ಮಂಡ್ಯ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಪ್ರೌಢಶಾಲಾ ಶಿಕ್ಷಕ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Feb 01, 2021 | 9:55 AM

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಎಂಬ ಕಾರಣಕ್ಕೆ ಹರಿಹರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಟಿ.ಕೃಷ್ಣೇಗೌಡ ಎಂಬ ಶಿಕ್ಷಕನನ್ನು ಜಿಲ್ಲೆಯ ಕೆ.ಆರ್.ಪೇಟೆ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಪ್ರೌಢಶಾಲಾ ಶಿಕ್ಷಕ ಅರೆಸ್ಟ್
ಶಿಕ್ಷಕ ಬಿ.ಟಿ.ಕೃಷ್ಣೇಗೌಡ
Follow us on

ಮಂಡ್ಯ: ವಿದ್ಯೆ ಕೊಟ್ಟು ಬೆಳಕಿನ ಮಾರ್ಗ ತೋರಿಸುವ ಗುರುವಿಂದಲೇ ವಿದ್ಯಾರ್ಥಿನಿಯರಿಗೆ ಅಂಧಕಾರದ ಅನುಭವವಾದ್ರೆ ಹೇಗೆ? ಇದೇ ರೀತಿ ಮಂಡ್ಯದಲೊಬ್ಬ ನೀಚ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಎಂಬ ಕಾರಣಕ್ಕೆ ಹರಿಹರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಟಿ.ಕೃಷ್ಣೇಗೌಡ ಎಂಬ ಶಿಕ್ಷಕನನ್ನು ಜಿಲ್ಲೆಯ ಕೆ.ಆರ್.ಪೇಟೆ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಬಿ.ಟಿ.ಕೃಷ್ಣೇಗೌಡ, ಕಾಮ ದೃಷ್ಟಿಯಿಂದ ವಿದ್ಯಾರ್ಥಿನಿಯರ ಮೈಮುಟ್ಟಿ ಕಿರುಕುಳ ನೀಡುತ್ತಿದ್ದ. ಶಿಕ್ಷಕನ ನೀಚ ಕೃತ್ಯದ ಬಗ್ಗೆ ನೊಂದ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಪೋಷಕರ ಮುಂದೆ ಕಣ್ಣೀರಿಟ್ಟು ವಿವರಿಸಿದ್ದಾರೆ. ಬಳಿಕ ಪೋಷಕರು ಶಿಕ್ಷಕನಿಗೆ ವಾರ್ನ್ ಮಾಡಿ ಸುಮ್ಮನಾಗಿದ್ದಾರೆ. ಆದ್ರೆ ಮಾಹಿತಿ ತಿಳಿದ ಬಿಇಒ ಬಸವರಾಜು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿನಿಯರು ಖಚಿತಪಡಿಸಿದ ಬಳಿಕ ಶಿಕ್ಷಕನ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ಬಿಇಒ ದೂರು ಆಧರಿಸಿ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಶಿಕ್ಷಕ ಬಿ.ಟಿ.ಕೃಷ್ಣೇಗೌಡನನ್ನು ಬಂಧಿಸಿದ್ದಾರೆ. SC-ST ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.

ಪ್ರಾಂಶುಪಾಲರ ಕಿರುಕುಳ ತಾಳಲಾರದೆ ಕೊಲೆ; ಸುಪಾರಿ ಕೊಟ್ಟಿದ್ದ ಸಹ ಶಿಕ್ಷಕ, ಹಂತಕರು ಅರೆಸ್ಟ್​