ಏ.20ರ ನಂತರ ಓಡಾಟಕ್ಕೆ ಪಾಸ್​ ಅವಶ್ಯಕತೆ ಇಲ್ವಂತೆ! ಇದೆಷ್ಟು ಸರಿ DCM ಸಾಹೇಬ್ರೇ?

|

Updated on: Apr 17, 2020 | 1:12 PM

ಬೆಂಗಳೂರು: ಏಪ್ರಿಲ್ 20ರ ನಂತರ ಓಡಾಟಕ್ಕೆ ಪಾಸ್ ಅವಶ್ಯಕತೆ ಬೀಳುವುದಿಲ್ಲ. ಆದರೆ ಲಾಕ್​ಡೌನ್ ಯಥಾಪ್ರಕಾರ ಮುಂದುವರಿಯಲಿದೆ. ಬೈಕ್​ನಲ್ಲಿ ಒಬ್ಬರು ಮಾತ್ರ ತೆರಳಲು ಅವಕಾಶ ನೀಡಲಾಗಿದೆ. ಕಾರಿನಲ್ಲಿ ಚಾಲಕ ಹಾಗೂ ಮತ್ತೊಬ್ಬರು ತೆರಳಲು ಮಾತ್ರ ಅವಕಾಶ ಕೊಡಲಾಗಿದೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಶೇ.50ರಷ್ಟು ಐಟಿ ನೌಕರರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಕಂಪನಿಗಳಲ್ಲಿ ಥರ್ಮಲ್ ಟೆಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಕೇಂದ್ರ ಸರ್ಕಾರ ಹೊರಡಿಸಿರುವ ಗೈಡ್​ಲೈನ್ಸ್​ಗಳನ್ನ ಪಾಲಿಸಬೇಕು. ಐಟಿ ಕಂಪನಿ ಬಸ್ ವ್ಯವಸ್ಥೆ ಕೇಳಿದ್ರೆ ಮಾತ್ರ BMTC ಬಸ್ […]

ಏ.20ರ ನಂತರ ಓಡಾಟಕ್ಕೆ ಪಾಸ್​ ಅವಶ್ಯಕತೆ ಇಲ್ವಂತೆ! ಇದೆಷ್ಟು ಸರಿ DCM ಸಾಹೇಬ್ರೇ?
Follow us on

ಬೆಂಗಳೂರು: ಏಪ್ರಿಲ್ 20ರ ನಂತರ ಓಡಾಟಕ್ಕೆ ಪಾಸ್ ಅವಶ್ಯಕತೆ ಬೀಳುವುದಿಲ್ಲ. ಆದರೆ ಲಾಕ್​ಡೌನ್ ಯಥಾಪ್ರಕಾರ ಮುಂದುವರಿಯಲಿದೆ. ಬೈಕ್​ನಲ್ಲಿ ಒಬ್ಬರು ಮಾತ್ರ ತೆರಳಲು ಅವಕಾಶ ನೀಡಲಾಗಿದೆ. ಕಾರಿನಲ್ಲಿ ಚಾಲಕ ಹಾಗೂ ಮತ್ತೊಬ್ಬರು ತೆರಳಲು ಮಾತ್ರ ಅವಕಾಶ ಕೊಡಲಾಗಿದೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ಶೇ.50ರಷ್ಟು ಐಟಿ ನೌಕರರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಕಂಪನಿಗಳಲ್ಲಿ ಥರ್ಮಲ್ ಟೆಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಕೇಂದ್ರ ಸರ್ಕಾರ ಹೊರಡಿಸಿರುವ ಗೈಡ್​ಲೈನ್ಸ್​ಗಳನ್ನ ಪಾಲಿಸಬೇಕು. ಐಟಿ ಕಂಪನಿ ಬಸ್ ವ್ಯವಸ್ಥೆ ಕೇಳಿದ್ರೆ ಮಾತ್ರ BMTC ಬಸ್ ಕಾಂಟ್ರಾಕ್ಟ್ ಪಡೆದು ಸ್ಯಾನಿಟೈಸ್ ಮಾಡಿದ ಬಸ್ ಅನ್ನು ನೀಡುತ್ತೇವೆ. ಸದ್ಯ ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಇನ್ನು ಎಷ್ಟು ದಿನ ಮುಂದುವರಿಯುತ್ತದೋ ಗೊತ್ತಿಲ್ಲ.

ಕೊರೊನಾ ವೈರಸ್ ನಿಯಂತ್ರಣಕ್ಕೆ ರ್ಯಾಪಿಡ್ ಟೆಸ್ಟ್ ಕಿಟ್​ಗಳು ಚೀನಾದಿಂದ ಬರಬೇಕಿದೆ. ಎರಡು ಲಕ್ಷ ಕಿಟ್ ಆರ್ಡರ್ ಮಾಡಿದ್ದೇವೆ. ಈ ತಿಂಗಳ ಅಂತ್ಯಕ್ಕೆ ಒಂದಿಷ್ಟು ಕಿಟ್ ಬರಲಿದೆ. ಬಾಕಿ ಉಳಿದ ಕಿಟ್​ಗಳು ನಂತರ ಬರುತ್ತವೆ ಎಂದು ಡಿಸಿಎಂ ತಿಳಿಸಿದರು.

Published On - 12:19 pm, Fri, 17 April 20