8 ದಿನದಿಂದ ಅನ್ನ-ನೀರು ಬಿಟ್ಟು, ಮಲಮೂತ್ರ ವಿಸರ್ಜನೆ ಮಾಡದೆ.. ಶ್ರೀಗಳ ಕಠೋರ ವ್ರತ! ಯಾಕೆ?

|

Updated on: Nov 26, 2020 | 5:08 PM

ಲೋಕಕಲ್ಯಾಣಕ್ಕೆ ಹಾಗೂ ಕೊರೊನಾ ದೂರವಾಗಲೆಂದು ಶ್ರೀಗಳೊಬ್ಬರು ಕಠೋರ ವ್ರತ ಕೈಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮೊಗಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

8 ದಿನದಿಂದ ಅನ್ನ-ನೀರು ಬಿಟ್ಟು, ಮಲಮೂತ್ರ ವಿಸರ್ಜನೆ ಮಾಡದೆ.. ಶ್ರೀಗಳ ಕಠೋರ ವ್ರತ! ಯಾಕೆ?
ಗವಿಸಿದ್ದ ಮಠದ ಮಹದೇವ ಸ್ವಾಮೀಜಿ
Follow us on

ಕಲಬುರಗಿ: ಲೋಕ ಕಲ್ಯಾಣಕ್ಕೆ ಹಾಗೂ ಕೊರೊನಾ ದೂರವಾಗಲೆಂದು ಶ್ರೀಗಳೊಬ್ಬರು ಕಠೋರ ವ್ರತ ಕೈಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮೊಗಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಲೋಕ ಕಲ್ಯಾಣದ ಧ್ಯೇಯ ಹೊತ್ತ ಬೀದರ್ ಜಿಲ್ಲೆಯ ಬಾವಗಿ ಗ್ರಾಮದ ಗವಿಸಿದ್ದ ಮಠದ ಮಹದೇವ ಸ್ವಾಮೀಜಿ ಕಳೆದ 8 ದಿನಗಳಿಂದ ಮೊಗಲಾ ಗ್ರಾಮದಲ್ಲಿ ಮರದ ಮೇಲೆ ಕುಳಿತು ವ್ರತ ಅನುಷ್ಠಾನ ಮಾಡ್ತಿದ್ದಾರೆ.

ಕಠೋರ ವ್ರತ ಪಾಲನೆ ಮಾಡುತ್ತಿರುವ 70 ವರ್ಷದ ಸ್ವಾಮೀಜಿ ಕಳೆದ 8 ದಿನದಿಂದ ಅನ್ನ ಮತ್ತು ನೀರು ಸೇವನೆ ಸಹ ತ್ಯಜಿಸಿದ್ದಾರೆ. ಮಲಮೂತ್ರ ವಿಸರ್ಜನೆ ಕೂಡಾ ಮಾಡದೆ ಮರದ ಮೇಲೆ ಕುಳಿತಿರೋ ಶ್ರೀಗಳ ವ್ರತ ನಾಳೆ 9ನೇ ದಿನಕ್ಕೆ ಕಾಲಿಡಲಿದ್ದು ಸಮಾಪ್ತಗೊಳ್ಳಲಿದೆ. ಹಾಗಾಗಿ, ಸ್ವಾಮೀಜಿಗಳ ದರ್ಶನ ಪಡೆಯಲು ಭಕ್ತರ ದಂಡೇ ಆಗಮಿಸುತ್ತಿದೆ.