ಕೊರೊನಾ ಸುದ್ದಿ ಬಿಟ್ಹಾಕಿ, ಉಡುಪಿಯಲ್ಲಿ ನಡೆದಿದೆ ನೋಡಿ ಮಹಿಳಾ ಕೃಷಿ ಕ್ರಾಂತಿ!
ಉಡುಪಿ: ತುಳುನಾಡಿನಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಪ್ರಾಮುಖ್ಯತೆಯನ್ನು ಕೃಷಿಗೆ ಕೊಡುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಯ ಮಾಡಲು ಜನರೇ ಇಲ್ಲದಂತಾಗಿ ಕೃಷಿ ಕಾರ್ಯವನ್ನ ಬಿಟ್ಟಿದ್ದರು. ಆದ್ರೆ ಇಂಥ ಕೃಷಿಕರ ಪಾಲಿಗೆ ಆಪತ್‌ಬಾಂಧವರಂತೆ ಬಂದಿದೆ ಮಹಿಳಾ ಕಾರ್ಮಿಕರ ತಂಡ. ಪರಿಣಾಮ ನೆಲ ಕಚ್ಚಿದ್ದ ಕೃಷಿ ಈಗ ಮತ್ತೇ ತುಳುನಾಡಲ್ಲಿ ಮೈಗೊಡವಿ ನಿಂತಿದೆ. ಪೂರ್ವಜರಿಂದಲೂ ಕೃಷಿಯೇ ಆಧಾರ ಹೌದು, ಕರಾವಳಿ ಭಾಗದ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಇವರ ಪೂರ್ವಜರ ಕಾಲದಿಂದಲೂ […]
ಉಡುಪಿ: ತುಳುನಾಡಿನಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಪ್ರಾಮುಖ್ಯತೆಯನ್ನು ಕೃಷಿಗೆ ಕೊಡುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಯ ಮಾಡಲು ಜನರೇ ಇಲ್ಲದಂತಾಗಿ ಕೃಷಿ ಕಾರ್ಯವನ್ನ ಬಿಟ್ಟಿದ್ದರು. ಆದ್ರೆ ಇಂಥ ಕೃಷಿಕರ ಪಾಲಿಗೆ ಆಪತ್‌ಬಾಂಧವರಂತೆ ಬಂದಿದೆ ಮಹಿಳಾ ಕಾರ್ಮಿಕರ ತಂಡ. ಪರಿಣಾಮ ನೆಲ ಕಚ್ಚಿದ್ದ ಕೃಷಿ ಈಗ ಮತ್ತೇ ತುಳುನಾಡಲ್ಲಿ ಮೈಗೊಡವಿ ನಿಂತಿದೆ.
ಪೂರ್ವಜರಿಂದಲೂ ಕೃಷಿಯೇ ಆಧಾರ ಹೌದು, ಕರಾವಳಿ ಭಾಗದ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಇವರ ಪೂರ್ವಜರ ಕಾಲದಿಂದಲೂ ಕೃಷಿ ಕಾರ್ಯವೇ ಇವರ ಕಾಯಕ. ಮಳೆಗಾಲ ಆರಂಭವಾದ ಕೂಡಲೇ ಕೃಷಿ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಆಗ ಮನೆಮಂದಿಯೆಲ್ಲಾ ಸೇರಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಉತ್ತಮ ಫಸಲು ಪಡೆಯುತ್ತಿದ್ದರು.
