AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ ವಿಶ್ಲೇಷಣೆ | ತೆಲಂಗಾಣ ಗೆಲ್ಲುವ ಬಿಜೆಪಿ ಕನಸಿಗೆ ‘ಭಾಗ್ಯಲಕ್ಷ್ಮಿ’ಯ ಮುನ್ನುಡಿ

ಭಾಗ್ಯಲಕ್ಷ್ಮಿ ದೇಗುಲವನ್ನು ಚುನಾವಣಾ ವೇದಿಕೆಯಾಗಿಸಿಕೊಂಡ ಬಿಜೆಪಿಯ ಪ್ರಯತ್ನ ಮತ್ತು ಹೈದರಾಬಾದ್​ ಹೆಸರನ್ನು ಭಾಗ್ಯನಗರವಾಗಿ ಮರು ನಾಮಕರಣ ಮಾಡುವ ಬಿಜೆಪಿ ನಾಯಕರ ಭರವಸೆಯ ಹಿಂದೆ 2023ರ ತೆಲಂಗಾಣ ವಿಧಾನಸಭೆ ಚುನಾವಣೆಯ ಕಾರ್ಯತಂತ್ರ ನಿಚ್ಚಳವಾಗಿರುವಂತೆ ಕಾಣಿಸುತ್ತದೆ.

ರಾಜಕೀಯ ವಿಶ್ಲೇಷಣೆ | ತೆಲಂಗಾಣ ಗೆಲ್ಲುವ ಬಿಜೆಪಿ ಕನಸಿಗೆ ‘ಭಾಗ್ಯಲಕ್ಷ್ಮಿ’ಯ ಮುನ್ನುಡಿ
ಭಾಗ್ಯಲಕ್ಷ್ಮಿ ದೇವಾಲಯಕ್ಕೆ ಅಮಿತ್ ಶಾ ಭೇಟಿ
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 30, 2020 | 2:48 PM

Share

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರಕ್ಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರವಷ್ಟೇ ಮಹಾನಗರಕ್ಕೆ ಭೇಟಿ ನೀಡಿದ್ದರು. ಬೇಗಂಪೇಟ್ ವಿಮಾನ ನಿಲ್ದಾಣದಿಂದ ನೇರವಾಗಿ ಹೈದರಾಬಾದ್​ ಓಲ್ಡ್​ ಸಿಟಿಯಲ್ಲಿರುವ ಭಾಗ್ಯಲಕ್ಷ್ಮಿ ದೇಗುಲಕ್ಕೆ ತೆರಳಿ, ಆರತಿ ಬೆಳಗಿ ಪ್ರಚಾರ ಸಭೆ, ರೋಡ್​ ಶೋಗಳಲ್ಲಿ ಪಾಲ್ಗೊಂಡರು.

ಅಮಿತ್​ ಶಾ ಭೇಟಿಯಿಂದ ದೇಶದ ಗಮನ ಸೆಳೆದ ಭಾಗ್ಯಲಕ್ಷ್ಮಿ ದೇಗುಲ ದೊಡ್ಡ ಸುದ್ದಿಯೂ ಆಯಿತು. ಪ್ರಸಿದ್ಧ ಸ್ಮಾರಕ ಚಾರ್​ಮಿನಾರ್​ಗೆ ಹೊಂದಿಕೊಂಡಂತೆ ಇರುವ ಈ ದೇಗುಲವನ್ನು ಈ ಬಾರಿಯ ಹೈದರಾಬಾದ್​ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದೆ. ಅಮಿತ್​ ಶಾ ಭೇಟಿಗೂ ಮೊದಲೇ ಬಿಜೆಪಿಯ ತೆಲಂಗಾಣ ಘಟಕ ಈ ದೇಗುಲವನ್ನು ಚುನಾವಣಾ ಕಥನದ (ಎಲೆಕ್ಷನ್ ನೆರೇಷನ್) ಭಾಗವಾಗಿಸಿಕೊಂಡಿತ್ತು.

