AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಹದ ನಡುವೆ ಜೀವನ್ಮರಣ ಹೋರಾಟ, ನಾಲ್ಕುದಿನಗಳಿಂದ ಮರವೇರಿದ ಕೋತಿಯ ಪರದಾಟ

ಕಲಬುರಗಿ: ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕದ ಪರಿಸ್ಥಿತಿ ತತ್ತರಿಸಿದೆ. ನೆರೆಯಿಂದಾಗಿ ಜನ ಬೀದಿಗೆ ಬಿದ್ದಿದ್ದಾರೆ. ನೆರೆಯಿಂದಾಗಿ ಕೋಟ್ಯಾಂತರ ರೂ ಬೆಲೆ ಬಾಡುವ ಆಸ್ತಿ ಪಾಸ್ತಿ ಹಾನಿಯಾಗಿದೆ. ಜನರ ನೋವುಗಳೇ ಬಂದು ಕಡೆಯಾದ್ರೆ ಪ್ರವಾಹದಲ್ಲಿ ಮೂಕ ಪ್ರಾಣಿಗಳ ರೋದನೆ ಕೇಳೋರೆ ಇಲ್ಲ. ತಮ್ಮ ಮಾಲೀಕನಿಂದ ದೂರವಾಗಿ ಊಟ ಆಶ್ರಯವಿಲ್ಲದೆ ಪರಿತಪಿಸುತ್ತಿವೆ. ಮರವೇರಿ ಕುಳಿತ ಕೋತಿ ಮರಿ: ಪ್ರವಾಹಕ್ಕೆ ತತ್ತರಿಸಿರುವ ಕೋತಿ ಮರಿ ಕಳೆದ 4ದಿನದಿಂದ ಅಫಜಲಪುರ ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಮರವೇರಿ ಕುಳಿತುಕೊಂಡಿದೆ. ಆಹಾರ […]

ಪ್ರವಾಹದ ನಡುವೆ ಜೀವನ್ಮರಣ ಹೋರಾಟ, ನಾಲ್ಕುದಿನಗಳಿಂದ ಮರವೇರಿದ ಕೋತಿಯ ಪರದಾಟ
ಆಯೇಷಾ ಬಾನು
ಆಯೇಷಾ ಬಾನು|

Updated on: Oct 18, 2020 | 3:38 PM

Share

ಕಲಬುರಗಿ: ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕದ ಪರಿಸ್ಥಿತಿ ತತ್ತರಿಸಿದೆ. ನೆರೆಯಿಂದಾಗಿ ಜನ ಬೀದಿಗೆ ಬಿದ್ದಿದ್ದಾರೆ. ನೆರೆಯಿಂದಾಗಿ ಕೋಟ್ಯಾಂತರ ರೂ ಬೆಲೆ ಬಾಡುವ ಆಸ್ತಿ ಪಾಸ್ತಿ ಹಾನಿಯಾಗಿದೆ. ಜನರ ನೋವುಗಳೇ ಬಂದು ಕಡೆಯಾದ್ರೆ ಪ್ರವಾಹದಲ್ಲಿ ಮೂಕ ಪ್ರಾಣಿಗಳ ರೋದನೆ ಕೇಳೋರೆ ಇಲ್ಲ. ತಮ್ಮ ಮಾಲೀಕನಿಂದ ದೂರವಾಗಿ ಊಟ ಆಶ್ರಯವಿಲ್ಲದೆ ಪರಿತಪಿಸುತ್ತಿವೆ.

ಮರವೇರಿ ಕುಳಿತ ಕೋತಿ ಮರಿ: ಪ್ರವಾಹಕ್ಕೆ ತತ್ತರಿಸಿರುವ ಕೋತಿ ಮರಿ ಕಳೆದ 4ದಿನದಿಂದ ಅಫಜಲಪುರ ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಮರವೇರಿ ಕುಳಿತುಕೊಂಡಿದೆ. ಆಹಾರ ಇಲ್ಲದೆ, ನೀರು ಸಿಗದೆ ಪರದಾಡುತ್ತಿದೆ. ನಾಲ್ಕು ದಿನ ಕಳೆದರೂ ಅರಣ್ಯ ಇಲಾಖೆ ಅಧಿಕಾರಿಗಳು ಕೋತಿ ರಕ್ಷಣೆಗೆ ಮುಂದಾಗಿಲ್ಲ. ಹೀಗಾಗಿ ಮಂಗನನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಜೈ ಭೀಮ್ ನಗರ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2ದಿನದ ಹಿಂದೆ ಕೋತಿ ಮರಿ ಜೊತೆ ತಾಯಿ ಮರಿ ಸಹ ಇತ್ತು ಆದರೆ ಈಗ ಕೇವಲ ಕೋತಿಮರಿ ಮಾತ್ರ ಉಳಿದುಕೊಂಡಿದೆ. ಇನ್ನು ಅಫಜಲಪುರ ತಾಲೂಕಿನ ಘೋಳನೂರು ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಜೀವ ಪಣಕ್ಕಿಟ್ಟು ಎದೆಯಾಳದ ನೀರಲ್ಲಿ ಹೋಗಿ ನಾಯಿಯ ಜೀವ ಉಳಿಸಿದ್ದಾರೆ.

ಮುಳ್ಳಿನ ಗುಡ್ಡದಲ್ಲಿ ಸಿಲುಕಿಕೊಂಡಿವೆ 120ಕ್ಕೂ ಹೆಚ್ಚು ಜಾನುವಾರುಗಳು: ರಾಯಚೂರಿನಲ್ಲಿ ತಾಲೂಕಿನ ಕಾಡ್ಲೂರು, ಗುರ್ಜಾಪುರ ಗ್ರಾಮ ಮತ್ತು ಯಾದಗಿರ ಜಿಲ್ಲೆ ವಡಗೇರ ತಾಲೂಕಿನ ರೈತರ ಜಾನುವಾರುಗಳು ಪ್ರವಾಹದಲ್ಲಿ ಸಿಲುಕಿಕೊಂಡಿವೆ. ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಗುರ್ಜಾಪುರದ ನದಿ ದಂಡೆಯ ಮುಳ್ಳಿನ ಗುಡ್ಡದಲ್ಲಿರುವ 120ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹದಲ್ಲಿ ಸಿಲುಕಿಕೊಂಡಿವೆ. ಜಾನುವಾರು ರಕ್ಷಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!