10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ, ಸೆಲ್ಫಿಗಾಗಿ ಮುಗಿಬಿದ್ದ ಜನ..

ಚಿಕ್ಕಮಗಳೂರು: 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ನರೇಂದ್ರ ಎಂಬುವರ ತೋಟದ ಮನೆಯಲ್ಲಿ ಅವಿತುಕೊಂಡಿದ್ದ ಕಾಳಿಂಗ ಸರ್ಪವನ್ನು ಕಂಡು ಜನ ಬೆಚ್ಚಿ ಬಿದ್ದಿದ್ದರು. ಭಾರೀ ಉದ್ದದ ಕಾಳಿಂಗ ಸರ್ಪವನ್ನು ಕಂಡ ಜನರಲ್ಲಿ ಆತಂಕ ಮನೆ ಮಾಡಿತ್ತು. ನಂತರ ಉರಗ ಪ್ರೇಮಿ ಸ್ನೇಕ್ ಆರೀಫ್​ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುರಕ್ಷಿತವಾಗಿ ಕಿಂಗ್ ಕೋಬ್ರಾ ಹಿಡಿದು ಚಾರ್ಮಾಡಿ ಘಾಟ್​ನ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ವೇಳೆ ಕೆಲ […]

10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ, ಸೆಲ್ಫಿಗಾಗಿ ಮುಗಿಬಿದ್ದ ಜನ..
Updated By: ಸಾಧು ಶ್ರೀನಾಥ್​

Updated on: Oct 07, 2020 | 3:17 PM

ಚಿಕ್ಕಮಗಳೂರು: 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ನರೇಂದ್ರ ಎಂಬುವರ ತೋಟದ ಮನೆಯಲ್ಲಿ ಅವಿತುಕೊಂಡಿದ್ದ ಕಾಳಿಂಗ ಸರ್ಪವನ್ನು ಕಂಡು ಜನ ಬೆಚ್ಚಿ ಬಿದ್ದಿದ್ದರು. ಭಾರೀ ಉದ್ದದ ಕಾಳಿಂಗ ಸರ್ಪವನ್ನು ಕಂಡ ಜನರಲ್ಲಿ ಆತಂಕ ಮನೆ ಮಾಡಿತ್ತು. ನಂತರ ಉರಗ ಪ್ರೇಮಿ ಸ್ನೇಕ್ ಆರೀಫ್​ಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುರಕ್ಷಿತವಾಗಿ ಕಿಂಗ್ ಕೋಬ್ರಾ ಹಿಡಿದು ಚಾರ್ಮಾಡಿ ಘಾಟ್​ನ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ವೇಳೆ ಕೆಲ ಸಾಹಸಿಗಳು ಕಾಳಿಂಗ ಸರ್ಪದ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ರು.