ಹೈದರಾಬಾದ್​ ನಗರದ ಹೆಸರನ್ನು ‘ಭಾಗ್ಯ ನಗರ’ ಎಂದು ಬದಲಿಸುವುದಾಗಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಹಿರಿಯ ನಾಯಕರು ನೀಡಿದ್ದ ಹೇಳಿಕೆಗಳನ್ನೂ ಇದೇ ಹಿನ್ನೆಲೆಯಲ್ಲಿ ಗಮನಿಸಬೇಕಿದೆ.

ಸದಾ ಸುದ್ದಿಯಲ್ಲಿ ಭಾಗ್ಯಲಕ್ಷ್ಮಿ ದೇಗುಲ

ಈಚೆಗೆ ಸುರಿದ ಭಾರಿ ಮಳೆಯಿಂದ ಹೈದರಾಬಾದ್ ಜನರು ತತ್ತರಿಸಿದ್ದು ನಿಮಗೆ ನೆನಪಿರಬಹುದು. ಅಲ್ಲಿನ ಟಿಆರ್​ಎಸ್ ಸರ್ಕಾರವು ಪ್ರವಾಹ ಸಂತ್ರಸ್ತರಿಗೆ ₹10,000 ಕೋಟಿ ಪರಿಹಾರ ಘೋಷಿಸಿತು. ಈ ಪರಿಹಾರ ವಿತರಣೆ ನಿಲ್ಲಿಸಬೇಕೆಂದು ರಾಜ್ಯ ಚುನಾವಣಾ ಆಯೋಗವು ನಿರ್ದೇಶನ ನೀಡಿತು. ರಾಜ್ಯ ಚುನಾವಣಾ ಆಯೋಗದ ಈ ನಿರ್ದೇಶನಕ್ಕೆ ಬಿಜೆಪಿ ಸಲ್ಲಿಸಿದ ದೂರು ಕಾರಣ ಎಂಬ ಪುಕಾರಿನ ಜೊತೆಗೆ, ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದ ಸಂಜಯ್ ಬಂಡಿ, ಓಲ್ಡ್​ ಸಿಟಿಯಲ್ಲಿರುವ ಭಾಗ್ಯಲಕ್ಷ್ಮಿ ದೇಗುಲದಲ್ಲಿ ಈ ಕುರಿತು ಆಣೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದರು. ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದರು. ಕಳೆದ ಶುಕ್ರವಾರ ಸಂಜಯ್, ನೂರಾರು ಬೆಂಬಲಿಗರೊಂದಿಗೆ ಭಾಗ್ಯಲಕ್ಷ್ಮಿ ದೇಗುಲಕ್ಕೆ ಭೇಟಿ ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಪ್ರಧಾನಿ ನರೇಂದ್ರ ಮೋದಿ ಅವರ ಸೋದರ, ಪ್ರಹ್ಲಾದ್ ಮೋದಿ ಕಳೆದ ಗುರುವಾರ ಭಾಗ್ಯಲಕ್ಷ್ಮಿ ದೇಗುಲಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ನಗರಕ್ಕೆ ಭೇಟಿ ನೀಡಿದ್ದ ಆರ್​ಎಸ್​ಎಸ್​ ಸರಸಂಘಚಾಲಕ ಮೋಹನ್​ ಭಾಗವತ್ ಸಹ ಭಾಗ್ಯಲಕ್ಷ್ಮಿಗೆ ಪೂಜೆ ಸಲ್ಲಿಸಿದ್ದರು. ಹೈದರಾಬಾದ್​ಗೆ ಭೇಟಿ ನೀಡುವ ಬಿಜೆಪಿ ಮತ್ತು ಆರ್​ಎಸ್​ಎಸ್​ನ ಪ್ರಭಾವಿ ನಾಯಕರು ಭಾಗ್ಯಲಕ್ಷ್ಮಿ ದೇಗುಲಕ್ಕೆ ಭೇಟಿ ನೀಡುವ ಶಿಷ್ಟಾಚಾರ ಬೆಳೆಸಿಕೊಂಡಿದ್ದಾರೆ.

