Corona 2020: ಈ ವರ್ಷ ಶಾಲೆ ಇಲ್ಲ.. ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ
ಬೆಂಗಳೂರು: ಡಿಸೆಂಬರ್ ಅಂತ್ಯದವರೆಗೂ ಶಾಲೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ಡಿಸೆಂಬರ್ನಲ್ಲಿ ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ನಲ್ಲಿ ಶಾಲೆ, ಪಿಯು ಕಾಲೇಜು ಬೇಡ ಎಂದು ತಜ್ಞರು ಹೇಳಿದರು. ಹಾಗಾಗಿ, ಡಿಸೆಂಬರ್ 3ನೇ ವಾರದಲ್ಲಿ ಮತ್ತೆ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು. ಶಾಲೆ ಆರಂಭಿಸುವ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಗ್ರಾಮೀಣ ಭಾಗದಲ್ಲಿ ಆಗುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು. ಶಿಕ್ಷಣ ಇಲಾಖೆ ಸಂಗ್ರಹಿಸಿದ್ದ […]
ಬೆಂಗಳೂರು: ಡಿಸೆಂಬರ್ ಅಂತ್ಯದವರೆಗೂ ಶಾಲೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ಡಿಸೆಂಬರ್ನಲ್ಲಿ ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ನಲ್ಲಿ ಶಾಲೆ, ಪಿಯು ಕಾಲೇಜು ಬೇಡ ಎಂದು ತಜ್ಞರು ಹೇಳಿದರು. ಹಾಗಾಗಿ, ಡಿಸೆಂಬರ್ 3ನೇ ವಾರದಲ್ಲಿ ಮತ್ತೆ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.
ಶಾಲೆ ಆರಂಭಿಸುವ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಗ್ರಾಮೀಣ ಭಾಗದಲ್ಲಿ ಆಗುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು. ಶಿಕ್ಷಣ ಇಲಾಖೆ ಸಂಗ್ರಹಿಸಿದ್ದ ವರದಿಯನ್ನು ಸಿಎಂ BSYಗೆ ಸಲ್ಲಿಸಿದ್ದರು. ಡಾ.ಸುದರ್ಶನ್ ನೇತೃತ್ವದ ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಅಭಿಪ್ರಾಯ ಬಗ್ಗೆ ಚರ್ಚೆ ನಡೆಯಿತು ಎಂದು ಸುರೇಶ್ ಕುಮಾರ್ ಹೇಳಿದರು.
ಡಿಸೆಂಬರ್ನಲ್ಲಿ ಹೆಚ್ಚು ಚಳಿ ಇರುತ್ತೆ. ಕೊರೊನಾ ಎರಡನೇ ಅಲೆಯ ಆತಂಕ ಕೂಡಾ ಇದೆ. ಹಾಗಾಗಿ, 1ರಿಂದ 8ನೇ ತರಗತಿವರೆಗೆ ಈ ವರ್ಷ ಶಾಲೆ ಆರಂಭವಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು. ಜೊತೆಗೆ, ಡಿಸೆಂಬರ್ನಲ್ಲಿ ಪಿಯು ಕಾಲೇಜು ತೆರೆಯುವುದಿಲ್ಲ ಎಂದು ಸಹ ಹೇಳಿದರು. ಚಂದನ ವಾಹಿನಿಯಲ್ಲಿ ಸಂವೇದಾ ತರಗತಿಗಳು ನಡೆಯಲಿವೆ. ಚಂದನ ವಾಹಿನಿಯಲ್ಲಿ ಇಂದಿನಿಂದ ಸಂವೇದಾ ಟಿವಿ ಪಾಠ ನಡೆಯಲಿದೆ ಎಂದೂ ಸಹ ಮಾಹಿತಿ ನೀಡಿದರು.
SSLC, ದ್ವಿತೀಯ PU ಪರೀಕ್ಷೆ ಯಾವಾಗ ಗೊತ್ತಾ?
‘ಡಿಸೆಂಬರ್ನಲ್ಲಿ ಶಾಲೆ, ಪಿಯು ಕಾಲೇಜು ತೆರೆಯುವುದಿಲ್ಲ’ ಈ ನಡುವೆ, 1ನೇ ತರಗತಿಯಿಂದ ದ್ವಿತೀಯ PUವರೆಗೆ ಕಾಲೇಜು ತೆರೆಯಲ್ಲ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ಕೊಟ್ಟರು. ಡಿಸೆಂಬರ್ನಲ್ಲಿ ಶಾಲೆ, ಪಿಯು ಕಾಲೇಜು ತೆರೆಯುವುದಿಲ್ಲ ಎಂದು ಹೇಳಿದರು.
Published On - 1:14 pm, Mon, 23 November 20