ಲಾಕ್ಡೌನ್: ಈ ದಿನದಂದು KSRTC ಬಸ್ ಸಂಚಾರ ಇರಲ್ಲ
ಬೆಂಗಳೂರು: ಅಂತೂ ಇಂತು ಎಸ್ಎಸ್ಎಲ್ಸಿ ಪರೀಕ್ಷೆ ಇಂದಿಗೆ ಮುಗಿದಿದೆ. ಇನ್ನು ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣದತ್ತ ದೃಢ ಹೆಜ್ಜೆ ಇಡುತ್ತಿದ್ದು, ಸಮರೋಪಾದಿಯಲ್ಲಿ ಒಂದೊಂದಾಗಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶನಿವಾರ ರಾತ್ರಿ 8ಗಂಟೆಯಿಂದಲೇ ಬೆಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಮುಂದುವರಿದ ಭಾಗವಾಗಿ ಭಾನುವಾರದಿಂದ ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ಸರ್ಕಾರ ಸ್ಥಗಿತಗೊಳಿಸಿದೆ. ಸಂಡೆ ಲಾಕ್ಡೌನ್ ಇರುವ ಕಾರಣ ಅಂದು KSRTC ಬಸ್ಗಳ ಸಂಚಾರವಿರುವುದಿಲ್ಲ. ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೆ ಬಸ್ ಸೇವೆ ಲಭ್ಯವಿರಲ್ಲ. ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯಕ್ಕೆ […]
ಬೆಂಗಳೂರು: ಅಂತೂ ಇಂತು ಎಸ್ಎಸ್ಎಲ್ಸಿ ಪರೀಕ್ಷೆ ಇಂದಿಗೆ ಮುಗಿದಿದೆ. ಇನ್ನು ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣದತ್ತ ದೃಢ ಹೆಜ್ಜೆ ಇಡುತ್ತಿದ್ದು, ಸಮರೋಪಾದಿಯಲ್ಲಿ ಒಂದೊಂದಾಗಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶನಿವಾರ ರಾತ್ರಿ 8ಗಂಟೆಯಿಂದಲೇ ಬೆಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಮುಂದುವರಿದ ಭಾಗವಾಗಿ ಭಾನುವಾರದಿಂದ ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ಸರ್ಕಾರ ಸ್ಥಗಿತಗೊಳಿಸಿದೆ.
ಸಂಡೆ ಲಾಕ್ಡೌನ್ ಇರುವ ಕಾರಣ ಅಂದು KSRTC ಬಸ್ಗಳ ಸಂಚಾರವಿರುವುದಿಲ್ಲ. ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೆ ಬಸ್ ಸೇವೆ ಲಭ್ಯವಿರಲ್ಲ. ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯಕ್ಕೆ ಯಾವುದೇ ಬಸ್ಗಳ ಸಂಚಾರವಿರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
Published On - 7:07 pm, Fri, 3 July 20