ಆಲಮೇಲ ಪಟ್ಟಣದ 2 ದೇವಸ್ಥಾನ ಮತ್ತು 8 ಮನೆಗಳಲ್ಲಿ ಕಳ್ಳತನ

| Updated By: ಸಾಧು ಶ್ರೀನಾಥ್​

Updated on: Dec 18, 2020 | 10:54 AM

ಕರಿದೇವರ‌ ಗುಡಿಯಿಂದ 40 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ ಬೆಳ್ಳಿ, ವೀರನಾಗಮ್ಮನ ಗುಡಿಯಿಂದ 40 ಗ್ರಾಂ ಚಿನ್ನ ಕಾಣೆಯಾಗಿದೆ. ಸುತ್ತಲಿನ ಮನೆಗಳಲ್ಲಿ ಒಟ್ಟು 80ಗ್ರಾಂ ಚಿನ್ನ ಮತ್ತು 3ಲಕ್ಷ ರೂಪಾಯಿ ನಗದು ಕಾಣೆಯಾಗಿದೆ

ಆಲಮೇಲ ಪಟ್ಟಣದ 2 ದೇವಸ್ಥಾನ ಮತ್ತು 8 ಮನೆಗಳಲ್ಲಿ ಕಳ್ಳತನ
ಆಲಮೇಲ ಪಟ್ಟಣದ ದೇವಸ್ಥಾನದಲ್ಲಿ ಕಳ್ಳತನ
Follow us on

ವಿಜಯಪುರ: ಸಿಂದಗಿ ತಾಲ್ಲೂಕಿನ ಆಲಮೇಲ ಪಟ್ಟಣದ ಕರಿದೇವ ಹಾಗೂ ವೀರನಾಗಮ್ಮ ದೇವಸ್ಥಾನದಲ್ಲಿದ್ದ ಚಿನ್ನಾಭರಣಗಳನ್ನು ಕದ್ದ ಬಳಿಕ, ಗ್ರಾಮದ 8 ಮನೆಗಳಲ್ಲಿ ಕಳ್ಳತನವೆಸಗಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ನಡೆದಿದೆ.

ಕರಿದೇವರ‌ ಗುಡಿಯಿಂದ 40 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ ಬೆಳ್ಳಿ, ವೀರನಾಗಮ್ಮನ ಗುಡಿಯಿಂದ 40 ಗ್ರಾಂ ಚಿನ್ನ ಕಾಣೆಯಾಗಿದೆ. ಸುತ್ತಲಿನ ಮನೆಗಳಲ್ಲಿ ಒಟ್ಟು 80 ಗ್ರಾಂ ಚಿನ್ನ ಮತ್ತು 3 ಲಕ್ಷ ರೂಪಾಯಿ ನಗದು ಕಾಣೆಯಾಗಿದೆ.

ಇತ್ತೀಚೆಗೆ ಅಪರಿಚಿತರ ತಂಡವೊಂದು ಪಟ್ಟಣದಲ್ಲಿ ಅಲೆದಾಡುತ್ತಿದ್ದರು. ಇದೇ ತಂಡ ಕಳ್ಳತನ ಮಾಡಿರಬಹುದು ಎಂಬ ಸಂಶಯ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್​ಐ ನಿಂಗಪ್ಪ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದೇವಸ್ಥಾನದ ಹುಂಡಿ ಲೂಟಿ, CCTV ಯಲ್ಲಿ ಸೆರೆಯಾಗಿದೆ ಕಳ್ಳನ ಕರಾಮತ್ತು