ತುಮಕೂರು ಹೆದ್ದಾರಿ 48ರಲ್ಲಿ 46 ಸಾವಿರ ಹಣ ಸಿಕ್ಕಿದೆ!

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಾವಿರಾರು ರೂ ಹಣ ಪತ್ತೆಯಾಗಿದೆ! ಜಿಲ್ಲೆಯ ಶಿರಾ ತಾಲೂಕಿನ ಉಜ್ಜನಕುಂಟೆ ಪೊಲೀಸ್ ಚೆಕ್ ಪೋಸ್ಟ್ ಬಳಿ ಈ ಹಣ ದೊರೆತಿದೆ. ಕಳ್ಳಂಬೆಳ್ಳ ಪೊಲೀಸರನ್ನು ಸಂಪರ್ಕಿಸಿ: ಕಳೆದ ಮೂರು ದಿನದ ಹಿಂದೆ ಹಣ ಸಿಕ್ಕಿದೆ. ಆದ್ರೆ ಈವರೆಗೂ ಹಣ ಯಾರದು ಅಂತಾ ತಿಳಿದಿಲ್ಲ. ಯಾರೋ‌ ಬೈಕ್ ನಲ್ಲಿ ಬಂದು ಬೀಳಿಸಿಕೊಂಡು ಹೋಗಿರಬಹುದು ಎನ್ನಲಾಗಿದೆ. ದೊರೆತಿರುವ ಮೊತ್ತ 46 ಸಾವಿರ ರೂಪಾಯಿ. ಸೂಕ್ತ ದಾಖಲೆ ನೀಡಿದರೆ ಹಣ ನೀಡಲು ಕ್ರಮ ಕೈಗೊಳ್ಳಲಾಗುವುದು. ನಮ್ಮನ್ನು ಸಂಪರ್ಕಿಸಿ […]

ತುಮಕೂರು ಹೆದ್ದಾರಿ 48ರಲ್ಲಿ 46 ಸಾವಿರ ಹಣ ಸಿಕ್ಕಿದೆ!
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: May 22, 2020 | 1:22 PM

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಾವಿರಾರು ರೂ ಹಣ ಪತ್ತೆಯಾಗಿದೆ! ಜಿಲ್ಲೆಯ ಶಿರಾ ತಾಲೂಕಿನ ಉಜ್ಜನಕುಂಟೆ ಪೊಲೀಸ್ ಚೆಕ್ ಪೋಸ್ಟ್ ಬಳಿ ಈ ಹಣ ದೊರೆತಿದೆ.

ಕಳ್ಳಂಬೆಳ್ಳ ಪೊಲೀಸರನ್ನು ಸಂಪರ್ಕಿಸಿ:
ಕಳೆದ ಮೂರು ದಿನದ ಹಿಂದೆ ಹಣ ಸಿಕ್ಕಿದೆ. ಆದ್ರೆ ಈವರೆಗೂ ಹಣ ಯಾರದು ಅಂತಾ ತಿಳಿದಿಲ್ಲ. ಯಾರೋ‌ ಬೈಕ್ ನಲ್ಲಿ ಬಂದು ಬೀಳಿಸಿಕೊಂಡು ಹೋಗಿರಬಹುದು ಎನ್ನಲಾಗಿದೆ. ದೊರೆತಿರುವ ಮೊತ್ತ 46 ಸಾವಿರ ರೂಪಾಯಿ. ಸೂಕ್ತ ದಾಖಲೆ ನೀಡಿದರೆ ಹಣ ನೀಡಲು ಕ್ರಮ ಕೈಗೊಳ್ಳಲಾಗುವುದು. ನಮ್ಮನ್ನು ಸಂಪರ್ಕಿಸಿ ಹಣ ಪಡೆಯಬಹುದು ಎಂದು ಕಳ್ಳಂಬೆಳ್ಳ ಪೊಲೀಸರು ತಿಳಿಸಿದ್ದಾರೆ.

Published On - 11:19 am, Fri, 22 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us