ನಮ್ಮ ವೀರ ಯೋಧರಿಗಾಗಿ ಈ ಸಲದ ದೀಪಾವಳಿ ಹಣತೆಯನ್ನು ಬೆಳಗಿಸುವ: ಪ್ರಧಾನಿ ಮೋದಿ | This Deepavali let’s light diyas for our brave soldiers: PM Modi
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೆ ದೇಶದ ನಿವಾಸಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಾರೆ. ಪ್ರಸಕ್ತ ದೀಪಾವಳಿ ಸಂದರ್ಭದಲ್ಲೂ ಜನರಿಗೆ ಶುಭಕೋರಿರುವ ಪ್ರಧಾನಿಗಳು ಈ ಸಲದ ದೀಪಾವಳಿ ಹಣತೆಯನ್ನು ದೇಶವನ್ನು ನಿರಂತರವಾಗಿ ಕಾಯುತ್ತಿರುವ ನಮ್ಮ ಹೆಮ್ಮೆಯ ಯೋಧರಿಗೋಸ್ಕರ ಬೆಳಗಿಸೋಣ ಅಂತ ಹೇಳಿದ್ದಾರೆ. ‘‘ನಮ್ಮ ವೀರ ಯೋಧರ ಅಸಾಧಾರಣ ಪರಾಕ್ರಮಕ್ಕೆ ಕೃತಜ್ಞತೆಗಳನ್ನು ಸಲ್ಲಿಸಲು ಶಬ್ದಗಳು ಸಾಕಾಗಲಾರವು. ಗಡಿಭಾಗಳಲ್ಲಿ ನಮ್ಮ ಸುರಕ್ಷತೆಗಾಗಿ ನಿಂತಿರುವ ಈ ಯೋಧರ ಕುಟುಂಬಗಳಿಗೂ ನಾವು ಕೃತಜ್ಞತೆಯುಳ್ಳವರಾಗಿರಬೇಕು,’’ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಹಬ್ಬ, ಹರಿದಿನ, […]

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೆ ದೇಶದ ನಿವಾಸಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಾರೆ. ಪ್ರಸಕ್ತ ದೀಪಾವಳಿ ಸಂದರ್ಭದಲ್ಲೂ ಜನರಿಗೆ ಶುಭಕೋರಿರುವ ಪ್ರಧಾನಿಗಳು ಈ ಸಲದ ದೀಪಾವಳಿ ಹಣತೆಯನ್ನು ದೇಶವನ್ನು ನಿರಂತರವಾಗಿ ಕಾಯುತ್ತಿರುವ ನಮ್ಮ ಹೆಮ್ಮೆಯ ಯೋಧರಿಗೋಸ್ಕರ ಬೆಳಗಿಸೋಣ ಅಂತ ಹೇಳಿದ್ದಾರೆ.
‘‘ನಮ್ಮ ವೀರ ಯೋಧರ ಅಸಾಧಾರಣ ಪರಾಕ್ರಮಕ್ಕೆ ಕೃತಜ್ಞತೆಗಳನ್ನು ಸಲ್ಲಿಸಲು ಶಬ್ದಗಳು ಸಾಕಾಗಲಾರವು. ಗಡಿಭಾಗಳಲ್ಲಿ ನಮ್ಮ ಸುರಕ್ಷತೆಗಾಗಿ ನಿಂತಿರುವ ಈ ಯೋಧರ ಕುಟುಂಬಗಳಿಗೂ ನಾವು ಕೃತಜ್ಞತೆಯುಳ್ಳವರಾಗಿರಬೇಕು,’’ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ.
ಹಬ್ಬ, ಹರಿದಿನ, ಉತ್ಸವ ಮೊದಲಾದ ಸಂದರ್ಭಗಳಲ್ಲಿ ಮಾತ್ರವಲ್ಲದೆ, ಸದಾಕಾಲ ಯೋಧರ ಸೇವೆ ಮತ್ತು ಅವರ ಕುಟುಂಬಗಳ ಬಗ್ಗೆ ನರೇಂದ್ರ ಮೋದಿಯವರಿಗಿಂತ ಜಾಸ್ತಿ ಬೇರೆ ಯಾವುದೇ ದೇಶದ ಮುಖಂಡ ಪ್ರಾಯಶಃ ಯೋಚಿಸಿರಲಾರ.




