Karachi Bakery | ಪ್ರಸಿದ್ಧ ಕರಾಚಿ ಬೇಕರಿ ಸ್ಥಗಿತ: ನಾವೇ ಮುಚ್ಚಿಸಿದ್ದೇವೆ ಎಂದ ಎಂಎನ್ಎಸ್; ಕೊರೊನಾ ಆರ್ಥಿಕ ಹಿನ್ನಡೆ ಎಂದ ಮಾಲೀಕ
Karachi Bakery: ಕರಾಚಿ ಬೇಕರಿ ಸ್ಥಗಿತದ ಹಿಂದೆ ಪಕ್ಷದ ಪಾತ್ರವಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಇನ್ನೋರ್ವ ಮುಖಂಡ ಸಂದೀಪ್ ದೇಶಪಾಂಡೆ ತಿಳಿಸಿದ್ದಾರೆ. ಆದರೆ, ಕೊರೊನಾ ಲಾಕ್ಡೌನ್ನಿಂದ ಉಂಟಾದ ಆರ್ಥಿಕ ಹಿನ್ನೆಡೆಯಿಂದ ಬೇಕರಿಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಮುಂಬೈ: ರಾಷ್ಟ್ರಮಟ್ಟದಲ್ಲಿ ಅದರ ಹೆಸರಿನಿಂದಲೇ ಆಗಾಗ ಸುದ್ದಿಯಲ್ಲಿ ಇರುತ್ತಿದ್ದ ಪ್ರಸಿದ್ಧ ‘ಕರಾಚಿ ಬೇಕರಿ’ ಮುಚ್ಚಲ್ಪಟ್ಟಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಉಪಾಧ್ಯಕ್ಷ ಹಾಜಿ ಸೈಫ್ ಶೇಖ್ @mnshajisaif ಅವರ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಲಾಗಿದೆ. ಬೇಕರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಕರಾಚಿ ಬೇಕರಿಯ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ನಮ್ಮ ಪ್ರತಿಭಟನೆಗೆ ಮಣಿದು ಮುಂಬೈನಲ್ಲಿದ್ದ ಕರಾಚಿ ಬೇಕರಿಯ ಏಕೈಕ ಶಾಖೆಯು ಸ್ಥಗಿತಗೊಂಡಿದೆ ಎಂದು ಟ್ವೀಟ್ ತಿಳಿಸಿದೆ. ಆದರೆ ಕರಾಚಿ ಬೇಕರಿ ಸ್ಥಗಿತದ ಹಿಂದೆ ಪಕ್ಷದ ಪಾತ್ರವಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಇನ್ನೋರ್ವ ಮುಖಂಡ ಸಂದೀಪ್ ದೇಶಪಾಂಡೆ ತಿಳಿಸಿದ್ದಾರೆ. ಆದರೆ, ಕೊರೊನಾ ಲಾಕ್ಡೌನ್ನಿಂದ ಉಂಟಾದ ಆರ್ಥಿಕ ಹಿನ್ನೆಡೆಯಿಂದ ಬೇಕರಿಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಮುಂಬೈನ ಅತಿ ಹಳೆಯ ಮತ್ತು ಪ್ರಸಿದ್ಧ ಬೇಕರಿಗಳಲ್ಲೊಂದಾದ ‘ಕರಾಚಿ ಬೇಕರಿ’ ತನ್ನ ಹೆಸರಿನಿಂದಲೇ ಹಲವರ ನಿದ್ದೆಗೆಡಿಸಿತ್ತು. ಹೈದರಾಬಾದ್ ಮೂಲದ ಬೇಕರಿ ಸರಪಳಿಯಾದ ‘ಕರಾಚಿ ಬೇಕರಿ’ಯನ್ನು ಕರಾಚಿಯಿಂದ ಭಾರತಕ್ಕೆ ವಲಸೆ ಬಂದಿದ್ದ ಸಿಂಧಿ ಹಿಂದೂ ಕುಟುಂಬವೊಂದು ನಿರ್ವಹಿಸುತ್ತಿತ್ತು. ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಕರಾಚಿ ಬೇಕರಿಯ ಮಳಿಗೆಯಿದ್ದು, ಇದೀಗ ಈ ಮಳಿಗೆಯು ತಮ್ಮ ಪ್ರತಿಭಟನೆಯಿಂದ ಮುಚ್ಚಲ್ಪಟ್ಟಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಉಪಾಧ್ಯಕ್ಷ ಹಾಜಿ ಸೈಫ್ ಶೇಖ್ ಅವರ ಟ್ವಿಟರ್ ಹ್ಯಾಂಡಲ್ ತಿಳಿಸಿದೆ.
