ನಾಯಿ ದಾಳಿಯಿಂದ ಜಿಂಕೆ ರಕ್ಷಿಸಿ, ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಟ್ರು.. ಯುವಕರ ಕೆಲಸಕ್ಕೆ ಸ್ಥಳೀಯರ ಶ್ಲಾಘನೆ
ಚಿಕ್ಕಮಗಳೂರು: ನಾಯಿಗಳು ಕಚ್ಚಿ ಅಸ್ವಸ್ಥಗೊಂಡಿದ್ದ ಜಿಂಕೆಗೆ ಚಿಕಿತ್ಸೆ ಕೊಡಿಸಿ ಯುವಕರು ಮಾನವೀಯತೆ ಮೆರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಮೀಪದ ಕಾಡಿನಿಂದ ಕಾಪಿತೋಟದ ಕಡೆಗೆ ಬಂದಿದ್ದ ಜಿಂಕೆಯನ್ನು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಈ ವೇಳೆ ಸ್ಥಳೀಯರು ನಾಯಿ ದಾಳಿಯನ್ನು ತಪ್ಪಿಸಿ, ಜಿಂಕೆಗೆ ಎದುರಾಗಿದ್ದ ಪ್ರಾಣಭಯವನ್ನು ದೂರ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪ್ರವೀಣ್ ಪೂಜಾರಿ ನೇತೃತ್ವದ ಶಿವಗಿರಿ ಯುವಕರ ತಂಡ, ಜಿಂಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆ […]

ಚಿಕ್ಕಮಗಳೂರು: ನಾಯಿಗಳು ಕಚ್ಚಿ ಅಸ್ವಸ್ಥಗೊಂಡಿದ್ದ ಜಿಂಕೆಗೆ ಚಿಕಿತ್ಸೆ ಕೊಡಿಸಿ ಯುವಕರು ಮಾನವೀಯತೆ ಮೆರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಮೀಪದ ಕಾಡಿನಿಂದ ಕಾಪಿತೋಟದ ಕಡೆಗೆ ಬಂದಿದ್ದ ಜಿಂಕೆಯನ್ನು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಈ ವೇಳೆ ಸ್ಥಳೀಯರು ನಾಯಿ ದಾಳಿಯನ್ನು ತಪ್ಪಿಸಿ, ಜಿಂಕೆಗೆ ಎದುರಾಗಿದ್ದ ಪ್ರಾಣಭಯವನ್ನು ದೂರ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪ್ರವೀಣ್ ಪೂಜಾರಿ ನೇತೃತ್ವದ ಶಿವಗಿರಿ ಯುವಕರ ತಂಡ, ಜಿಂಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆ ಬಳಿಕ ಚೇತರಿಸಿಕೊಂಡ ಜಿಂಕೆಯನ್ನು ಜೀಪಿನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ನೀರು ಕುಡಿಸಿ ಕಾಡಿನಲ್ಲಿ ಬಿಟ್ಟಿದ್ದಾರೆ. ಸದ್ಯ ಚಿಂಕೆ ಕಾಡು ಸೇರಿದ್ದು ಶಿವಗಿರಿ ಯುವಕರ ತಂಡದ ಕೆಲಸಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ರು.







