ಚೀನಾದಲ್ಲಿ ಸತ್ತಿದ್ದು 2.10 ಕೋಟಿ ಮಂದಿ, ಬರೀ 4,600 ಅಲ್ವಂತೆ! ಹೇಗೆ?
ವಾಷಿಂಗ್ಟನ್: ಮಹಾಮಾರಿ ಕೊರೊನಾ ತವರೂರು ಚೀನಾದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,600ಎಂದು ಹೇಳಿಕೆ ನೀಡಿದೆ. ಆದ್ರೆ ಅಮೆರಿಕದ ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ ಹೊರಬಂದಿದ್ದು, ಡ್ರ್ಯಾಗನ್ ನಾಡಿನಲ್ಲಿ ಕೇವಲ ಮೂರೇ ತಿಂಗಳಲ್ಲಿ ಕೊರೊನಾಗೆ 2 ಕೋಟಿ 10 ಲಕ್ಷ ಜನರು ಬಲಿಯಾಗಿದ್ದಾರೆ ಎನ್ನಲಾಗ್ತಿದೆ. ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಚೀನಾದಲ್ಲಿ ಬರೋಬ್ಬರಿ 2.10 ಕೋಟಿ ಜನ ಬಲಿಯಾಗಿದ್ದಾರೆ ಎಂದು ಜಗತ್ತನ್ನೇ ನಡುಗಿಸುವ ಅತೀ ಭೀಕರ ಮಾಹಿತಿಯನ್ನು ಅಮೆರಿಕದ ಸರ್ಕಾರಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ […]
ವಾಷಿಂಗ್ಟನ್: ಮಹಾಮಾರಿ ಕೊರೊನಾ ತವರೂರು ಚೀನಾದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,600ಎಂದು ಹೇಳಿಕೆ ನೀಡಿದೆ. ಆದ್ರೆ ಅಮೆರಿಕದ ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ ಹೊರಬಂದಿದ್ದು, ಡ್ರ್ಯಾಗನ್ ನಾಡಿನಲ್ಲಿ ಕೇವಲ ಮೂರೇ ತಿಂಗಳಲ್ಲಿ ಕೊರೊನಾಗೆ 2 ಕೋಟಿ 10 ಲಕ್ಷ ಜನರು ಬಲಿಯಾಗಿದ್ದಾರೆ ಎನ್ನಲಾಗ್ತಿದೆ.
ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಚೀನಾದಲ್ಲಿ ಬರೋಬ್ಬರಿ 2.10 ಕೋಟಿ ಜನ ಬಲಿಯಾಗಿದ್ದಾರೆ ಎಂದು ಜಗತ್ತನ್ನೇ ನಡುಗಿಸುವ ಅತೀ ಭೀಕರ ಮಾಹಿತಿಯನ್ನು ಅಮೆರಿಕದ ಸರ್ಕಾರಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಸೋಂಕಿತರ ಸಂಖ್ಯೆಯನ್ನು ಚೀನಾ ಮುಚ್ಚಿಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ರು.
ಇದಕ್ಕೆ ಕಾರಣ ಅಮೆರಿಕದಲ್ಲಿ ಕೊರೊನಾಗೆ ಇದುವರೆಗೂ 34 ಸಾವಿರ ಜನರು ಬಲಿಯಾಗಿದ್ರೆ, ಇಟಲಿಯಲ್ಲಿ 22 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಆದ್ರೆ, ಕೊರೊನಾ ವೈರಸ್ ಹುಟ್ಟಿದ ಚೀನಾದಲ್ಲಿ ಕೇವಲ 5 ಸಾವಿರು ಜನರು ಮೃತಪಟ್ಟಿದ್ದಾರೆ ಎಂದು ಚೀನಾ ಹೇಳಿತ್ತು. ಹಾಗಾಗಿ ಚೀನಾ ನೀಡಿದ ಅಂಕಿ ಸಂಖ್ಯೆ ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.
2019ರ ಡಿಸೆಂಬರ್ನಿಂದ 2020ರ ಮಾರ್ಚ್ ತನಕ 2ಕೋಟಿ 10 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂದು ಅಮೆರಿಕದ ಗುಪ್ತಚರರು ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ ಚೀನಾದಲ್ಲಿ 84 ಲಕ್ಷ ಲ್ಯಾಂಡ್ ಲೈನ್ ಫೋನ್ ಸಹ ಬಂದ್ ಆಗಿದ್ದವು. ಚೀನಾದಲ್ಲಿ ವ್ಯಕ್ತಿ ಸತ್ತ ಬಳಿಕ ಮಾತ್ರ ಸೆಲ್ ಫೋನ್ ಖಾತೆ ಬಂದ್ ಆಗುತ್ತೆ. ಏಕೆಂದ್ರೆ ಚೀನಾ ಸಂಪೂರ್ಣ ಡಿಜಿಟಲ್ ದೇಶ. ಚೀನಾದಲ್ಲಿ ಪ್ರತಿಯೊಂದು ಕೆಲಸವೂ ಮೊಬೈಲ್ನಿಂದ್ಲೇ ಆಗುತ್ತೆ.
Published On - 1:48 pm, Fri, 17 April 20