Dating Appನಲ್ಲಿ ಟೈಂ ಪಾಸ್ ಮಾಡೊ ಯುವಕರೇ ಹುಷಾರ್! ಇಲ್ಲ ಅಂದ್ರೆ ಮಾನ ಮರ್ಯಾದೆ ಹರಾಜ್..

|

Updated on: Dec 18, 2020 | 10:32 AM

ಡೇಟಿಂಗ್ ಆ್ಯಪ್ ಮೂಲಕ‌ ಬ್ಲಾಕ್ ಮೇಲ್​ಗೆ ಒಳಗಾಗಿ ಟೆಕ್ಕಿಯೊಬ್ಬ 16 ಲಕ್ಷ ಹಣ ಕಳೆದುಕೊಂಡಿದ್ದಾನೆ.

Dating Appನಲ್ಲಿ ಟೈಂ ಪಾಸ್ ಮಾಡೊ ಯುವಕರೇ ಹುಷಾರ್! ಇಲ್ಲ ಅಂದ್ರೆ ಮಾನ ಮರ್ಯಾದೆ ಹರಾಜ್..
Follow us on

ಬೆಂಗಳೂರು: ಇತ್ತೀಚೆಗೆ ಯುವಕ ಯುವತಿಯರು ಡೇಟಿಂಗ್ ಆ್ಯಪ್ ಮೊರೆ ಹೋಗುವುದು ಸಾಮಾನ್ಯವಾಗಿದೆ. ತಮಗಿಷ್ಟರಾದವರ ಜೊತೆ ಡೇಟಿಂಗ್ ಮಾಡ್ತಾರೆ. ಆದರೆ ಇದರಿಂದ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಸ್ವಲ್ಪ ಯಾಮಾರಿದ್ರೂ ಮಾನ ಮರ್ಯಾದೆ ಹರಾಜ್ ಆಗುತ್ತೆ. ನಿಮ್ಮದೇ ಫೋಟೋಸ್‌ & ವಿಡಿಯೋ ತೋರಿಸಿ ಲಕ್ಷ-ಲಕ್ಷ ಹಣ ಪೀಕ್ತಾರೆ. ಡೇಟಿಂಗ್ ಆ್ಯಪ್ ಮೂಲಕ ಸಿಲಿಕಾನ್ ಸಿಟಿಯಲ್ಲಿ ಚಂದದ ಯುವತಿಯರ ಗ್ಯಾಂಗ್ ನಿಂದ ಚಂದ ವಸೂಲಿ ನಡೆಯುತ್ತಿದೆ. ತಾಜಾ ಪ್ರಕರಣದಲ್ಲಿ.. ಡೇಟಿಂಗ್ ಆ್ಯಪ್ ನಂಬಿ ಟೆಕ್ಕಿ 16 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಅಸಲಿಗೆ ಡೇಟಿಂಗ್ ಆ್ಯಪ್ ಮೂಲಕ‌ ಬ್ಲಾಕ್ ಮೇಲ್​ಗೆ ಒಳಗಾಗಿ ಟೆಕ್ಕಿಯೊಬ್ಬ 16 ಲಕ್ಷ ಹಣ ಕಳೆದುಕೊಂಡಿದ್ದಾನೆ. ವೈಟ್ ಫೀಲ್ಡ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಇತ್ತೀಚೆಗೆ ಡೇಟಿಂಗ್ ಆ್ಯಪ್ ಬಳಸುತ್ತಿದ್ದ ಈ ಆಪ್ ಮೂಲಕ ಶ್ವೇತಾ ಎಂಬ ಯುವತಿಯ ಪರಿಚಯವಾಗಿದೆ. ಟೆಕ್ಕಿ ಆಕೆಯೊಂದಿಗೆ ತನ್ನ ಮೊಬೈಲ್ ನಂಬರ್ ಹಂಚಿಕೊಂಡಿದ್ದ. ಬಳಿಕ ಆ ಯುವತಿ ನಮ್ಮ ಸೇವೆ ಬೇಕಾದರೆ 2 ಸಾವಿರ ಹಣವನ್ನ ಅನ್​ಲೈನ್​ನಲ್ಲಿ ಟ್ರಾನ್ಸ್‌ಫರ್ ಮಾಡುವಂತೆ ತಿಳಿಸಿದ್ದಳು‌‌. ಇದಕ್ಕೆ ಒಪ್ಪಿ 2 ಸಾವಿರ ಹಣವನ್ನ ಯುವತಿಗೆ ಅನ್​ಲೈನ್ ಮೂಲಕ ಟ್ರಾನ್ಸ್ ಫರ್ ಮಾಡಿದ್ದ. ಬಳಿಕ ಆ ಯುವತಿ ಟೆಕ್ಕಿಗೆ ಕರೆ ಮಾಡಿ ನಿಖಿತಾ ಎಂಬಾಕೆ ನಿಮ್ಮ ಸೇವೆಗೆ ಬರುತ್ತಾಳೆ ಎಂದಿದ್ದಳು.