After massive protest on Karachi Bakery for its name #Karachi led by Vice President of MNS – @mnshajisaif karachi bakery finally closes its only shop in Mumbai.@RajThackeray Saheb@mnsadhikrut @karachi_bakery pic.twitter.com/67KQ0p30mI
— Haji Saif Shaikh (@mnshajisaif) March 1, 2021
2020ರ ನವೆಂಬರ್ನಲ್ಲಿ ಕರಾಚಿ ಬೇಕರಿಯ ಹೆಸರು ಅಸಂಖ್ಯಾತ ಭಾರತೀಯರ ಮತ್ತು ದೇಶದ ಸೈನ್ಯದ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಆರೋಪಿಸಿ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಉಪಾಧ್ಯಕ್ಷ ಹಾಜಿ ಸೈಫ್ ಶೇಖ್ ಲೀಗಲ್ ನೋಟಿಸ್ ನೀಡಿದ್ದರು. ಅಲ್ಲದೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಬೇಕರಿಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.
ಶಿವಸೇನಾ ಪಕ್ಷದ ಪ್ರಮುಖರಾದ ಸಂಜಯ್ ರಾವುತ್ ಸೇರಿ ಕೆಲ ಮುಖಂಡರು ಸಹ ಕರಾಚಿ ಬೇಕರಿಯ ಹೆಸರು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದರು. ಅಲ್ಲದೇ,ತಮ್ಮ ಪಕ್ಷ ಕರಾಚಿ ಬೇಕರಿ ಹೆಸರಿನ ವಿರುದ್ಧ ನಿಲುವನ್ನು ತಳೆದಿರುವುದಾಗಿ ಸ್ಪಷ್ಟಪಡಿಸಿದ್ದರು.
Mumbai’s loss! #KarachiBakery https://t.co/R9lKJptiRU
— Prof Shamika Ravi (@ShamikaRavi) March 3, 2021
ಆದರೆ, ಕರಾಚಿ ಬೇಕರಿಯ ಮಾಲೀಕರು, ‘ಈ ಹೆಸರು ಪ್ರಸಿದ್ಧವಾಗಿದ್ದು ಐತಿಹಾಸಿಕವೂ ಆಗಿದೆ. ಈ ಕಾರಣಗಳಿಂದ ಕರಾಚಿ ಬೇಕರಿ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.
ಕರಾಚಿ ಬೇಕರಿ ಸ್ಥಗಿತದಿಂದ ಮುಂಬೈವಾಸಿ ನೆಟ್ಟಿಗರು ಬೇಸರಗೊಂಡಿದ್ದು, ‘ಅತ್ಯಂತ ಉತ್ತಮ ಹಣ್ಣಿನ ಬಿಸ್ಕತ್ಗಳನ್ನು ಇನ್ನು ಮುಂದೆ ಕಳೆದುಕೊಳ್ಳುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
Mumbai’s loss! #KarachiBakery https://t.co/R9lKJptiRU
— Prof Shamika Ravi (@ShamikaRavi) March 3, 2021
ಇದನ್ನೂ ಓದಿ: IPL 2021 Auction LIVE: ಜಮೀಸನ್ 15 ಕೋಟಿಗೆ ಆರ್ಸಿಬಿ ಪಾಲು, ಮುಂಬೈ ಸೇರಿದ ಅರ್ಜುನ್ ತೆಂಡೂಲ್ಕರ್
Explainer | Arjun Mark 1A Tank: ಭೂಸೇನೆಗೆ ಅರ್ಜುನ್ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?