ಕೃಷಿ ನಂಬಿದವರಿಗೆ ಕಾರ್ಮಿಕರ ಕೊರತೆ ಆದ್ರೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಭಾಗದಲ್ಲಿ ಸ್ಥಳಿಯವಾಗಿ ಕೃಷಿ ಕಾರ್ಯ ಮಾಡುತ್ತಿದ್ದ ಮಹಿಳೆಯರು ಈಗ ಕೃಷಿಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಹೀಗಾಗಿ ಜನರು ಕೃಷಿ ಕಾರ್ಯಕ್ಕೆ ಕಾರ್ಮಿಕರು ಸಿಗದೆ ತಮ್ಮ ಗದ್ದೆಗಳಲ್ಲಿ ಕೃಷಿ ಕಾರ್ಯ ಮಾಡುವುದನ್ನೇ ಬಿಟ್ಟಿದ್ದರು. ಆದರೆ ಈ ಭಾಗದ ಕೃಷಿಕರ ಪಾಲಿಗೆ ಈಗ ಸಂಜೀವಿನಿಯಂತೆ ಬಂದಿದೆ ಮಹಿಳಾ ಕಾರ್ಮಿಕರ ತಂಡ.
ರೈತರ ಸಂಜೀವಿನಿ ಈ ಮಹಿಳಾಮಣಿಗಳು ಈ ಮಹಿಳಾ ತಂಡದಲ್ಲಿ 10-15 ಮಹಿಳೆಯರು ಇದ್ದಾರೆ. ಇವರೆಲ್ಲ ಉಡುಪಿ ಜಿಲ್ಲೆಯ ಹೆಬ್ರಿ, ಪರ್ಕಳ ,ಪೆರ್ಡೂರು ಭಾಗದ ಮಹಿಳೆಯರು. ತಮ್ಮದೇ ಒಂದು ಮಹಿಳಾ ತಂಡವನ್ನು ಕಟ್ಟಿಕೊಂಡಿರುವ ಈ ಮಹಿಳಾಮಣಿಗಳು, ಯಾವುದೇ ಭಾಗದಲ್ಲಿ ಕೃಷಿ ಕಾರ್ಯ ಮಾಡಲು ಅಭಾವವಿದ್ರೆ ಅಲ್ಲಿ ಹಾಜರ್. ತಮ್ಮ ಪಟಾಲಮ್ ಕಟ್ಟಿಕೊಂಡು ಹೋಗಿ ನಾಟಿ ಕಾರ್ಯ ಮಾಡುತ್ತಾರೆ.
ಕಾಯಕವೇ ಕೈಲಾಸ ಈ ಮಹಿಳಾ ಮಣಿಗಳಿಗೆ ಮಹಿಳೆಯರ ತಂಡದ ಒಬ್ಬ ಮಹಿಳೆಯರಿಗೆ ಫೋನ್ ಮಾಡಿದರೆ ಸಾಕು, ಅವರ ಇಡೀ ತಂಡವೇ ಹಾಜರ್. ಮಳೆಗಾಲ ಆರಂಭವಾದರೆ ಸಾಕು ಕೆಸರುಗದ್ದೆ ಕ್ರೀಡಾಕೂಟ ಆರಂಭವಾಗುತ್ತದೆ. ಆದ್ರೆ ಇವರು ಮಾತ್ರ ಅಲ್ಲಿ ಹೋಗಿ ಸಮಯ ಹಾಳು ಮಾಡದೇ ಕೈ ಕೆಸರಾದ್ರೆ ಬಾಯಿ ಮೊಸರು ಅಂತಾ ಅಂತಾ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತೆ. ಈ ಮೂಲಕ ತಮಗೂ ದುಡಿಮೆ ಆಯಿತು ಹಾಗೇನೆೇ ಅವಶ್ಯಕತೆ ಇದ್ದ ರೈತರಿಗೂ ಕೃಷಿ ಕಾರ್ಯ ಸುಗಮ. ಹೀಗಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಾಗದಲ್ಲಿ ಈ ಮಹಿಳಾ ತಂಡ ರೈತರ ಪಾಲಿಗೆ ನಿಜಕ್ಕೂ ಸಂಜೀವಿನಿಯಾಗಿದೆ -ಹರೀಶ್ ಪಾಲೆಚ್ಚಾರ್
Published On - 6:24 pm, Fri, 3 July 20