ಬಹುಕಾಲದ ವಿವಾದ ಅಯೋಧ್ಯೆ ರಾಮ ಮಂದಿರದಂತೆಯೇ ಹೈದರಾಬಾದ್​ನ ಭಾಗ್ಯಲಕ್ಷ್ಮಿ ದೇಗುಲವಿರುವ ಭೂಮಿಯೂ ಬಹುಕಾಲದಿಂದ ವಿವಾದಗ್ರಸ್ತವಾಗಿದೆ. ಚಾರ್​ಮಿನಾರ್​ಗೆ ಸೇರಿದ ಭೂಮಿಯಲ್ಲಿಯೇ ದೇಗುಲವಿದೆ ಎಂದು ಕೆಲವರು ಆರೋಪಿಸುತ್ತಾರೆ. ಹಲವರು ಇಂಥ ಆರೋಪಗಳನ್ನು ನಿರಾಕರಿಸಿ, ಚಾರ್​ಮಿನಾರ್​ಗಿಂತಲೂ ಮೊದಲು ಇಲ್ಲಿ ದೇಗುಲವಿತ್ತು ಎಂದು ವಾದಿಸುತ್ತಾರೆ.

ಆದರೆ ಭಾರತೀಯ ಪುರಾತತ್ವ ಇಲಾಖೆಯು ಮಾತ್ರ ಈ ದೇಗುಲವನ್ನು ಸ್ಥಳಾಂತರಿಸಬೇಕು ಎಂಬ ನಿಲುವಿಗೆ ಹಲವು ದಶಕಗಳಿಂದ ಅಂಟಿಕೊಂಡಿದೆ. ಚಾರ್​ಮಿನಾರ್​ಗೆ ಹೊಂದಿಕೊಂಡಂತೆ ದೇಗುಲವಿರುವ ಕಾರಣದಿಂದಾಗಿಯೇ ಚಾರ್​ಮಿನಾರ್​ ಈವರೆಗೆ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ ಎಂದು ಪುರಾತತ್ವ ಇಲಾಖೆ ಹೇಳಿದೆ.

ಭಾಗ್ಯಲಕ್ಷ್ಮಿ ದೇಗುಲ ಗರ್ಭಗೃಹವು ಚಾರ್​ಮಿನಾರ್​ನ ಗೋಡೆಗೆ ಹೊಂದಿಕೊಂಡಂತೆ ಇದೆ. ದೇಗುಲ ಕಟ್ಟಡದ ಕೆಲ ಭಾಗಗಳು ಮಿನಾರ ಪ್ರದೇಶದ ಒಳಗೆ ಬರುತ್ತದೆ. ಎರಡೂ ಕಟ್ಟಡಗಳ ನಡುವೆ ಸ್ಥಳವೇ ಇಲ್ಲ. ಚಾರ್​ಮಿನಾರ್ ಸಂರಕ್ಷಣೆಗೆ ಇದು ಹಲವು ಸವಾಲುಗಳನ್ನು ಒಡ್ಡಿದೆ ಎಂಬ ಪುರಾತತ್ವ ಇಲಾಖೆ ಅಧಿಕಾರಿಗಳ ಹೇಳಿಕೆಯನ್ನು ದಿ ನ್ಯೂಸ್​ ಮಿನಟ್ ಜಾಲತಾಣ ವರದಿ ಮಾಡಿದೆ.

2012ರಲ್ಲಿ ದಿ ಹಿಂದೂ ಪತ್ರಿಕೆಯೂ ಎರಡು ಚಿತ್ರಗಳನ್ನು ಮುದ್ರಿಸಿತ್ತು. 60 ವರ್ಷ ಹಳೆಯದು ಎನ್ನಲಾದ ಚಿತ್ರದಲ್ಲಿ ಚಾರ್​ಮಿನಾರ್ ಸಮೀಪ ಭಾಗ್ಯಲಕ್ಷ್ಮಿ ದೇಗುಲ ಕಾಣಿಸುತ್ತಿರಲಿಲ್ಲ. ಚಾರ್​ಮಿನಾರ್​ಗಿಂತಲೂ ಭಾಗ್ಯಲಕ್ಷ್ಮಿ ದೇಗುಲ ಹಳೆಯದು ಎನ್ನುವವರು ಈ ಚಿತ್ರದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದರು.

