ಕೋವಿಡ್ ವೇಳೆ ಬಂದ್ ಆಗಲಿವೆಯಾ 10 ಸಾವಿರ ಖಾಸಗಿ ಶಾಲೆಗಳು?

|

Updated on: Nov 30, 2020 | 8:55 AM

ಮಹಾಮಾರಿ ಕೊರೊನಾ ಅದೆಷ್ಟೋ ಜನರ ಬದುಕನ್ನೇ ಅತಂತ್ರ ಮಾಡಿದೆ. ಶಾಲಾ-ಕಾಲೇಜುಗಳಿಲ್ಲದೆ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ನಡುವೆ ಈಗ ಸರ್ಕಾರದ ನಿರ್ಧಾರದಿಂದ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಕಂಟಕ ಎದುರಾಗಲಿದೆಯಾ ಎಂಬ ಅನುಮಾನ ಶುರುವಾಗಿದೆ.

ಕೋವಿಡ್ ವೇಳೆ ಬಂದ್ ಆಗಲಿವೆಯಾ 10 ಸಾವಿರ ಖಾಸಗಿ ಶಾಲೆಗಳು?
6 ರಿಂದ 9ನೇ ತರಗತಿ ಸ್ಥಗಿತ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಅದೆಷ್ಟೋ ಜನರ ಬದುಕನ್ನೇ ಅತಂತ್ರ ಮಾಡಿದೆ. ಶಾಲಾ-ಕಾಲೇಜುಗಳಿಲ್ಲದೆ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ನಡುವೆ ಈಗ ಸರ್ಕಾರದ ನಿರ್ಧಾರದಿಂದ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಕಂಟಕ ಎದುರಾಗಲಿದೆಯಾ ಎಂಬ ಅನುಮಾನ ಶುರುವಾಗಿದೆ.

ಶಾಲಾ ಕಟ್ಟಡಗಳಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆಯಲು ಶಿಕ್ಷಣ ಇಲಾಖೆ ಸುತ್ತೋಲೆ ಕಳಿಸಿದೆ. ನ್ಯಾಯಾಲಯದ ಆದೇಶದನ್ವಯ ಪ್ರಮಾಣ ಪತ್ರ ಪಡೆಯಬೇಕು. ಶಾಲಾ ಕಟ್ಟಡಗಳ ಗುಣಮಟ್ಟದ ಕುರಿತು ಪ್ರಮಾಣ ಪತ್ರ​ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ ಅಗ್ನಿಶಾಮಕ ಇಲಾಖೆಯಿಂದಲೂ ಪ್ರಮಾಣ ಪತ್ರ ಪಡೆಯಬೇಕು.

ಸುರಕ್ಷತಾ ಕ್ರಮಗಳನ್ನ ಪಾಲಿಸದ ಶಾಲೆಗಳ ಮೇಲೆ ಸರ್ಕಾರ ಚಾಟಿ ಬೀಸಿದೆ. ಸುರಕ್ಷತಾ ಕ್ರಮ ಅನುಸರಿಸದ ಹಾಗೂ ಪ್ರಮಾಣ ಪತ್ರ ಪಡೆಯದ ಶಾಲೆಗಳ ಅನುಮತಿ ರದ್ದಿಗೆ ನಿರ್ಧಾರ ಮಾಡಿದೆ. ಹೀಗಾಗಿ ಅನುದಾನ ರಹಿತ ಖಾಸಗಿ ಶಾಲೆ ಒಕ್ಕೂಟ ಪ್ರತಿಭಟನೆಗೆ ಮುಂದಾಗಿದೆ. ಈ ಬಗ್ಗೆ ಇಂದು ಮಧ್ಯಾಹ್ನ 12 ಗಂಟೆಗೆ ರುಪ್ಸ ಸಂಘಟನೆ ಸುದ್ದಿಗೋಷ್ಠಿ ಹಮ್ಮಿಕೊಂಡಿದೆ.

ಸರ್ಕಾರದ ಆದೇಶದ ವಿರುದ್ಧ ತಿರುಗಿ ಬಿದ್ದ ರುಪ್ಸ ಸಂಘಟನೆ:
ಇನ್ನು ಸರ್ಕಾರದ ಈ ನಿರ್ಧಾರಕ್ಕೆ ರುಪ್ಸ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಖಾಸಗಿ ಶಾಲೆಗಳಿಗೆ ಮಾತ್ರ ರೂಲ್ಸ್.. ಸರ್ಕಾರಿ ಶಾಲೆಗಳಿಗಿಲ್ಲ. ಖಾಸಗಿ ಶಾಲೆಗಳನ್ನ ಮುಚ್ಚಿಸೋ ಷಡ್ಯಂತ್ರ ನಡೆಯುತ್ತಿದ್ಯಾ? ಖಾಸಗಿ ಶಾಲೆಗಳನ್ನ ಮುಚ್ಚಿಸಿ ಸರ್ಕಾರಿ ಶಾಲೆಗಳ ಹೆಚ್ಚಿಸ್ತಾರಾ. ಸರ್ಕಾರದ ನಿಯಮದಿಂದ 10 ಸಾವಿರ ಶಾಲೆಗಳು ಬಂದ್ ಆಗಲಿವೆ ಎಂದು ಸರ್ಕಾರದ ನಿರ್ಧಾರಕ್ಕೆ ರುಪ್ಸ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.

Published On - 8:54 am, Mon, 30 November 20