ಹೊಸ ಅಧ್ಯಯನ ಪ್ರಕಾರ ಚಯಾಪಚಯ ಕ್ರಿಯೆ ಅಥವಾ ಪಚನ ಕ್ರಿಯೆ ಸರಾಗವಾಗಿ ಆಗಲು ಬೆಳಿಗ್ಗಿನ ವ್ಯಾಯಾಮಕ್ಕಿಂತ ಸಂಜೆಯ ಹೊತ್ತು ವ್ಯಾಯಾಮ ಮಾಡುವುದು ಉತ್ತಮ ಎಂಬುದು ತಿಳಿದು ಬಂದಿದೆ. ಹೆಚ್ಚಿನ ತೂಕ ಹಾಗೂ ಕೊಬ್ಬಿನಾಂಶವನ್ನು ಹೊಂದಿರುವ ಪುರುಷರಲ್ಲಿ ಅಧ್ಯಯನ ಕೈಗೊಂಡಾಗ ಸಂಜೆಯ ಹೊತ್ತಿನ ವ್ಯಾಯಾಮದ ಮೂಲಕ ಆಹಾರದಲ್ಲಿನ ಜಿಡ್ಡಿನ ಅಂಶವನ್ನು ಕರಗಿಸಬಹುದು. ಈ ಮೂಲಕ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ ಎಂಬುದು ತಿಳಿದು ಬಂದಿದೆ.
ಬೆಳಿಗ್ಗಿನ ಉಪಹಾರ ಮಾಡುವ ಮುಂಚಿತವಾಗಿ ವ್ಯಾಯಾಮ ಮಾಡುವುದು ಕೊಬ್ಬಿನಾಂಶವನ್ನು ಕರಗಿಸುತ್ತದೆ ಎಂಬುದನ್ನು ಕೆಲವರು ಅರಿತಿದ್ದಾರೆ. ಆದರೆ ಅಧ್ಯಯನ ಪ್ರಕಾರ, ಆಹಾರದಲ್ಲಿ ಸೇವಿಸಿದ ಕೊಬ್ಬಿನಾಂಶಗಳು ಕರಗಲು ಹಾಗೂ ಚಯಾಪಚಯ ಕ್ರಿಯೆ ಸರಾಗವಾಗಲು ಸಂಜೆ ವೇಳೆ ವ್ಯಾಯಾಮ ಮಾಡುವುದು ಉತ್ತಮವಾಗಿದೆ.
ಕೊಬ್ಬಿ ಆಹಾರವನ್ನು ತಿನ್ನುವ ಪುರುಷರಿಗೆ ಮಾತ್ರ ಅಧ್ಯಯನ ನಡೆಸಲಾಯಿತು. ನಮಗಾಗುವ ಹಸಿವಿನಿಂದ ಹೃದಯ ಬಡಿತ, ದೇಹದ ಉಷ್ಣತೆ, ನಿದ್ರೆ, ಸ್ನಾಯು ಶಕ್ತಿ, ಕೋಶ ವಿಭಜನೆ, ಶಕ್ತಿ ಸಾಮರ್ಥ್ಯದ ಪ್ರಕ್ರಿಯೆಗಳ ಜತೆಗೆ ನಮ್ಮ ರಕ್ತದಲ್ಲಿನ ಸಕ್ಕರೆ ಏರುಪೇರಾಗಲು ಕಾರಣವಾಗುತ್ತದೆ.
ಈ ಕುರಿತಂತೆ ಮೇ ತಿಂಗಳಿನಲ್ಲಿ ಆಸ್ಟ್ರೇಲಿಯನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದ ಮೇರಿ ಮ್ಯಾಕಿಲೊಪ್ ಇನ್ಸ್ಟಿಟ್ಯೂಟ್ ಫಾರ್ ರಿಸರ್ಚ್ ಮತ್ತು ಇತರ ಸಂಸ್ಥೆಗಳು ಆಹಾರವನ್ನು ನಿಯಂತ್ರಿಸಲು ಯಾವ ಸಮಯದಲ್ಲಿ ವ್ಯಾಯಾಮ ಮಾಡುವುದು ಉತ್ತಮ ಎಂಬುದರ ಕುರಿತಾದ ಅಧ್ಯಯನಕ್ಕೆ ಮುಂದಾದವು. 24 ಕೆಜಿ ಹೆಚ್ಚುವರಿ ತೂಕ ಹೊಂದಿದ ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಹಾಗೆಯೇ ಫಿಟ್ನೆಸ್, ಕೊಲೆಸ್ಟ್ರಾಲ್, ರಕ್ತದೊತ್ತಡ ಕುರಿತಾಗಿ ಆಹಾರದ ನಿಯಂತ್ರಣ ಹೇಗೆ ಸಾಧ್ಯ ಎಂಬುದು ಅಧ್ಯಯನ ಒಳಗೊಂಡಿತ್ತು.
ಅಧ್ಯಯನಕ್ಕೆ ಒಳಪಡಿಸಿದ ಪುರುಷರನ್ನು ಬೆಳಿಗ್ಗಿನ ಸಮಯ ಹಾಗೂ ಸಂಜೆಯ ಸಮಯ ಎಂಬುದಾಗಿ ವಿಭಜನೆ ಮಾಡಿ ವ್ಯಾಯಾಮ ಮಾಡಿಸಲಾಯಿತು. ಸತತ ಐದು ದಿನಗಳ ಕಾಲ ಸಂಶೋಧಕರು ಕೆಲಸ ಮಾಡಿದರು. ಪರೀಕ್ಷೆಗೆ ಒಳಪಡಿಸಿದ ಬಳಿಕ ಸಂಜೆಯ ಹೊತ್ತು ವ್ಯಾಯಾಮ ಮಾಡಿದವರಲ್ಲಿ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಅಂಶ ಸಮತೋನವಾಗಿತ್ತು. ಆದರೆ ಬೆಳಿಗ್ಗೆ ವ್ಯಾಯಾಮ ಮಾಡಿದವರಲ್ಲಿ ಕೊಲೆಸ್ಟ್ರಾಲ್ ಬಹುಬೇಗ ಕರಗಲಿಲ್ಲ. ಮತ್ತು ರಕ್ತದಲ್ಲಿನ ಸಕ್ಕರೆ ಅಂಶ ಹತೋಟಿಗೆ ಬಂದಿರಲಿಲ್ಲ. ವ್ಯಾಯಮ ಸಮಯ ಏನೇ ಇರಲಿ ಅದು ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಚಯಾಪಚಯ ಕ್ರಿಯೆ ಸರಿಯಾಗಿ ಆಗಲು ಸಂಜೆಯ ವೇಳೆಯ ಸಮಯ ಒಳಿತು ಎಂಬುದು ಸಂಶೋಧನೆಯ ಮೂಲಕ ತಿಳಿದು ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ:
ಕೊರೊನಾ ರೋಗಿಗಳು ಉಸಿರಾಟದ ವ್ಯಾಯಾಮ ಮಾಡುವುದು ಹೇಗೆ?..ಇಲ್ಲಿದೆ ನೋಡಿ ಕೇಂದ್ರ ಸರ್ಕಾರ ಸೂಚಿಸಿದ ಕ್ರಮಗಳು
ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡಿ..ಆದರೆ ಈ ಮೂರು ಮಿಥ್ಯೆಗಳನ್ನು ನಂಬಬೇಡಿ