Dog Love: ಈ ನಾಯಿಗೆ ಕಿವುಡುತನವಿದೆ. ಆದರೂ ಇದರ ಪೋಷಕ ಇದರೊಂದಿಗೆ ಸಂಭಾಷಿಸುತ್ತಾನೆ. ಅದನ್ನು ಅರ್ಥ ಮಾಡಿಕೊಂಡು ನಾಯಿ ಅವನಿಗೆ ಪ್ರತಿಕ್ರಿಯಿಸುತ್ತದೆ. ಅರೆ, ಇದು ಹೇಗೆ ಸಾಧ್ಯ? ಅಚ್ಚರಿಯಾಗುತ್ತಿದೆಯೇ? ಅದಕ್ಕೆ ಅವನು ಸಂಜ್ಞಾಭಾಷೆ ಕಲಿಸಿದ್ದಾನೆ (Sign Language). ತನ್ನೊಂದಿಗೆ ಶಾಲೆಗಳಿಗೆ ಮತ್ತು ಇನ್ನಿತರೇ ಸ್ಥಳಗಳಿಗೆ ಕರೆದೊಯ್ಯುತ್ತಾನೆ. ಅಲ್ಲಿ ಅಂಗವೈಕಲ್ಯದ (Disability) ಬಗ್ಗೆ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಅರಿವು ಮೂಡಿಸುತ್ತಾನೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಶಾಲೆಯೊಂದಕ್ಕೆ ತನ್ನ ಪೋಷಕ ಕ್ರಿಸ್ಟೋಫರ್ನೊಂದಿಗೆ ಕೋಲ್ ಎಂಬ ಈ ನಾಯಿ ಶಾಲೆಯೊಂದಕ್ಕೆ ಹೋಗಿದೆ. ಮಗುವಿನೊಂದಿಗೆ ಈ ಮೂವರೂ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಈ ದೃಶ್ಯಗಳನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.
ಇದನ್ನೂ ಓದಿ : Viral Optical Illusion: ಚುರುಕು ಕಣ್ಣಿನವರು ಮಾತ್ರ ಇಲ್ಲಿ ಅಡಗಿರುವ ಆರನೇ ಬೆಕ್ಕನ್ನು ಕಂಡುಹಿಡಿಯಬಹುದು
‘ನೀವು ನಿಮ್ಮಲ್ಲಿ ನಂಬಿಕೆ ಇಟ್ಟರೆ ಏನು ಬೇಕಾದರೂ ಸಾಧ್ಯ ಎಂದು ಮಕ್ಕಳನ್ನು ಪ್ರೇರೇಪಿಸುವುದನ್ನು ನಾವು ಮಾಡುತ್ತಿದ್ದೇವೆ. ಅಂಗವೈಕಲ್ಯದ ಬಗ್ಗೆ ಪ್ರಪಂಚದ ಆಲೋಚನಾ ವಿಧಾನವನ್ನು ಬದಲಾಯಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಮ್ಮ ಸಾಮ್ಯತೆಗಳನ್ನು ಪರಸ್ಪರ ಹಂಚಿಕೊಂಡು ನಮ್ಮನ್ನು ನಾವು ಅನನ್ಯವಾಗಿಸಿಕೊಳ್ಳೋಣ’ ಎಂಬ ಕ್ಯಾಪ್ಷನ್ವುಳ್ಳ ಈ ವಿಡಿಯೋ ಅನ್ನು ಕೋಲ್ಗೆ ಮೀಸಲಾಗಿರುವ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ಮೂರು ದಿನಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ ಸುಮಾರು 8 ಲಕ್ಷ ಜನರು ನೋಡಿದ್ದಾರೆ. ಸುಮಾರು 1 ಲಕ್ಷ ಜನರು ಲೈಕ್ ಮಾಡಿದ್ದಾರೆ. ಅನೇಕರು ಇದು ತುಂಬಾ ಸ್ಫೂರ್ತಿದಾಯಕ ವಿಡಿಯೋ ಎಂದು ಪ್ರತಿಕ್ರಿಯಿಸಿದ್ದಾರೆ. ಕೋಲ್ ನೆಲಕ್ಕೆ ಉರುಳಿದಾಗ ಅವನ ಮುಖಭಾವ ಗಮನಿಸಿದಿರಾ ಎಂದು ಕೆಲವರು ಕೇಳಿದ್ಧಾರೆ. ನಿಮ್ಮ ಕಿಸ್ ಕೋಲ್ ಬೋಲ್ಡ್ ಓವರ್ ಎಂದಿದ್ದಾರೆ ಒಬ್ಬರು. ಮಕ್ಕಳಿಂದ ಆಹಾ ಓಹೋ ಎಂಬ ಉದ್ಗಾರ ಕೇಳುವುದು ಎಂಥ ಅದ್ಭುತ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಬಂಟಿ ಔರ್ ಬಬ್ಲಿ; ಸಹೋದರನೊಂದಿಗೆ ಬಾಲ್ಯದ ನೆನಪನ್ನು ಮರುಸೃಷ್ಟಿಸಿದ ವಧು
ಪ್ರೀತಿ ಮತ್ತು ಶಿಕ್ಷಣ ಈ ಎರಡನ್ನೂ ಕೇಂದ್ರೀಕರಿಸಿ ನೀವು ತೊಡಗಿಕೊಂಡಿರುವ ಈ ಪ್ರಯಾಣ ಬಹಳ ಚೆನ್ನಾಗಿದೆ, ಒಳ್ಳೆಯದಾಗಲಿ ನಿಮ್ಮಿಬ್ಬರಿಗೂ ಎಂದು ಅನೇಕರು ಹಾರೈಸಿದ್ದಾರೆ. ಇದು ತುಂಬಾ ಅಮೂಲ್ಯವಾದ ವಿಡಿಯೋ. ಇಂಥವರ ಸಂತತಿ ಹೆಚ್ಚಲಿ ಎಂದು ಹೇಳಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