2023ಕ್ಕೆ ಸಿದ್ಧತೆ ಹೈದರಾಬಾದ್​ ಅನ್ನು ಭಾಗ್ಯ ನಗರ (Bhagya Nagar) ಎಂದೇ ತಮ್ಮ ಭಾಷಣಗಳಲ್ಲಿ ಉಲ್ಲೇಖಿಸುವ ಬಿಜೆಪಿ ನಾಯಕರು, ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದ ಹೆಸರು ಬದಲಿಸುವ ಭರವಸೆ ನೀಡಿದ್ದಾರೆ. ಆದರೆ ಊರಿನ ಹೆಸರು ಬದಲಿಸಲು ಮಹಾನಗರಪಾಲಿಕೆ ನಿರ್ಣಯ ಮಂಡಿಸಿ, ಅನುಮೋದಿಸಿ, ರಾಜ್ಯ ಸರ್ಕಾರಕ್ಕೆ ಕಳಿಸಿಕೊಡಬಹುದು. ಅದನ್ನು ಒಪ್ಪುವುದು ಅಥವಾ ಬಿಡುವುದು ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರ.

ಈ ವಿಚಾರವನ್ನು ಗಮನದಲ್ಲಿಸಿರಿಕೊಂಡು ವಿಶ್ಲೇಷಿಸಿದರೆ, ಭಾಗ್ಯಲಕ್ಷ್ಮಿ ದೇಗುಲವನ್ನು ಚುನಾವಣಾ ವೇದಿಕೆಯಾಗಿಸಿಕೊಂಡ ಬಿಜೆಪಿಯ ಪ್ರಯತ್ನ ಮತ್ತು ಹೈದರಾಬಾದ್​ ಹೆಸರನ್ನು ಭಾಗ್ಯನಗರವಾಗಿ ಮರು ನಾಮಕರಣ ಮಾಡುವ ಬಿಜೆಪಿ ನಾಯಕರ ಭರವಸೆಯ ಹಿಂದೆ 2023ರ ತೆಲಂಗಾಣ ವಿಧಾನಸಭೆ ಚುನಾವಣೆಯ ಕಾರ್ಯತಂತ್ರ ನಿಚ್ಚಳವಾಗಿರುವಂತೆ ಕಾಣಿಸುತ್ತದೆ.

ಇನ್ನಷ್ಟು… ಹೈದರಾಬಾದ್​ಗೆ ನವಾಬ ನಿಜಾಮರ ಡೈನಾಸ್ಟಿ ಸಾಕು, ಬಿಜೆಪಿಯ ಡೆಮಾಕ್ರಸಿ ಬೇಕು: ಅಮಿತ್ ಶಾ ಹೈದರಾಬಾದ್​ನ ಪುನರುತ್ಥಾನ ಬಿಜೆಪಿಯಿಂದ ಮಾತ್ರ ಸಾಧ್ಯ: ಅಮಿತ್ ಶಾ ಹೈದರಾಬಾದ್​ ಪಾಲಿಕೆ ಚುನಾವಣೆ: ಸಚಿವ ಸುಧಾಕರ್ ಉಸ್ತುವಾರಿಯಲ್ಲಿ ರೆಡಿಯಾಯ್ತು ರಣತಂತ್ರ ಹೈದರಾಬಾದ್​ಗೆ ಇವತ್ತು ಗೆದ್ದರೆ ಮಾತ್ರ ಮುಂದೆ ಸಾಗುವ ಅವಕಾಶ ಸಿಗಬಹುದು

Published On - 2:35 pm, Mon, 30 November 20

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್