AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ಕ್ರಿಕೆಟ್​ ಒಲಂಪಿಕ್ ಕ್ರೀಡೆ ಯಾಕಾಗಬಾರದು? ರಾಹುಲ್ ದ್ರಾವಿಡ್ : Dravid bats for T20 Cricket to be Olympic sport

ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಬ್ಯಾಟ್​ ಮಾಡುವಾಗ ಹೇಗೆ ಸ್ಟ್ರೇಟ್​ಬ್ಯಾಟ್ ಉಪಯೋಗಿಸುತ್ತಿದರೋ ಅವರ ಮಾತುಗಳು ಸ್ಟ್ರೇಟ್ ಫಾರ್ವರ್ಡ್. ನೇರ ಮಾತು ಮತ್ತು ಯಾವುದೇ ವಿಷಯವನ್ನು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನ ಅವರದ್ದು. ದ್ರಾವಿಡ್ ಸಕ್ರಿಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದರೂ ಕ್ರೀಡೆಗೆ ಹಲವಾರು ವಿಧಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೋಚ್ ಆಗಿ, ಐಪಿಎಲ್ ಟೀಮುಗಳಿಗೆ ಮೆಂಟರ್ ಅಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ವಿಷಯವಾಗಿ ಮಾತಾಡುತ್ತಿರುವುದಕ್ಕೆ ಕಾರಣಗಳೇ ಬೇಕಿಲ್ಲ. ಅದಕ್ಕೆ ಬೇಕಾದಷ್ಟು ಸರಕು ನಮಗೆ ಸಿಗುತ್ತದೆ. ಈಗಿನ […]

ಟಿ20 ಕ್ರಿಕೆಟ್​ ಒಲಂಪಿಕ್ ಕ್ರೀಡೆ ಯಾಕಾಗಬಾರದು? ರಾಹುಲ್ ದ್ರಾವಿಡ್ : Dravid bats for T20 Cricket to be Olympic sport
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 13, 2020 | 10:38 PM

Share

ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಬ್ಯಾಟ್​ ಮಾಡುವಾಗ ಹೇಗೆ ಸ್ಟ್ರೇಟ್​ಬ್ಯಾಟ್ ಉಪಯೋಗಿಸುತ್ತಿದರೋ ಅವರ ಮಾತುಗಳು ಸ್ಟ್ರೇಟ್ ಫಾರ್ವರ್ಡ್. ನೇರ ಮಾತು ಮತ್ತು ಯಾವುದೇ ವಿಷಯವನ್ನು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನ ಅವರದ್ದು.

ದ್ರಾವಿಡ್ ಸಕ್ರಿಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದರೂ ಕ್ರೀಡೆಗೆ ಹಲವಾರು ವಿಧಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೋಚ್ ಆಗಿ, ಐಪಿಎಲ್ ಟೀಮುಗಳಿಗೆ ಮೆಂಟರ್ ಅಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅವರ ವಿಷಯವಾಗಿ ಮಾತಾಡುತ್ತಿರುವುದಕ್ಕೆ ಕಾರಣಗಳೇ ಬೇಕಿಲ್ಲ. ಅದಕ್ಕೆ ಬೇಕಾದಷ್ಟು ಸರಕು ನಮಗೆ ಸಿಗುತ್ತದೆ. ಈಗಿನ ಸಂದರ್ಭವೇನೆಂದರೆ. ಟಿ20 ಕ್ರಿಕೆಟನ್ನು ಒಲಂಪಿಕ್ಸ್​ಗೆ ಸೇರಿಸಬೇಕೆಂದು ದ್ರಾವಿಡ್ ವಾದಿಸುತ್ತಿದ್ದಾರೆ.

ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯ ಮಾಲೀಕರಲ್ಲೊಬ್ಬರಾಗಿರುವ ಮನೋಜ್ ಬದಾಲೆ ಅವರ, ‘ಎ ನ್ಯೂ ಇನ್ನಿಂಗ್ಸ್’ ಪುಸ್ತಕ ಲಾಂಚಿನ ವರ್ಚುಅಲ್ ಸೆಮಿನಾರ್​ನಲ್ಲಿ ಭಾಗವಹಿಸಿದ್ದ ದ್ರಾವಿಡ್, ‘ಟಿ20 ಫಾರ್ಮಾಟ್ ಕ್ರಿಕೆಟ್ ಒಲಂಪಿಕ್ಸ್​ನಲ್ಲಿ ಒಂದು ಕ್ರೀಡೆಯಾಗಿ ಸೇರ್ಪಡೆಯಾದರೆ ಅದಕ್ಕಿಂತ ಸಂತೋಷ ಮತ್ತೇನಿದೆ? ಆದರೆ, ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅದಕ್ಕೇ ಆದ ಸವಾಲುಗಳಿವೆ. ಅದಕ್ಕೆ ನಿರ್ದಿಷ್ಟವಾದ ಕೆಲ ಸೌಲಭ್ಯಗಳು ಬೇಕಾಗುತ್ತವೆ,’ ಎಂದು ದ್ರಾವಿಡ್ ಹೇಳಿದರು.

ಮೊನ್ನೆಯಷ್ಟೇ ಸಂಪನ್ನಗೊಂಡ ಐಪಿಎಲ್ ಟೂರ್ನಿಯ ಅಭೂತಪೂರ್ವ ಯಶಸ್ಸಿಗೆ ಕ್ವಾಲಿಟಿ ಪಿಚ್​ಗಳೇ ಕಾರಣವೆಂದು ದ್ರಾವಿಡ್ ಹೇಳಿದರು.

‘‘ಈ ಸಲದ ಐಪಿಎಲ್ ಭರ್ಜರಿ ಯಶ ಕಂಡಿದ್ದು ಬಹಳ ಸಂತೋಷವಾಗಿದೆ. ಈ ಪ್ರಮಾಣದ ಯಶಸ್ಸು ಅದು ಕಾಣಲು ಸಾಧ್ಯವಾಗಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿನ ಕ್ವಾಲಿಟಿ ಪಿಚ್​ಗಳಿಂದ. ಸ್ವಲ್ಪ ಯೋಚಿಸಿ ನೋಡಿ, ಯುಎಈಯಂಥ ಪಿಚ್​ಗಳನ್ನು ಒಲಂಪಿಕ್ಸ್ ಆಯೋಜಿಸುವ ದೇಶ ಒದಗಿಸಬಹುದಾದರೆ, ಕ್ರಿಕೆಟ್ ಅನ್ನು ಯಾಕೆ ಸೇರಿಸಬಾರದು? ಕ್ರಿಕೆಟ್ ಹಾಗೆ ವಿಸ್ತರಣೆಯಾಗುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ಕ್ರಿಕೆಟ್​ಗೆ ಸಂಬಂಧಪಟ್ಟವರು, ಅದರ ಆಡಳಿತದಲ್ಲಿರುವವರು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡಬೇಕು,’’ ಎಂದು ದ್ರಾವಿಡ್ ಹೇಳಿದರು.