ಟೆಕ್​ನಿಕ್​: ವಾಟ್ಸಪ್ ವಿಡಿಯೋ ಕಾಲ್​ನಲ್ಲಿ ಯುವತಿಯರು ಬೆತ್ತಲಾಗ್ತಾರೆ:
ಇದಾದ ಕೇಲವೇ ನಿಮಿಷಗಳಲ್ಲಿ ‌ನಿಖಿತಾ ಎಂಬ ಯುವತಿ ಕರೆ ಮಾಡಿ ಟೆಕ್ಕಿ ಜೊತೆ ಸಂಭಾಷಣೆ ನಡೆಸಿದ್ದಳು. ನಂತರ ಟೆಕ್ಕಿಗೆ ವಿಡಿಯೋ ಕಾಲ್ ಮಾಡುವಂತೆ ತಿಳಿಸಿದ್ದಾಳೆ. ಅದನ್ನೆ ಕಾಯುತ್ತಿದ್ದ ಟೆಕ್ಕಿ ಯುವತಿಯ ನಂಬರ್​ಗೆ ವಿಡಿಯೋ ಕಾಲ್ ಮಾಡಿದ್ದಾನೆ. ಈ ವೇಳೆ ವಾಟ್ಸಾಪ್ ವಿಡಿಯೋ ಕಾಲ್​ನಲ್ಲಿ ಯುವತಿಯರಿಬ್ಬರು ಬೆತ್ತಲಾಗಿದ್ದಾರೆ. ಬಳಿಕ ಟೆಕ್ಕಿಗೆ ಬಟ್ಟೆ ಬಿಚ್ಚುವಂತೆ ಹೇಳಿ ಪ್ರಚೋದನೆ ಮಾಡಿದ್ದಾರೆ. ಅದಕ್ಕೆ ಕತ್ತಲಲ್ಲಿ ಬೆತ್ತಲಾದ ಚಂದ್ರಮ ಅಂತ ಯುವತಿಯರ ಮಾತಿಗೆ ಮರುಳಾಗಿ ಟೆಕ್ಕಿ ಬಟ್ಟೆ ಬಿಚ್ಚಿದ್ದಾನೆ.

ಬೆತ್ತಲಾದ ಟೆಕ್ಕಿಗೆ ಕಾದಿತ್ತು ಶಾಕ್:
ಟೆಕ್ಕಿ ಬಟ್ಟೆ ಬಿಚ್ಚುತ್ತಿದ್ದಂತೆ ಚಾಲಾಕಿ ಯುವತಿಯರು ಸ್ಕ್ರೀನ್ ರೆಕಾರ್ಡ್ ಮಾಡಿದ್ದಾರೆ. ಬೆತ್ತಾಲದ ವೇಳೆ ಆ ಯುವತಿಯರು ಟೆಕ್ಕಿಯ ವಿಡಿಯೋ ರೆಕಾರ್ಡ್ ನಾ ಸ್ಕ್ರೀನ್ ಶಾರ್ಟ್ ತೆಗೆದಿದ್ದಾರೆ. ಬಳಿಕ ಕರೆ ಕಟ್ ಮಾಡಿ ಟೆಕ್ಕಿಗೆ ಬೆತ್ತಲೆ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ವರ್ಗಾವಣೆ ಮಾಡದಿದ್ದರೆ ನಿನ್ನ ಫೇಸ್ ಬುಕ್ , ಟ್ವಿಟರ್, ಇನ್​ಸ್ಟಾಗ್ರಾಮ್ ನಲ್ಲಿ ಬೆತ್ತಲೆ ವಿಡಿಯೋ ಫೋಟೋ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

ಬೆತ್ತಲಾದ ಟೆಕ್ಕಿಯ ಅಕೌಂಟ್ ಕೂಡ ಬೆತ್ತಲಾಯ್ತು.. 16 ಲಕ್ಷ ಮುಂಡಾಮೋಚ್ತು!
ಭಯಗೊಂಡ ಟೆಕ್ಕಿ ಇದು ತನ್ನ ಮಾನ ಮರ್ಯಾದೆ ಪ್ರಶ್ನೆ ಅಂತ ಆನ್​ಲೈನ್​ನಲ್ಲಿ ಹಣ ವರ್ಗಾವಣೆ ಮಾಡಿದ್ದಾನೆ. ಹಂತ ಹಂತವಾಗಿ 10 ದಿನಗಳಲ್ಲಿ ಟೆಕ್ಕಿಯಿಂದ ಬರೋಬ್ಬರಿ 16 ಲಕ್ಷವನ್ನು ಈ ಲಲನೆಯರು ಪೀಕಿದ್ದಾರೆ. ಬಳಿಕ ವಂಚನೆಗೊಳಾಗಾದ ಟೆಕ್ಕಿ ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಗೆ (Cyber Crime, Economic Offences & Narcotics –CEN) ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ಶುರು ಮಾಡಿದ್ದಾರೆ.

ಇರಲಿ ಎಚ್ಚರ, ಬೇಡ ಆತುರ.. Dating App ಬಳಸುವ ಮುನ್ನ ನೀವು ಓದಲೇಬೇಕಾದ ಸ್ಟೋರಿ ಇದು

ಅಶ್ಲೀಲ ವಿಡಿಯೋ ಕರೆ​ ಮಾಡಿ.. ಇನ್ಸ್​​ಪೆಕ್ಟರ್​​ಗೆ ಬ್ಲ್ಯಾಕ್​ಮೇಲ್ ಮಾಡಿದ ಅಪರಿಚಿತ ಯುವತಿ

Published On - 9:26 am, Fri, 18 December 20