
ಬೆಂಗಳೂರು: ಬಿಜೆಪಿ ಅಭ್ಯರ್ಥಿ ಮುನಿರತ್ನ ಅಲ್ಲ, ‘ಮನಿ’ರತ್ನ ಎಂದು ಜೆಡಿಎಸ್ ಪರ ಪ್ರಚಾರದ ವೇಳೆ ಪಕ್ಷದ ಮುಖಂಡ ಟಿ.ಎ. ಶರವಣ ಹೇಳಿದ್ದಾರೆ. ಮುನಿರತ್ನ ಹೆಣ್ಣುಮಗಳ ಸೀರೆ ಎಳೆದ ದುಶ್ಯಾಸನನಿದ್ದಂತೆ ಎಂದು ಶರವಣ ಲೇವಡಿ ಮಾಡಿದ್ದಾರೆ. ಅವತ್ತು ದುಶ್ಯಾಸನನಂತೆ ಕಾರ್ಪೊರೇಟರ್ ಸೀರೆ ಎಳೆದಿದ್ದರು. ಇವತ್ತು ಮುನಿರತ್ನ ಧರ್ಮರಾಯನಂತೆ ಕಾಣುತ್ತಾರಾ? ಎಂದು ಪರೋಕ್ಷವಾಗಿ ಮುನಿರತ್ನ ಮತ್ತು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
‘ಕುಮಾರಣ್ಣನೇ ಈ ರಾಜ್ಯಕ್ಕೇ ಬಾಸ್’
ಇನ್ನು ಜೆಡಿಎಸ್ ಅಭ್ಯರ್ಥಿ ಪರ ಟಿ.ಎ. ಶರವಣ ಪ್ರಚಾರ ನಡೆಸುವಾಗ ಅಜ್ಜಿಯರಿಲ್ಲದ ಮನೆ ಇಲ್ಲ, ಮಜ್ಜಿಗೆ ಇಲ್ಲದ ಊಟವಿಲ್ಲ. ಅಂತೆಯೇ, ಕುಮಾರಣ್ಣ ಇಲ್ಲದ ರಾಜ್ಯವೇ ಇಲ್ಲ ಎಂದು ಡೈಲಾಗ್ ಸಹ ಹೊಡೆದಿದ್ದಾರೆ. ಜೊತೆಗೆ, ನೀವು ಮಲಗಿದ್ರೆ ನಮಗೆ ಲಾಸ್. ನೀವು ಎದ್ದಿದ್ರೆ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಪಾಸ್. ಆಗ, ಕುಮಾರಣ್ಣನೇ ಈ ರಾಜ್ಯಕ್ಕೇ ಬಾಸ್ ಎಂದ ಶರವಣ ಭರ್ಜರಿ ಡೈಲಾಗ್ ಹೊಡೆದಿದ್ದಾರೆ.