ಗದಗದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ: ಅರಿವು ಮೂಡಿಸಲು ದಲಿತರು ಕುಡಿದ ಚಹಾ ಗ್ಲಾಸ್ ತೊಳೆದ ತಹಶೀಲ್ದಾರ್
ಗ್ರಾಮದಲ್ಲಿ ದಲಿತರಿಗೆ ಚಹಾ ಅಂಗಡಿಗೆ ಹೋಗುವುದು ಹಾಗೂ ಕ್ಷೌರ ಮಾಡುವುದನ್ನು ನಿಷೇಧ ಮಾಡಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ ದಲಿತರ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ ಚಹಾ ಅಂಗಡಿ ಬಂದ್ ಮಾಡಲಾಗುತ್ತಿತ್ತು.
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದ್ದು, ಅಸ್ಪೃಶ್ಯತೆ ನಿವಾರಣೆಗೆ ಮುಂದಾದ ತಹಶೀಲ್ದಾರ್ ಆಶಪ್ಪ ಪೂಜಾರ ಅವರು ದಲಿತರು ಕುಡಿದ ಚಹಾದ ಗ್ಲಾಸ್ ತೊಳೆದು ಸಾಮಾಜಿಕ ಅರಿವು ಮೂಡಿಸಿದ್ದಾರೆ.
ಗ್ರಾಮದಲ್ಲಿ ದಲಿತರಿಗೆ ಚಹಾ ಅಂಗಡಿಗೆ ಹೋಗುವುದು ಹಾಗೂ ಕ್ಷೌರ ಮಾಡುವುದನ್ನು ನಿಷೇಧ ಮಾಡಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ ದಲಿತರ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ ಚಹಾ ಅಂಗಡಿ ಬಂದ್ ಮಾಡಲಾಗುತ್ತಿತ್ತು. ಹೀಗಾಗಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಜಾಗೃತಿ ಸಭೆ ನಡೆಸಿದ್ದ ತಹಶೀಲ್ದಾರ್, ದಲಿತರು ಹಾಗೂ ಗ್ರಾಮದ ಹಿರಿಯರೊಂದಿಗೆ ಚಹಾದ ಅಂಗಡಿಗೆ ಹೋಗಿ ದಲಿತರು ಕುಡಿದ ಚಹಾದ ಕಪ್ಪು ತೊಳೆದು ಜಾಗೃತಿ ಮೂಡಿಸಿದ್ದಾರೆ. ಮಾರ್ಚ್ 2 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ದೇವಸ್ಥಾನದ ಕಟ್ಟೆ ಮೇಲೆ ಕೂತಿದ್ದಕ್ಕೆ ದಲಿತ ಯುವಕನ ಹತ್ಯೆ?