ತಮಿಳುನಾಡಲ್ಲಿ ಡಿ. 31ರವರೆಗೂ ಲಾಕ್​ಡೌನ್​; 15 ರಿಂದ ಮರೀನಾ ಬೀಚ್​ ಪ್ರವೇಶಕ್ಕೆ ಅನುಮತಿ, ಆದ್ರೆ ಷರತ್ತು ಅನ್ವಯ

ಡಿಸೆಂಬರ್​ 7ರಿಂದ ಪದವಿಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಲಿದೆ ಮತ್ತು ಡಿ.15ರ ನಂತರ ಪ್ರವಾಸಿ ತಾಣ ಮರೀನಾ ಬೀಚ್​ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ತಮಿಳುನಾಡಲ್ಲಿ ಡಿ. 31ರವರೆಗೂ ಲಾಕ್​ಡೌನ್​; 15 ರಿಂದ ಮರೀನಾ ಬೀಚ್​ ಪ್ರವೇಶಕ್ಕೆ ಅನುಮತಿ, ಆದ್ರೆ ಷರತ್ತು ಅನ್ವಯ
ಮರೀನಾ ಬೀಚ್​ (ಸಾಂದರ್ಭಿಕ ಚಿತ್ರ)
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Nov 30, 2020 | 12:04 PM

ಚೆನ್ನೈ: ಬಹುತೇಕ ರಾಜ್ಯ ಸರ್ಕಾರಗಳು ಲಾಕ್​ಡೌನ್ ತೆರವುಗೊಳಿಸಿ ಅನ್​ಲಾಕ್​ ಹಂತಗಳಲ್ಲಿ ಒಂದೊಂದೇ ಚಟುವಟಿಕೆಗಳನ್ನು ಪ್ರಾರಂಭಿಸಿವೆ. ಆದರೆ ಕಂಟೇನ್​ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿವೆ. ಈ ಮಧ್ಯೆ, ತಮಿಳುನಾಡು ಸರ್ಕಾರ ಸದ್ಯ ಲಾಕ್​ಡೌನ್ ನಿರ್ಬಂಧವನ್ನು ತೆಗೆಯುವುದಿಲ್ಲ ಎಂದು ಹೇಳಿದೆ.

ತಮಿಳುನಾಡಿನಲ್ಲಿ ಡಿ. 31ರವರೆಗೂ ಲಾಕ್​ಡೌನ್​ ವಿಸ್ತರಿಸಿ ಮುಖ್ಯಮಂತ್ರಿ ಇ.ಕೆ. ಪಳಿನಿಸ್ವಾಮಿ ಆದೇಶ ಹೊರಡಿಸಿದ್ದಾರೆ. ಹಾಗೇ ಡಿಸೆಂಬರ್​ 7ರಿಂದ ಪದವಿಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಲಿದೆ ಮತ್ತು ಡಿ. 15ರ ನಂತರ ಪ್ರವಾಸಿ ತಾಣ ಮರೀನಾ ಬೀಚ್​ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.

ಆದರೆ ದಿನದಲ್ಲಿ 200 ಜನರಷ್ಟೇ ಅಲ್ಲಿ ಸೇರಬಹುದು. ಹಾಗೇ, ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳಗಳನ್ನು ಪ್ರಾರಂಭಿಸಲಾಗುವುದು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಮಾಸ್ಕ್​, ಸಾಮಾಜಿಕ ಅಂತರ ನಿಯಮಪಾಲನೆಯಂತಹ ಷರತ್ತುಗಳು ಕಡ್ಡಾಯವಾಗಿ ಅನ್ವಯಿಸುತ್ತವೆ ಎಂದು ಹೇಳಿದೆ.

ಒಂದು ದಿನದಲ್ಲಿ 9 ಸೋಂಕಿತರು ಸಾವು ತಮಿಳುನಾಡಿನಲ್ಲಿ ಭಾನುವಾರ ಒಂದೇ ದಿನ 1,459 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,80,505ಕ್ಕೆ ಏರಿಕೆಯಾಗಿದೆ.

ಅನ್​ಲಾಕ್​ಗೆ ಅವಕಾಶ ಕೊಟ್ಟಿರುವ ಕೇಂದ್ರ ಸರ್ಕಾರ, ನಿರ್ಧಾರವನ್ನು ಆಯಾ ರಾಜ್ಯಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಗೇ ಬಿಟ್ಟಿದೆ. ಕರೊನಾ ಸೋಂಕು ಇನ್ನೂ ಪ್ರಸರಣ ಆಗುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್​ಮೆಂಟ್ ವಲಯಗಳಲ್ಲಿ ರಾತ್ರಿ ಕರ್ಪ್ಯೂ ಸೇರಿ ಮತ್ತಿತರ ನಿರ್ಬಂಧಗಳನ್ನು ಹೇರಬಹುದು.

ಆದರೆ ಕಂಟೇನ್​ಮೆಂಟ್ ಝೋನ್​ಗಳನ್ನು ಹೊರತುಪಡಿಸಿ ಬೇರೆಕಡೆಯಲ್ಲೂ ಲಾಕ್​ಡೌನ್​ ವಿಸ್ತರಣೆ ಮಾಡುವುದಿದ್ದರೆ ನಮ್ಮನ್ನು ಸಂಪರ್ಕಿಸಿ, ವಿವರಣೆ ನೀಡಬೇಕು ಎಂದು ಗೃಹ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಬಿಜೆಪಿ ಶಾಸಕಿ ಸಾವು; ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್​ ಓಂ ಬಿರ್ಲಾ ಸಂತಾಪ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್