ವಿಡಿಯೋ ಸಾಕ್ಷ್ಯ ಸಾಕಾಗಲ್ಲ, ದಾರೀಲಿ ಹೋಗುವವರು ದೂರು ಕೊಟ್ರೆ FIR ಹಾಕೋಕೆ ಆಗಲ್ಲ; ಜಾರಕಿಹೊಳಿ ಪರ​ ವಕೀಲ ರಮೇಶ್ ಬ್ಯಾಟಿಂಗ್

Ramesh Jarkiholi CD Controversy: ರಮೇಶ್ ಜಾರಕಿಹೊಳಿ ವಿರುದ್ಧ ಖಾಸಗಿ ದೂರು‌ ನೀಡಿದ್ದಾರೆ. ದಾರಿಯಲ್ಲಿ ಹೋಗುವವನು ಕೂಡ ದೂರು ಕೊಡಬಹುದು. ‘ಸಿಡಿ’ ಇದೆ ಎಂದು ಬೇಕಾಬಿಟ್ಟಿಯಾಗಿ ಮಾತಾಡಬಹುದು. ದೂರುದಾರ ದಿನೇಶ್ ಕಲ್ಲಹಳ್ಳಿ ಬಳಿ ಯಾವುದೇ ಸಾಕ್ಷಿ ಇಲ್ಲ. ವಿಡಿಯೋ ಸಾಕ್ಷ್ಯ ಸಾಕಾಗೋದಿಲ್ಲ ಎಂದು ರಮೇಶ್​ ಜಾರಕಿಹೊಳಿ ಪರ ವಕೀಲ ರಮೇಶ್ ಬ್ಯಾಟಿಂಗ್ ಮಾಡಿದ್ದಾರೆ.

ವಿಡಿಯೋ ಸಾಕ್ಷ್ಯ ಸಾಕಾಗಲ್ಲ, ದಾರೀಲಿ ಹೋಗುವವರು ದೂರು ಕೊಟ್ರೆ FIR ಹಾಕೋಕೆ ಆಗಲ್ಲ; ಜಾರಕಿಹೊಳಿ ಪರ​ ವಕೀಲ ರಮೇಶ್ ಬ್ಯಾಟಿಂಗ್
ರಮೇಶ್ ಜಾರಕಿಹೊಳಿ
Follow us
Skanda
|

Updated on: Mar 05, 2021 | 11:53 AM

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ CD ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ದೂರು ನೀಡದ ಕಾರಣ FIR​ ದಾಖಲಿಸಲಾಗಲ್ಲ. ಕಾನೂನಿನಡಿ ಎಫ್ಐಆರ್ ದಾಖಲಿಸಲು ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ವಕೀಲ ರಮೇಶ್ ಬೆಂಗಳೂರಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾನೂನಿನ ಪ್ರಕಾರ ಸಂತ್ರಸ್ತೆ, ಸಂತ್ರಸ್ತೆ ಪೋಷಕರು ಅಥವಾ ಸಂಬಂಧಿಕರು‌ ದೂರು ನೀಡಬೇಕು. ಅನಾಮಿಕ ದೂರಿನಿಂದ ಕಾನೂನಿನಡಿ FIR ದಾಖಲಿಸಲಾಗಲ್ಲ. ದೂರು ಕೊಟ್ಟವನನ್ನೇ ಹಿಡಿದು ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧ ಖಾಸಗಿ ದೂರು‌ ನೀಡಿದ್ದಾರೆ. ದಾರಿಯಲ್ಲಿ ಹೋಗುವವನು ಕೂಡ ದೂರು ಕೊಡಬಹುದು. ‘ಸಿಡಿ’ ಇದೆ ಎಂದು ಬೇಕಾಬಿಟ್ಟಿಯಾಗಿ ಮಾತಾಡಬಹುದು. ದೂರುದಾರ ದಿನೇಶ್ ಕಲ್ಲಹಳ್ಳಿ ಬಳಿ ಯಾವುದೇ ಸಾಕ್ಷಿ ಇಲ್ಲ. ವಿಡಿಯೋ ಸಾಕ್ಷ್ಯ ಸಾಕಾಗೋದಿಲ್ಲ ಎಂದು ರಮೇಶ್​ ಜಾರಕಿಹೊಳಿ ಪರ ವಕೀಲ ರಮೇಶ್ ಬ್ಯಾಟಿಂಗ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ಬಂದ್ ವಾತಾವರಣ ಅಶ್ಲೀಲ ಸಿಡಿ ವಿಚಾರಕ್ಕಾಗಿ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿದ ನಂತರ ಕ್ಷುದ್ರಗೊಂಡಿರುವ ಅವರ ಬೆಂಬಲಿಗರು ಬೆಳಗಾವಿಯಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನೆಗೆ ಹೆದರಿ ಗೋಕಾಕ್​ನಲ್ಲಿ ಕಾಲೇಜುಗಳನ್ನು ದಿಢೀರನೆ ಬಂದ್ ಮಾಡಲಾಗಿದೆ. ಇನ್ನೊಂದೆಡೆ ಸರ್ಕಾರಿ ಬಸ್​ ಸಂಚಾರ ಸಹ ಗೋಕಾಕ್​ನಲ್ಲಿ ಸ್ಥಗಿತಗೊಂಡಿದ್ದು, ಅರ್ಧ ದಾರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳು ಮತ್ತು ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೊರಟವರು ಪರದಾಡುವಂತಾಗಿದೆ.

ಪ್ರತಿಭಟನೆಯ ಕಾವು ಏರುತ್ತಿದ್ದಂತೆ ರಮೇಶ್ ಜಾರಕಿಹೊಳಿ ಬೆಂಬಲಿಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿದೆ. ಗೋಕಾಕ್- ಧಾರವಾಡ ರಸ್ತೆ ತಡೆದು ಧರಣಿ ನಡೆಸುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ತಕ್ಷಣ ಧಾವಿಸಿದ ಪೊಲೀಸರು ಬೆಂಬಲಿಗನನ್ನು ತಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಗೋಕಾಕ್ ತಾಲೂಕಿನ ಮಾಲದಿನ್ನಿ ಕ್ರಾಸ್​ನಲ್ಲಿ ರಮೇಶ್ ಬೆಂಬಲಿಗರ ಪ್ರತಿಭಟನೆ ಜೋರಾಗಿದ್ದು, ಟೈರ್​ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಪ್ರತಿಭಟಿಸುತ್ತಿದ್ದಾರೆ.

ಇದನ್ನೂ ಓದಿ: ಸಂತ್ರಸ್ತ ಯುವತಿ ತಮ್ಮದು ಸಹಮತ ಸೆಕ್ಸ್​ ಎಂದು ಹೇಳಿದರೆ.. ನಾನು ಕಾನೂನು ಹೋರಾಟ ನಡೆಸುತ್ತೇನೆ -ದಿನೇಶ್ ಕಲ್ಲಹಳ್ಳಿ

ನಿರ್ದೋಷಿ ರಮೇಶ್​ ಜಾರಕಿಹೊಳಿಯನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಿ: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಗ್ರಹ