಾಯಾಮ: ದಿನಕ್ಕೆ ಕನಿಷ್ಠ 1 ಗಂಟೆ ವ್ಯಾಯಾಮ ಮಾಡುವುದರಿಂದ ಮನುಷ್ಯನ ದೇಹದ ಮಾಂಸಖಂಡಗಳು ಗಟ್ಟಿಯಾಗಲು ಸಾಧ್ಯವಾಗುತ್ತದೆ. ಇದರಿಂದ ದೇಹ ಬಲಿಷ್ಠಗೊಳ್ಳುತ್ತವೆ. ಜೊತಗೆ, ವ್ಯಾಯಾಮ ಕೇವಲ ದೇಹದ ಸಮತೋಲನವನ್ನು ಮಾತ್ರವಲ್ಲದೆ ಮಾನಸಿಕ ಸಮತೋಲನಕ್ಕೂ ಸಹಾಯಕಾರಿ.

5. ದಿನದಲ್ಲಿ 1 ಗಂಟೆ ಧ್ಯಾನ: ಒಬ್ಬ ವ್ಯಕ್ತಿ ದಿನದಲ್ಲಿ ಒಂದು ಗಂಟೆಯಾದರೂ ಧ್ಯಾನ ಮಾಡಲೇಬೇಕು. ಇದರಿಂದ ಆತನಬ ಆತ್ಮಸ್ಥೈರ್ಯದ ಜೊತೆ ಮಾನಸಿಕ ಸ್ಥಿತಿ ಸಹ ಸುಧಾರಿಸುತ್ತದೆ. ಇದಲ್ಲದೆ, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಧ್ಯಾನ ತುಂಬಾನೇ ಮುಖ್ಯ. ದೇಹದ ಒತ್ತಡವನ್ನು ಸುಧಾರಿಸಿಕೊಳ್ಳಲು ಧ್ಯಾನ ಸಹಾಯಕಾರಿ.

‘ಪ್ರಕೃತಿ ಚಿಕಿತ್ಸೆ ಹಲವಾರು ಕಾಯಿಲೆಗಳಿಗೆ ರಾಮಬಾಣ’ ಆಯುರ್ವೇದ ಪ್ರಕೃತಿ ಚಿಕಿತ್ಸೆ ಹಲವಾರು ಕಾಯಿಲೆಗಳಿಗೆ ರಾಮಬಾಣ. ಸಾಮಾನ್ಯವಾಗಿ ರೋಗಗಳೆಲ್ಲವೂ ಮಾನವರು ಸೇವಿಸುವ ಆಹಾರದಿಂದ ಬರುವಂಥದ್ದು. ಹಾಗಾಗಿ, ಆಹಾರದ ಸಮತೋಲನವನ್ನು ತಿಳಿದರೆ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇಲ್ಲಿಯವರೆಗೆ, ಪ್ರಕೃತಿ ಚಿಕಿತ್ಸೆಯಿಂದ ಯಾವುದೇ ದುಷ್ಪರಿಣಾಮಗಳು ಸಂಭವಿಸಿಲ್ಲ. ಉತ್ತಮ ಆರೋಗ್ಯ ನಿಮ್ಮ ಕೈಯ್ಯಲ್ಲಿಯೇ ಇದೆ. ನಿಮ್ಮ ಆಹಾರ ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡಿ ಎಂದು ಶಿರಸಿಯ ನಿಸರ್ಗ ಚಿಕಿತ್ಸಾಲಯದ ಮುಖ್ಯ ಆರೋಗ್ಯ ವೈದ್ಯಾಧಿಕಾರಿ ಹಾಗೂ ಸ್ಥಾಪಕ ಡಾ. ಜಿತೇಶ್ ನಂಬಿಯಾರ್ ಹೇಳಿದ್ದಾರೆ.