ವೆಂಟಿಲೇಟರ್​ ಕಿತ್ಕೊಂಡ ಕೊರೊನಾ: ಮದ್ವೆಯಾಗಿ ಕೇವಲ 1 ವರ್ಷವಾಗಿದ್ದ TB ಪೇಶಂಟ್​ ಸಾವು!

| Updated By: ಸಾಧು ಶ್ರೀನಾಥ್​

Updated on: Jun 24, 2020 | 7:28 PM

ಬೆಂಗಳೂರು: ಈ ಮಹಾಮಾರಿ ತುಂಬಾನೇ ಕ್ರೂರಿ. ಸದ್ದಿಲ್ಲದೆ ಸೋಂಕಿತರನ್ನು ಬಲಿಪೆಡಯುತ್ತಿದ್ದ ಕೊರೊನಾ ಇದೀಗ ಇತರೆ ರೋಗಿಗಳತ್ತ ಮುಖಮಾಡಿದ ಹಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮದುವೆಯಾಗಿ ಕೇವಲ ಒಂದು ವರ್ಷವಾಗಿದ್ದ TB ಪೇಶಂಟ್​ ಒಬ್ಬರು ಕೊರೊನಾದಿಂದ ಉಂಟಾದ ವೆಂಟಿಲೇಟರ್​ ಕೊರತೆಯಿಂದ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ನಗರದಲ್ಲಿ ವರದಿಯಾಗಿದೆ. ವೆಂಟಿಲೇಟರ್​ ಕಸಿದುಕೊಂಡ ಕೊರೊನಾ ಮೂಲತಃ ಕೋಲಾರ ಮೂಲದ 21 ವರ್ಷದ ಮಹಿಳೆ ಕ್ಷಯ ರೋಗದಿಂದ ಬಳಲುತ್ತಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಯಲಹಂಕಕ್ಕೆ ಬಂದು ನೆಲೆಸಿದ್ದರು. 21 ದಿನಗಳ ಹಿಂದೆ ಈಕೆಯನ್ನು ಚಿಕಿತ್ಸೆಗಾಗಿ […]

ವೆಂಟಿಲೇಟರ್​ ಕಿತ್ಕೊಂಡ ಕೊರೊನಾ: ಮದ್ವೆಯಾಗಿ ಕೇವಲ 1 ವರ್ಷವಾಗಿದ್ದ TB ಪೇಶಂಟ್​ ಸಾವು!
Follow us on

ಬೆಂಗಳೂರು: ಈ ಮಹಾಮಾರಿ ತುಂಬಾನೇ ಕ್ರೂರಿ. ಸದ್ದಿಲ್ಲದೆ ಸೋಂಕಿತರನ್ನು ಬಲಿಪೆಡಯುತ್ತಿದ್ದ ಕೊರೊನಾ ಇದೀಗ ಇತರೆ ರೋಗಿಗಳತ್ತ ಮುಖಮಾಡಿದ ಹಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮದುವೆಯಾಗಿ ಕೇವಲ ಒಂದು ವರ್ಷವಾಗಿದ್ದ TB ಪೇಶಂಟ್​ ಒಬ್ಬರು ಕೊರೊನಾದಿಂದ ಉಂಟಾದ ವೆಂಟಿಲೇಟರ್​ ಕೊರತೆಯಿಂದ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ನಗರದಲ್ಲಿ ವರದಿಯಾಗಿದೆ.

ವೆಂಟಿಲೇಟರ್​ ಕಸಿದುಕೊಂಡ ಕೊರೊನಾ
ಮೂಲತಃ ಕೋಲಾರ ಮೂಲದ 21 ವರ್ಷದ ಮಹಿಳೆ ಕ್ಷಯ ರೋಗದಿಂದ ಬಳಲುತ್ತಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಯಲಹಂಕಕ್ಕೆ ಬಂದು ನೆಲೆಸಿದ್ದರು. 21 ದಿನಗಳ ಹಿಂದೆ ಈಕೆಯನ್ನು ಚಿಕಿತ್ಸೆಗಾಗಿ ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ವೆಂಟಿಲೇಟರ್​ ಮೂಲಕ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ವೆಂಟಿಲೇಟರ್​ಗಳ ಬೇಡಿಕೆಯು ಉಂಟಾಯಿತು.

ಹಾಗಾಗಿ, ಮಹಿಳೆಗೆ ನೀಡಲಾಗಿದ್ದ ವೆಂಟಿಲೇಟರ್​ನ ಕೊರೊನಾ ಸೋಂಕಿತರಿಗೆ ನೀಡಲು ನಿರ್ಧರಿಸಲಾಯಿತು. ಆದರೆ, ದುರದೃಷ್ಟವಶಾತ್​ ಇಂದು ಬೆಳಿಗ್ಗೆ ಮಹಿಳೆಯಿಂದ ವೆಂಟಿಲೇಟರ್​ ತೆಗೆದ ಮರುಕ್ಷಣವೇ ಆಕೆ ಅಸುನೀಗಿದ್ದಾರೆ. ಒಟ್ನಲ್ಲಿ ಇನ್ನೂ ಬದುಕಿ ಬಾಳಬೇಕಿದ್ದ ಹೆಣ್ಣುಮಗಳು ಕೊರೊನಾದಿಂದ ದೂರವಿದ್ದರೂ ಅದರ ಕರಿಛಾಯೆ ಮಾತ್ರ ಆಕೆಯನ್ನು ಆವರಿಸಿಯೇಬಿಟ್ಟಿತು.

Published On - 7:26 pm, Wed, 24 June 20