ಒಟ್ಟೊಟ್ಟಿಗೇ 3 ಹಾವುಗಳ ಮಿಲನ! ಜನಕ್ಕೆ ಅಚ್ಚರಿಯೋ ಅಚ್ಚರಿ, ಎಲ್ಲಿ?

ಹಾಸನ: ಒಂದೇ ಬಾರಿ ಮೂರು ಹಾವುಗಳು ಸರಸ ಸಲ್ಲಾಪ ನಡೆಸಿ, ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಎರಡು ಕೇರೆಹಾವು ಮತ್ತು ಒಂದು ನಾಗರ ಹಾವು ಈ ಸರಸ ಸಲ್ಲಾಪದಲ್ಲಿ ತಳುಕು ಹಅಕಿಕೊಂಡಿದ್ದವು. ಇದನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಾಸನದ ಕುವೆಂಪು ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬಯಲಿನಲ್ಲಿ ಈ ಉರಗ ಮಿಲನ ಮಹೋತ್ಸವ ನಡೆದಿದೆ. ಎರಡು ಹಾವುಗಳು ಒಟ್ಟಿಗೆ ಸೇರುವುದು ಸಾಮಾನ್ಯ. ಆದ್ರೆ ಒಟ್ಟೊಟ್ಟಿಗೇ ಮೂರು ಹಾವುಗಳ ಮಿಲನ […]

ಒಟ್ಟೊಟ್ಟಿಗೇ 3 ಹಾವುಗಳ ಮಿಲನ! ಜನಕ್ಕೆ ಅಚ್ಚರಿಯೋ ಅಚ್ಚರಿ, ಎಲ್ಲಿ?
ಸಾಧು ಶ್ರೀನಾಥ್​

Updated on: May 01, 2020 | 11:13 AM

ಹಾಸನ: ಒಂದೇ ಬಾರಿ ಮೂರು ಹಾವುಗಳು ಸರಸ ಸಲ್ಲಾಪ ನಡೆಸಿ, ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಎರಡು ಕೇರೆಹಾವು ಮತ್ತು ಒಂದು ನಾಗರ ಹಾವು ಈ ಸರಸ ಸಲ್ಲಾಪದಲ್ಲಿ ತಳುಕು ಹಅಕಿಕೊಂಡಿದ್ದವು. ಇದನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಹಾಸನದ ಕುವೆಂಪು ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬಯಲಿನಲ್ಲಿ ಈ ಉರಗ ಮಿಲನ ಮಹೋತ್ಸವ ನಡೆದಿದೆ. ಎರಡು ಹಾವುಗಳು ಒಟ್ಟಿಗೆ ಸೇರುವುದು ಸಾಮಾನ್ಯ. ಆದ್ರೆ ಒಟ್ಟೊಟ್ಟಿಗೇ ಮೂರು ಹಾವುಗಳ ಮಿಲನ ಕಂಡು ಜನಕ್ಕೆ ಅಚ್ಚರಿಯೋ ಅಚ್ಚರಿಯಾಗಿದೆ. ಅದೂ ಕೊರೊನಾ ಸೋಂಕು ಅದೂ ಇದೂ ಅಂತಾ ಯಾವುದೇ ರಗಳೆಯಿಲ್ಲದೆ ಸ್ವಚ್ಛಂದವಾಗಿ ಮಿಲನ ಕ್ರಿಯೆಯಲ್ಲಿ ತೊಡಗಿವೆ ನೋಡಿ ಎಂದೂ ಜನ ಮಾತನಾಡಿಕೊಂಡಿದ್ದಾರೆ.

Published On - 11:10 am, Fri, 1 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us